|
|
|
|
|
|
|
|
ನಿಮ್ಮ ಕಂಪ್ಯೂಟರಿನಲ್ಲಿ ವಿಂಡೋಸ್ 7 ಅಳವಡಿಸಿಕೊಳ್ಳುವ ಮುನ್ನ ಇಲ್ಲಿ ಗಮನಿಸಿ
|
ಅತ್ಯಂತ ವೇಗದ ಕಾರ್ಯಾಚರಣಾ ತಂತ್ರಾಂಶ ಎಂಬ ಹೆಗ್ಗಳಿಕೆಯುಳ್ಳ ವಿಂಡೋಸ್ 7 ಅನ್ನು ನಿಮ್ಮ ಈಗಿರುವ
ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಬಹುದು. ಅಥವಾ ಹಾಲಿ ಇರುವ ವಿಂಡೋಸ್ ಎಕ್ಸ್‌ಪಿ ಇಲ್ಲವೇ ವಿಸ್ತಾ
ಕಾರ್ಯಾಚರಣೆ ತಂತ್ರಾಂಶ ಇರುವಂತೆಯೇ, ಬೇರೆಯೇ ಡ್ರೈವ್‌ನಲ್ಲಿ ನೀವು ವಿಂಡೋಸ್ 7 ಅನ್ನು ಅನುಸ್ಥಾಪಿಸಿಕೊಳ್ಳಬಹುದು.
|
ಆದರೆ, ಈ ಆಧುನೀಕೃತ ಕಾರ್ಯಾಚರಣೆ ತಂತ್ರಾಂಶ ಅಳವಡಿಸಿಕೊಳ್ಳಲು ನಿಮ್ಮ ಕಂಪ್ಯೂಟರ್ ಕೂಡ ಸಿದ್ಧವಾಗಿರಬೇಕಲ್ಲವೇ?
ಹಾಗಿದ್ದರೆ ಅದಕ್ಕೆ ಅಗತ್ಯವಿರುವ ಹಾರ್ಡ್‌ವೇರ್ ಯಾವುದು ಎಂಬುದರ ಬಗ್ಗೆ ಈ ಕೆಳಗೆ ಪಟ್ಟಿ ನೀಡಲಾಗಿದೆ.
- 1 ಗಿಗಾಹರ್ಟ್ಜ್ (GHz) ಅಥವಾ ಹೆಚ್ಚು ವೇಗದ 32-ಬಿಟ್ (x86) ಅಥವಾ 64-ಬಿಟ್ (x64) ಪ್ರೊಸೆಸರ್
- 1 ಗಿಗಾಬೈಟ್ RAM (32-ಬಿಟ್) ಅಥವಾ 2 ಜಿಬಿ RAM (64-ಬಿಟ್)
- ಅನುಸ್ಥಾಪನೆಗೆ 16 ಜಿಬಿ (32-ಬಿಟ್‌ಗೆ) ಅಥವಾ 20 ಜಿಬಿ (64 ಬಿಟ್‌ಗೆ) ಲಭ್ಯ ಹಾರ್ಡ್ ಡಿಸ್ಕ್ ಜಾಗ
- 1.0 ಅಥವಾ ಉನ್ನತ ಮಟ್ಟದ WDDM ಇರುವ ಡೈರೆಕ್ಟ್-ಎಕ್ಸ್-9 ಗ್ರಾಫಿಕ್ಸ್ ಸಾಧನ.
|
ಇದಕ್ಕೆ ಪೂರಕವಾಗುವ ಮತ್ತಷ್ಟು ಅಂಶಗಳೆಂದರೆ:
- ಇಂಟರ್ನೆಟ್ ಲಭ್ಯತೆ (ಗಮನಿಸಿ, ಇದಕ್ಕೆ ಶುಲ್ಕಗಳು ಅನ್ವಯವಾಗಬಹುದು)
- ನೀವು ಆಯ್ದುಕೊಳ್ಳುವ ವೀಡಿಯೋದ ರೆಸೊಲ್ಯುಶನನ್ನು ಅವಲಂಬಿಸಿ, ವೀಡಿಯೋ ಪ್ಲೇಬ್ಯಾಕ್ ಅತ್ಯುತ್ತಮವಾಗಿರಬೇಕಾದರೆ,
ಅದಕ್ಕೆ ಹೆಚ್ಚುವರಿ ಸ್ಮರಣೆ ಪ್ರದೇಶ ಮತ್ತು ಆಧುನೀಕೃತ ಗ್ರಾಫಿಕ್ಸ್ ಯಂತ್ರಾಂಶಗಳ (ಹಾರ್ಡ್‌ವೇರ್)
ಅಗತ್ಯ ಬೀಳಬಹುದು.
- ಕೆಲವು ಗೇಮ್‌ಗಳಿಗೆ ಅಥವಾ ಪ್ರೋಗ್ರಾಂಗಳು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿಮ್ಮ ವಿಂಡೋಸ್‌ನಲ್ಲಿ
ಕಾಣಿಸಿಕೊಳ್ಳಲು ಅಥವಾ ಕಾರ್ಯಾಚರಿಸಲು, ಡೈರೆಕ್ಟ್-ಎಕ್ಸ್ 10 ಅಥವಾ ಹೆಚ್ಚಿನ ಮಟ್ಟಕ್ಕೆ ಹೊಂದಿಕೆಯಾಗುವ
ಗ್ರಾಫಿಕ್ಸ್ ಕಾರ್ಡ್‌ನ ಅವಶ್ಯಕತೆ ಇರಬಹುದು.
- ವಿಂಡೋಸ್ ಮೀಡಿಯಾ ಸೆಂಟರ್‌ನ ಕೆಲವೊಂದು ಕಾರ್ಯಗಳಿಗೆ ಟಿವಿ ಟ್ಯೂನರ್ ಕಾರ್ಡ್ ಅಥವಾ ಹೆಚ್ಚುವರಿ ತಂತ್ರಾಂಶಗಳ
ಅವಶ್ಯಕತೆ ಇರಬಹುದು.
- ವಿಂಡೋಸ್ ಟಚ್ ಮತ್ತು ಟ್ಯಾಬ್ಲೆಟ್ ಪಿಸಿಗಳಿಗೆ ನಿರ್ದಿಷ್ಟವಾದ ಹಾರ್ಡ್‌ವೇರ್ ಅಗತ್ಯವಿರುತ್ತದೆ
- ಹೋಂಗ್ರೂಪ್ ಬಳಸಬೇಕಿದ್ದರೆ ನೆಟ್‌ವರ್ಕ್ ಮತ್ತು ವಿಂಡೋಸ್ 7ನಲ್ಲಿ ಕಾರ್ಯಾಚರಿಸುತ್ತಿರುವ ಪಿಸಿಗಳು
ಬೇಕಾಗುತ್ತದೆ.
- ವಿಂಡೋಸ್ ಎಕ್ಸ್‌ಪಿ ಮೋಡ್ ಅನ್ನು ವಿಂಡೋಸ್ 7ರಲ್ಲಿ ಬಳಸಬೇಕಿದ್ದರೆ, ಹೆಚ್ಚುವರಿಯಾಗಿ 1 ಜಿಬಿ RAM,
ಹೆಚ್ಚುವರಿಯಾಗಿ 15 ಜಿಬಿ ಹಾರ್ಡ್ ಡಿಸ್ಕ್ ಖಾಲಿ ಜಾಗ ಮತ್ತು ಇಂಟೆಲ್ –ವಿಟಿ ಅಥವಾ ಎಎಂಡಿ-ವಿ ಆನ್
ಆಗಿರುವ, ಹಾರ್ಡ್‌ವೇರ್ ವರ್ಚುವಲೈಸೇಶನ್ ಸಾಮರ್ಥ್ಯವಿರುವ ಪ್ರೊಸೆಸರ್‌ನ ಅಗತ್ಯವಿರುತ್ತದೆ.
- ಸಂಗೀತ ಮತ್ತು ಧ್ವನಿ ಸಮರ್ಪಕವಾಗಿ ಕೇಳಲು ಸೂಕ್ತವಾದ ಆಡಿಯೋ ಔಟ್‌ಪುಟ್ ವ್ಯವಸ್ಥೆ ಬೇಕಾಗುತ್ತದೆ.
ಉತ್ಪನ್ನಗಳ ಕಾರ್ಯ ಮತ್ತು ಗ್ರಾಫಿಕ್‌ಗಳು ನಿಮ್ಮ ಸಿಸ್ಟಂನ ಕಾನ್ಫಿಗರೇಶನ್ ಆಧರಿಸಿ ಬದಲಾಗಬಹುದು.
ಕೆಲವು ವೈಶಿಷ್ಟ್ಯಗಳನ್ನು ಬಳಸಬೇಕಿದ್ದರೆ, ಆಧುನೀಕೃತ ಅಥವಾ ಹೆಚ್ಚುವರಿ ಹಾರ್ಡ್‌ವೇರ್‌ನ ಅಗತ್ಯವೂ
ಇರುತ್ತದೆ.
|
|
|
|
|
|
|
|
|
|