ಮೈಕ್ರೋಸಾಫ್ಟ್ ಮೈಕ್ರೋಸಾಫ್ಟ್ ಆಫೀಸ್ 2003ಕ್ಕೆ ಕನ್ನಡದ ಹೊದಿಕೆ ಲಭ್ಯವಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡರೆ ಆಫೀಸ್‌ನ ಬಹುಪಾಲು ಆದೇಶ ಮತ್ತು ಸಂದೇಶಗಳು ಕನ್ನಡ ಭಾಷೆಯಲ್ಲೇ ಬರುತ್ತವೆ. ಇದನ್ನು ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಎಂದು ಕರೆಯುತ್ತಾರೆ. ಇದರಲ್ಲಿ ದಿನನಿತ್ಯ ಬಳಕೆಗೆ ಬೇಕಾಗುವ 80% ಕನ್ನಡದ ಅನುಭವ ಬರುವಂತೆ ಅನುವಾದ ಮಾಡಲಾಗಿದೆ.
ಈ ಆಫೀಸ್ 2003ರ ಕನ್ನಡದ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅನ್ನು ಮೈಕ್ರೋಸಾಫ್ಟ್‌ನವರ ಅಂತರಜಾಲ ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅನ್ನು ಇನ್‌ಸ್ಟಾಲ್ ಮಾಡಿದಾಗ ಆಫೀಸ್ ತಂತ್ರಾಂಶಗುಚ್ಛದ ಎಲ್ಲ ತಂತ್ರಾಂಶಗಳನ್ನು ಒಮ್ಮೆ ಮುಚ್ಚಿ ಪುನ ಪ್ರಾರಂಭಿಸಬೇಕಾಗುತ್ತದೆ.
ಆಫೀಸ್ 2003ರ ಒಂದು ಘಟಕವಾಗಿರುವ ವರ್ಡ್ 2003ರನ್ನು ಕನ್ನಡದ ಹೊದಿಕೆಯಲ್ಲಿ ನೋಡಿದಾಗ ಕಾಣಸಿಗುವ ಒಂದು ಸ್ಕ್ರೀನ್‌ಶಾಟ್ ಇಲ್ಲಿದೆ. ಕೆಲವು ಆದೇಶಗಳನ್ನು ಇಲ್ಲಿ ಗಮನಿಸಬಹುದು. ಉದಾ – new = ಹೊಸ, open = ತೆರೆಯಿರಿ, close = ಮುಚ್ಚು, save = ಉಳಿಸು, exit = ನಿರ್ಗಮಿಸು, ಇತ್ಯಾದಿ. ಆದರೆ ಶಾರ್ಟ್‌ಕಟ್ ಕೀಲಿಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಉದಾಹರಣೆಗೆ ಇಂಗ್ಲಿಷಿನಲ್ಲಿ Save ಎಂಬುದರ ಶಾರ್ಟ್‌ಕಟ್ Ctrl-S ಆಗಿದೆ. ಕನ್ನಡದಲ್ಲೂ ಅದನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಕೇವಲ ಮೆನು ಆದೇಶ ಮಾತ್ರವಲ್ಲ, ಸಂವಾದಚೌಕಗಳೂ ಕನ್ನಡ ಭಾಷೆಯಲ್ಲಿ ಕಂಡುಬರುತ್ತವೆ.
ಆಫೀಸ್ ತಂತ್ರಾಂಶಗುಚ್ಛದ ಎಲ್ಲ ಪ್ರಮುಖ ತಂತ್ರಾಂಶ ಘಟಕಗಳಿಗೆ ಕನ್ನಡದ ಹೊದಿಕೆ ನೀಡಲಾಗಿದೆ. ಅವುಗಳೆಂದರೆ ಬಹುಪಾಲು ಮಂದಿ ಬಳಸುವ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಮತ್ತು ಔಟ್‌ಲುಕ್. ಈ ತಂತ್ರಾಂಶಘಟಕಗಳಿಗೆ ಈ ಕನ್ನಡ ಎಲ್‌ಐಪಿ ಲಭ್ಯವಿದೆ.
ಈಲ್ಲಿ ನೀಡಿರುವ ಚಿತ್ರವನ್ನು ಗಮನಿಸಿ. ಇದು ಎಕ್ಸೆಲ್‌ನಿಂದ ಪಡೆದ ಸ್ಕ್ರೀನ್‌ಶಾಟ್ ಆಗಿದೆ. ನಗದನ್ನು ನಮೂದಿಸುವಾಗ ಕನ್ನಡದ "ರೂ." ಎಂಬ ಸೌಲಭ್ಯವೂ ಇರುವುದನ್ನು ಗಮನಿಸಬಹುದು.
ಔಟ್‌ಲುಕ್‌ನಿಂದ ಪಡೆದ ಸ್ಕ್ರೀನ್‌ಶಾಟ್‌ನ್ನು ಗಮನಿಸಿ. ಇಲ್ಲಿ ಕಾರ್ಯಕ್ರಮವನ್ನು ಕನ್ನಡದಲ್ಲಿ ನಮೂಸಿದ್ದನ್ನೂ ನೋಡಬಹುದು.
ಇದೇ ರೀತಿ ಪವರ್‌ಪಾಯಿಂಟ್‌ನಲ್ಲೂ ಕನ್ನಡದಲ್ಲೇ ಆದೇಶ, ಮೆನುಗಳನ್ನು ನೋಡಬಹುದು