|
|
|
|
|
|
|
|
ವಿಂಡೋಸ್ 7ನಲ್ಲಿ ಏನೇನಿರುತ್ತದೆ?
|
ಮೈಕ್ರೋಸಾಫ್ಟ್‌ನ ಜನಪ್ರಿಯ ವಿಂಡೋಸ್ ಎಕ್ಸ್‌ಪಿ ಮತ್ತು ಮತ್ತು ಸುಧಾರಿತ ವಿಂಡೋಸ್ ವಿಸ್ತಾ ಆವೃತ್ತಿಗಳ
ಎಲ್ಲ ಧನಾತ್ಮಕ ಅಂಶಗಳನ್ನು ಒಳಗೊಂಡಿರುವ ವಿಂಡೋಸ್ 7, ಕಂಪ್ಯೂಟರ್ ಬಳಸುವುದನ್ನು ಸರಳವೂ, ಸುಲಭವೂ
ಆಗಿಸಿದೆ. ವಿಂಡೋಸ್ ಬಳಕೆದಾರರ ಸಲಹೆಗಳಿಗೆ ಸ್ಪಂದಿಸಿಯೇ ಮೈಕ್ರೋಸಾಫ್ಟ್ ಈ ಹೊಸ ಕಾರ್ಯಾಚರಣಾ ತಂತ್ರಾಂಶವನ್ನು
ಸಿದ್ಧಗೊಳಿಸಿದೆ.
|
|
ದಿನಬಳಕೆಯ ಕಾರ್ಯಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಇದರಲ್ಲಿ ಜಂಪ್ ಲಿಸ್ಟ್ (Jump Lists) ಎಂಬ
ಸುಲಭೋಪಾಯ ಹಾಗೂ ಕಾರ್ಯ ಪಟ್ಟಿ (Task Bar) ಮುನ್ನೋಟಗಳು ಕೂಡ ಸುಧಾರಿತ ರೂಪದಲ್ಲಿವೆ. ಇವನ್ನು ಅತಿವೇಗದ
ಕಾರ್ಯನಿರ್ವಹಣೆಗಾಗಿ ರೂಪಿಸಲಾಗಿದ್ದು, ನಿಮ್ಮ ಕಂಪ್ಯೂಟರ್ ನೀವು ಹೇಳಿದಂತೆ ಕೇಳುತ್ತದೆ ಎಂದು ಹೇಳಿದರೆ
ಕೂಡ ಉತ್ಪ್ರೇಕ್ಷೆಯಾಗಲಾರದು.
|
|
ಈ ವಿಂಡೋಸ್ 7ನಲ್ಲಿ 64-ಬಿಟ್ ಬೆಂಬಲದೊಂದಿಗೆ, ಅತ್ಯಾಧುನಿಕ ಕಾರ್ಯಸಾಮರ್ಥ್ಯವಿರುವ ಕಂಪ್ಯೂಟರ್‌ಗಳ
ಪೂರ್ಣ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದಾಗಿದೆ ಹಾಗೂ ಹೋಂ ಗ್ರೂಪ್ (Home Group), ವಿಂಡೋಸ್
ಮೀಡಿಯಾ ಸೆಂಟರ್ ಮತ್ತು ವಿಂಡೋಸ್ ಟಚ್ ಎಂಬ ವೈಶಿಷ್ಟ್ಯಗಳೆಲ್ಲವೂ ಹೊಚ್ಚ ಹೊಸ ತಂತ್ರಜ್ಞಾನದ ಅನುಭವವನ್ನು
ನಿಮಗೆ ನೀಡುತ್ತದೆ.
|
|
ಹಾಗಿದ್ದರೆ, ವಿಂಡೋಸ್ 7 ಬಗ್ಗೆ ತಿಳಿದುಕೊಂಡು ಮತ್ತು ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ಮಾಡುವ ಎಲ್ಲ
ಕೆಲಸ ಕಾರ್ಯಗಳನ್ನು ಹೇಗೆ ಸುಲಭವಾಗಿಸಬಹುದು ಎಂದು ಅರಿತುಕೊಳ್ಳೋಣ.
|
|
ಹೋಂ ಗ್ರೂಪ್ (HomeGroup): ಹೋಂ ಗ್ರೂಪ್ ಎಂಬ ವ್ಯವಸ್ಥೆಯು ಹೋಂ ನೆಟ್‌ವರ್ಕ್‌ನಲ್ಲಿ ಕಡತಗಳು ಹಾಗೂ
ಪ್ರಿಂಟರ್‌ಗಳನ್ನು ಯಾವ ರೀತಿ ಪರಸ್ಪರ ಹಂಚಿಕೊಳ್ಳಬೇಕು ಎಂಬ ಕುರಿತಾದ ದೊಡ್ಡ ಸಮಸ್ಯೆಯನ್ನು ನಿವಾರಿಸುತ್ತದೆ.
ವಿಂಡೋಸ್ 7 ನಲ್ಲಿ ಕಾರ್ಯಾಚರಿಸುವ ಎರಡು ಅಥವಾ ಎರಡಕ್ಕಿಂತ ಹೆಚ್ಚು ಕಂಪ್ಯೂಟರ್‌ಗಳನ್ನು ಸಂಪರ್ಕಿಸಿದರೆ
ಆಯಿತು, ಸಂಗೀತ, ಚಿತ್ರ, ವೀಡಿಯೋ ಮತ್ತು ದಾಖಲೆ ಕಡತಗಳನ್ನು ಸ್ವಯಂಚಾಲಿತವಾಗಿ ನಿಮ್ಮ ಮನೆಯವರೊಂದಿಗೆ
ಪರಸ್ಪರ ಹಂಚಿಕೊಳ್ಳಲು ಹೋಂ ಗ್ರೂಪ್ ನಿಮಗೆ ಸರಳ ಸಾಧ್ಯವಾಗಿಸುತ್ತದೆ.
|
|
ಹಾಗಿದ್ದರೆ ನಿಮ್ಮ ಖಾಸಗಿತನದ ಬಗ್ಗೆ ಆತಂಕವೇ? ಇದಕ್ಕೂ ಕೂಡ ಇಲ್ಲಿ ಪರಿಹಾರವಿದೆ. ಇದೇ ಕಾರಣಕ್ಕೆ
ಮೈಕ್ರೋಸಾಫ್ಟ್ ಈ ಹೋಂ ಗ್ರೂಪನ್ನು ಪಾಸ್‌ವರ್ಡ್‌ನೊಂದಿಗೆ ಸುರಕ್ಷಿತವಾಗುವಂತೆ ಅವಕಾಶ ಮಾಡಿಕೊಟ್ಟಿದೆ
ಮತ್ತು ಇದರ ಪೂರ್ಣ ನಿಯಂತ್ರಣ ನಿಮ್ಮ ಕೈಯಲ್ಲೇ ಇರುತ್ತದೆ. ಯಾವುದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕು,
ಯಾವುದನ್ನು ಗೌಪ್ಯವಾಗಿರಿಸಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು. ಅಷ್ಟು ಮಾತ್ರವಲ್ಲ,
ಬೇರೆಯವರು ನೋಡಿದರೂ, ಯಾವುದೇ ರೀತಿಯಲ್ಲಿಯೂ ಅದನ್ನು ಪರಿಷ್ಕರಿಸದಂತೆ, ಕಡತಗಳನ್ನು ‘ಕೇವಲ ಓದಲು’
(ರೀಡ್ ಓನ್ಲಿ) ಹೊಂದಿಸಬಹುದು.
|
|
ವಿಂಡೋಸ್ 7ನ ಯಾವುದೇ ಆವೃತ್ತಿಯಲ್ಲಿ ಕೂಡ ಹೋಂ ಗ್ರೂಪ್‌ಗೆ ನೀವು ಸೇರಬಹುದು, ಆದರೆ ಹೋಂ ಗ್ರೂಪ್
ಅನ್ನು ನೀವಾಗಿಯೇ ರಚಿಸುವ ವ್ಯವಸ್ಥೆ ಲಭ್ಯವಿರುವುದು ಮಾತ್ರ ಹೋಂ ಪ್ರೀಮಿಯಂ, ಪ್ರೊಫೆಶನಲ್, ಅಲ್ಟಿಮೇಟ್
ಅಥವಾ ಎಂಟರ್‌ಪ್ರೈಸ್ ಆವೃತ್ತಿಗಳಲ್ಲಿ ಮಾತ್ರ.
|
|
|
|
|
|
|
|
|
|