Microsoft’s Michael Kaplan on language computing
ಭಾಷಾ ಕಂಪ್ಯೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಮೈಕ್ರೋಸಾಫ್ಟ್‌ನ ಮೈಕೆಲ್ ಕಪ್ಲಾನ್
ಅವರೊಬ್ಬ ವಿದೇಶಿಯನಾಗಿರಬಹುದು ಮತ್ತು ಅವರಿಗೆ ಭಾರತೀಯ ಭಾಷೆಗಳನ್ನು ಮಾತನಾಡಲಾಗದಿರಬಹುದು. ಆದರೆ ಭಾರತೀಯ ಭಾಷಾ ಲಿಪಿಗಳು ಮತ್ತು ಅಕ್ಷರಗಳ ಬಗೆಗಿನ ಅವರ ಜ್ಞಾನದ ಅಳವನ್ನು ಕಂಡುಹಿಡಿಯುವು ಸುಲಭಸಾಧ್ಯವಿಲ್ಲ. ಅವರ ಈ ಸಾಧನೆ ಅಪೂರ್ವವಾದದ್ದು. ಇವರು ಮತ್ಯಾರಲ್ಲ. ಮೈಕೆಲ್ ಕಪ್ಲಾನ್. ಕಪ್ಲಾನ್ ಅವರು ಮೈಕ್ರೋಸಾಫ್ಟ್ ಕಾರ್ಪೋರೇಶನ್‌ನ ‘ವರ್ಲ್ಡ್ ರೆಡಿನೆಸ್ ಟೀಮ್’ನ ಪ್ರೋಗ್ರಾಮ್ ಮ್ಯಾನೇಜರ್. ಇವರು ದಶಕಗಳಿಗೂ ಅಧಿಕ ಕಾಲದಿಂದ ಭಾರತೀಯ ಭಾಷಾ ಕಂಪ್ಯೂಟಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತ ಸೇರಿದಂತೆ ವಿಶ್ವಾದ್ಯಂತದ ಸಮ್ಮೇಳನಗಳಲ್ಲಿ ಅಭಿಪ್ರಾಯ ಮಂಡಿಸಿರುವ ಇವರು ಅಂತರಾಷ್ಟ್ರೀಕರಣ ಹಾಗೂ ಪ್ರಾದೇಶೀಕೀಯತೆ ಕುರಿತ ತರಬೇತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅವರು ಇತ್ತೀಚೆಗೆ ಕೊಯಮುತ್ತೂರಿನಲ್ಲಿ ನಡೆದ ತಮಿಳು ಅಂತರಜಾಲ ಸಮ್ಮೇಳನದಲ್ಲಿ ಪಾಲ್ಗೊಳಲು ಆಗಮಿಸಿದ್ದರು. ಭಾರತೀಯ ಭಾಷಾ ಕಂಪ್ಯೂಟಿಂಗ್ ಮತ್ತು ಪ್ರಾದೇಶೀಕರಣಗಳ (localization) ಕುರಿತು ಇವರೊಂದಿಗೆ ಮಾತನಾಡುವ ಅಪರೂಪದ ಅವಕಾಶ ಭಾಷಾಇಂಡಿಯಾಗೆ ಲಭಿಸಿತು. ಅವರೊಂದಿಗಿನ ಸಂದರ್ಶನದ ಆಯ್ದಭಾಗ ಇಲ್ಲಿದೆ.
ಮೈಕೆಲ್ ಅವರೇ, ನಿಮ್ಮ ಸಂದರ್ಶನವನ್ನು ಪಡೆಯುವುದು ನಮಗೆ ಅತೀವ ಸಂತಸ ನೀಡಿದೆ. ಭಾಷಾ ಕಂಪ್ಯೂಟಿಂಗ್ ಕುರಿತಂತೆ ಆಸಕ್ತಿ ಇರುವ ಯಾರೇ ಆದರೂ ನಿವು ಬರೆಯುವ ಬ್ಲಾಗ್, 'Sorting it all Out' ಅನ್ನು ನಿರ್ಲಕ್ಷಿಸುವಂತಿಲ್ಲ. ಭಾರತೀಯ ಭಾಷೆಗಳು ಮತ್ತು ಅವುಗಳ ಲಿಪಿಗಳೊಂದಿಗೆ ನಿಮ್ಮ ಸಂಬಂಧದ ಕುರಿತು ದಯವಿಟ್ಟು ವಿವರಿಸುತ್ತೀರಾ?
ಎಲ್ಲಾ ಭಾಷೆಗಳು ಹಾಗೂ ಅವುಗಳ ಲಿಪಿಯನ್ನು ನಾನು ಇಷ್ಟಪಡುತ್ತೇನೆ. ನನಗೆ ಭಾರತೀಯ ಭಾಷೆಗಳನ್ನು ಓದಲಾಗದಿದ್ದರೂ, ನಾನು ಹಲವು ಭಾರತೀಯ ಭಾಷೆಗಳ ಯೂನಿಕೋಡ್ ಪ್ರಾಪರ್ಟಿಗಳ ಮೇಲೆ ಸಂಶೋಧನೆ ಮಾಡಿದ್ದೇನೆ. ಭಾರತೀಯ ಭಾಷಾ ಲಿಪಿಗಳ ಮೇಲಿನ ನನ್ನ ಪ್ರೀತಿಯಿಂದಾಗಿ ನಾನು ಭಾರತೀಯ ಭಾಷಾ ತಜ್ಞರೊಂದಿಗೆ ಸಂವಾದ ನಡೆಸಿದ್ದೇನೆ. INFITT ಜತೆಗಿನ ನನ್ನ ಸಂಪರ್ಕವೂ ಇಂತಹುದೇ ಆಗಿದೆ.
ತಮಿಳು ಕಂಪ್ಯೂಟಿಂಗ್ ಮತ್ತು ತಮಿಳು ಅಂತರಜಾಲದ ಅಭಿವೃದ್ಧಿ ಮತ್ತು ಬಳಕೆ ಕುರಿತು ಕಾಳಜಿ ಇರುವ ಎಲ್ಲಾ ವ್ಯಕ್ತಿಗಳು, ಸರಕಾರ, ನಿಗಮಗಳು ಹಾಗೂ ಅಂತರಜಾಲ ಸಮೂಹಗಳನ್ನು ಪ್ರತಿನಿಧಿಸಲು ಹುಟ್ಟುಹಾಕಲಾಗಿರುವ ಪ್ರಪ್ರಥಮ ಜಾಗತಿಕ ಸಂಘಟನೆ INFITT. ಯೂನಿಕೋಡ್ ಸಹಯೋಗವು INFITT ಅನ್ನು ತಮಿಳು ಅಂತರಜಾಲ ಪ್ರಪಂಚದಲ್ಲಿ ಪ್ರಧಾನ ಪಾತ್ರದಾರಿ ಎಂಬುದಾಗಿ ಪರಿಗಣಿಸಿದೆ ಮತ್ತು ಯೋನಿಕೋಡ್ ಸಹಯೋಗದಲ್ಲಿ INFITTನ ಶಿಫಾರಸ್ಸುಗಳನ್ನು ಜಾರಿಗೆ ತರುವುದರಲ್ಲಿ ನಾನು ಕಾರಣಕರ್ತನೆಂದು ಹೇಳಿಕೊಳ್ಳಲು ನನಗೆ ಹರ್ಷವಾಗುತ್ತದೆ.
ನಾನು ಮೈಕ್ರೋಸಾಫ್ಟ್‌ನ ವರ್ಲ್ಡ್ ರೆಡಿನೆಸ್ ತಂಡದಲ್ಲಿದ್ದೇನೆ ಮತ್ತು ಇದು ವಿಶ್ವ ಭಾಷೆಗಳ ಕಂಪ್ಯೂಟಿಂಗ್ ಪ್ರಯತ್ನದಲ್ಲಿ ತೊಡಗಿದೆ. ಮೈಕ್ರೋಸಾಫ್ಟ್‌ನಲ್ಲಿ ನಾವು ನಮ್ಮ ಉತ್ಪನ್ನಗಳನ್ನು ಪ್ರಾದೇಶೀಕರಣಗೊಳಿಸಿ ಅವುಗಳನ್ನು ಜನತೆಗೆ ತಲುಪಿಸಲು ಉತ್ಸುಕರಾಗಿದ್ದೇವೆ. ವಿಶ್ವಾದ್ಯಂತ ಬಹುತೇಕ ಮಂದಿ ಸಂವಹನಕ್ಕಾಗಿ ಇಂಗ್ಲೀಷೇತರ ಭಾಷೆಗಳನ್ನು ಬಳಸುತ್ತಾರೆಂಬುದು ನಮಗೆ ತಿಳಿದಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಹಾಗಾಗಿ ಮೈಕ್ರೋಸಾಫ್ಟ್ ಪ್ರಾದೇಶೀಕರಣದ ಪ್ರಯತ್ನ ಮಾಡುತ್ತಿದೆ. ಹಲವಾರು ಭಾರತೀಯ ಭಾಷೆಯ ಯೂನಿಕೋಡ್ ಫಾಂಟ್‌ಗಳನ್ನು ಬೆಂಬಲಿಸಲು ಪ್ರಥಮವಾಗಿ ಮೈಕ್ರೋಸಾಫ್ಟ್ ಆರಂಭಿಸಿತು ಎಂಬುದು ಕುತೂಹಲಕಾರಿ ಅಂಶ.
ಇದೀಗ ಪ್ರಾದೇಶೀಕರಣ ಯುಗ. ತಮ್ಮ ಉತ್ಪನ್ನಗಳನ್ನು ಪ್ರಾದೇಶೀಕರಣಗೊಳಿಸುವ ಕುರಿತು ಕಂಪೆನಿಗಳು ಬಹಳ ನಿರ್ದಿಷ್ಟವಾಗಿವೆ. ಮೈಕ್ರೋಸಾಫ್ಟ್ ಸಹ ತನ್ನ ಉತ್ಪನ್ನಗಳನ್ನು ಪ್ರಾದೇಶೀಕರಣಗೊಳಿಸಲು ಅಪರಿಮಿತವಾದ ಉಪಕ್ರಮವನ್ನು ಕೈಗೊಳ್ಳುತ್ತಿದೆ. ಹಾಗಾಗಿ, ಭಾರತದಲ್ಲಿ ಭಾಷಾ ಕಂಪ್ಯೂಟಿಂಗ್ ಮತ್ತು ಪ್ರಾದೇಶೀಕರಣ ಉಪಕ್ರಮಗಳ ಒಟ್ಟಾರೆ ಚಿತ್ರಣವನ್ನು ತಾವು ಹೇಗೆ ನೋಡುತ್ತೀರಿ?
ಕಂಪ್ಯೂಟರ್‌ಗಳಲ್ಲಿ ಇಂಗ್ಲೀಷ್ ಭಾಷಾ ಬಳಕೆಯು ಇಂಗ್ಲೀಷೇತರ ಭಾಷಾ ಬಳಕೆದಾರರಿಗೆ ಬಹುದೊಡ್ಡ ಅಡ್ಡಿಯಾಗಿದೆ. ಭಾರತದಲ್ಲಿನ ಹೆಚ್ಚಿನ ಮಂದಿಗೆ ಇಂಗ್ಲಿಷ್ ಗೊತ್ತಿಲ್ಲದ ಕಾರಣ ಅವರು ಕಂಪ್ಯೂಟಿಂಗ್‌ನ ಅನುಕೂಲಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹವರು ಕಂಪ್ಯೂಟಿಂಗ್ ಉಪಕರಣಗಳನ್ನು ಬಳಸಿ ಅವುಗಳ ಅನುಕೂಲಗಳನ್ನು ಅನುಭವಿಸುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಮೈಕ್ರೋಸಾಫ್ಟ್‌ನಂತಹ ಖಾಸಗಿ ಕಂಪೆನಿಗಳು ಮತ್ತು ಆಸಕ್ತ ವ್ಯಕ್ತಿಗಳು ಪರಿಸ್ಥಿತಿಯ ಸುಧಾರಣೆಗೆ ಹೆಚ್ಚಿನ ಪ್ರಯತ್ನಗಳನ್ನು ಮಾಡಿವೆ. ಇತರ ಫಲವಾಗಿ ಕಂಪ್ಯೂಟಿಂಗ್‌ನಲ್ಲಿ ಭಾಷೆಗಳಲ್ಲಿ ಸ್ವಲ್ಪವನ್ನಾದರೂ ಕಾಣಬಹುದು. ಕಂಪ್ಯೂಟಿಂಗ್ ಉಪಕರಣಗಳು ಭಾಷೆಗಳನ್ನು ಬೆಂಬಲಿಸಲು ಆರಂಭಿಸಿವೆ. ಹೆಚ್ಚಿನ ಉತ್ಪನ್ನಗಳ ಇಂಟರ್‌ಫೇಸ್‌ಗಳೂ ಭಾಷೆಗಳಲ್ಲಿ ಲಭ್ಯವಿವೆ. ಪ್ರಮುಖ ಭಾರತೀಯ ಭಾಷೆಗಳಿಗಾಗಿ ಮೈಕ್ರೋಸಾಫ್ಟ್ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್(LIP)ಗಳನ್ನು ಬಿಡುಗಡೆ ಮಾಡಿದೆ.
ನಾನು ಗಮನಿಸಿರುವಂತಹ ಒಂದು ವಿಲಕ್ಷಣ ಅಂಶವನ್ನು ಇಲ್ಲಿ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ವಿದ್ಯಾರ್ಥಿಗಳು ಅಥವಾ ವೃತ್ತಿಪರರನ್ನು ಭೇಟಿಯಾದಾಗೆಲ್ಲ ನಾನು ಅವರೊಂದಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದೆ. "ನಿಮ್ಮ ಭಾಷೆಯಲ್ಲಿ ಬೆರಳಚ್ಚಿಸುವುದು ಹೇಗೆಂದು ನಿಮಗೆ ತಿಳಿದಿದೆಯೇ? ತಂತ್ರಾಂಶ ಉತ್ಪನ್ನಗಳ ಭಾಷಾ ಆವೃತ್ತಿಗಳನ್ನು ಬಳಸಿದ್ದೀರಾ? ಎಂಬೆಲ್ಲಾ ನನ್ನ ಪ್ರಶ್ನೆಗಳಿಗೆ ಹೆಚ್ಚಿನ ಸಂದರ್ಭಗಳಲ್ಲಿನ ಉತ್ತರ 'ಇಲ್ಲ' ಎಂಬುದಾಗಿರುತ್ತದೆ!
ಇದರಿಂದ ವೇದ್ಯವಾಗುವ ಅಂಶವೆಂದರೆ, ಭಾಷಾ ಕಂಪ್ಯೂಟಿಂಗ್‌ಗೆ ನಾವು ಸಿದ್ಧರಾಗಿಲ್ಲ ಎಂಬುದು. ಮೈಕ್ರೋಸಾಫ್ಟ್ ಅಥವಾ ಇನ್ಯಾವುದೇ ಕಂಪೆನಿಗಳು, ತಮ್ಮ ಉತ್ಪನ್ನಗಳನ್ನು ಭಾಷಾ ಮಾರುಕಟ್ಟೆಗೆ ಒಯ್ಯಲು ಅಗಾಧ ಪ್ರಮಾಣದ ಹಣವನ್ನು ವ್ಯಯಿಸುತ್ತವೆ. ಅವರ ಪ್ರಾದೇಶೀಕರಣಗೊಳಿಸಲಾಗಿರುವ ಉತ್ಪನ್ನಗಳನ್ನು ಜನರು ಬಳಸುತ್ತಾರೆ ಎಂಬುದನ್ನು ಅವರು ನೋಡಲಿಚ್ಛಿಸುತ್ತಾರೆ ಮತ್ತು ತಮ್ಮ ಉತ್ಪನ್ನಗಳಿಗೆ ಜನತೆಯ ಪ್ರತಿಕ್ರಿಯೆ ಏನೆಂಬುದನ್ನು ಅವರು ನೋಡಲಿಚ್ಛಿಸುತ್ತಾರೆ. ಹಾಗಾಗಿ ನಂತರದ ಸಂದರ್ಭದಲ್ಲಿ ಅವರು ತಮ್ಮ ಉತ್ಪನ್ನಗಳನ್ನು ಇನ್ನಷ್ಟು ಸುಧಾರಿಸಲು ಅನುಕೂಲವಾಗುತ್ತದೆ. ದುರಾದೃಷ್ಟವಶಾತ್ ಇದು ನಡೆಯುತ್ತಿಲ್ಲ. ಈಗಿರುವುದನ್ನು ಜನತೆ ಹೆಚ್ಚೆಚ್ಚು ಬಳಸಬೇಕು ಮತ್ತು ಅವರು ಈ ಕುರಿತು ಅಭಿಪ್ರಾಯ ನೀಡಬೇಕು ಎಂಬುದನ್ನು ನಾನು ಬಯಸುತ್ತೇನೆ.
ಇದಕ್ಕೆ ಕಾರಣವೇನಿರಬಹುದು? ಈ ಅಡ್ಡಿಯನ್ನು ನಾವು ಹೇಗೆ ನಿವಾರಿಸಬಹುದು ಮತ್ತು ಜನ ಸಾಮಾನ್ಯರಿಗೆ ಕಂಪ್ಯೂಟಿಂಗ್ ಅನುಕೂಲಗಳು ಲಭ್ಯವಾಗಬೇಕಾದರೆ ಏನು ಮಾಡಬೇಕು?
ಇಂದಿನ ಪರಿಸ್ಥಿತಿಯಲ್ಲಿ ಕಂಪ್ಯೂಟರ್ ಬಳಕೆದಾರರಿಗೆ ಇಂಗ್ಲೀಷ್ ಹೆಚ್ಚು ಜ್ಞಾನ ಹಾಗೂ ಅವಕಾಶಗಳನ್ನು ನೀಡುತ್ತದೆ. ಪ್ರಾದೇಶಿಕ ಭಾಷೆಗಳನ್ನು ಮಾತನಾಡುವವರು, ಓದುವವರು ಬರೆಯುವವರು ಮತ್ತು ಅವಶ್ಯಕತೆಗಾಗಿ ಇಂಗ್ಲೀಷ್ ಕಲಿತವರು ಭಾಷಾ ಕಂಪ್ಯೂಟಿಂಗನ್ನು ಬಹಳಹಬೇಗ ಅರಗಿಸಿಕೊಳ್ಳುತ್ತಾರೆ. ಇಂತಹವರು ಬಹಳದೊಡ್ಡ ಪಾತ್ರವಹಿಸಬೇಕಾಗುತ್ತದೆ. ಅವರು ಭಾಷಾ ಕಂಪ್ಯೂಟಿಂಗ್ ಅಭಿವೃದ್ಧಿಯಲ್ಲಿ ಮುಂದಾಳುತ್ವ ವಹಿಸಲು ಶಕ್ತರಾಗಬೇಕು.
ತಮ್ಮದೇ ಭಾಷೆಯನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡುವಾಗ ಜನತೆ ಸಂಭ್ರಮಗೊಳ್ಳುತ್ತಾರೆ, ಮತ್ತು ಇನ್ನಷ್ಟು ಬಳಕೆಗಾಗಿ ಹಾತೊರೆಯುತ್ತಾರೆ. ಆದರೆ ಕಂಪ್ಯೂಟರ್‌ಗಳಲ್ಲಿ ಭಾಷೆಗಳ ಬಳಕೆ ಕೊಂಚ ಕಷ್ಟವೇ. ಯಾವುದೇ ಕಂಪ್ಯೂಟರ್ ಬಳಕೆದಾರನಿಗೂ ತಮ್ಮ ಭಾಷೆಯನ್ನು ಸಹಜವಾಗಿ, ಸರಾಗವಾಗಿ ಬಳಸಲು ಇರುವಂತಹ ತೊಂದರೆಗಳನ್ನು ತೊಡೆದು ಹಾಕುವುದು ಅತ್ಯಗತ್ಯ. ಹಾಗಾಗಿ ಸಾಮಾನ್ಯ ಬಳಕೆದಾರನ ಕೈಗೆಟಕುವಂತೆ ಭಾಷಾ ಕಂಪ್ಯೂಂಟಿಂಗನ್ನು ಸರಳ ಹಾಗೂ ಸುಲಲಿತಗೊಳಿಸಬೇಕಿದೆ.
ಭಾಷಾ ಕಂಪ್ಯೂಟಿಂಗ್ ಹಾಗೂ ಪ್ರಾದೇಶೀಕರಣದಲ್ಲಿ ತೊಡಗಿಸಿಕೊಂಡಿರುವವರು ತಾವು. ಭಾರತೀಯ ಭಾಷೆಗಳಿಗೆ ಉತ್ಪನ್ನಗಳನ್ನು ಪ್ರಾದೇಶೀಕರಣಗೊಳಿಸುವ ವೇಳೆಗೆ ನೀವು ಎದುರಿಸುವ ಸವಾಲುಗಳು ಯಾವುವು? ತಂತ್ರಾಂಶ ಪ್ರಾದೇಶೀಕರಣದ ಪ್ರಕ್ರಿಯೆಯನ್ನೂ ದಯವಿಟ್ಟು ವಿವರಿಸುವಿರಾ?
ಪ್ರಾದೇಶೀಕರಣವೆಂದರೆ, ಒಂದು ಉತ್ಪನ್ನ ಅಥವಾ ಸೇವೆ ಹಾಗೂ ಅದರ ಪ್ರಾತ್ಯಕ್ಷಿಕೆಗಳನ್ನು ನಿರ್ದಿಷ್ಟವಾದ ಪ್ರದೇಶದ ಸಂಸ್ಕೃತಿಗೆ ತಕ್ಕಂತೆ ಅಳವಡಿಸುವುದು. ಉತ್ಪನ್ನ ಒಂದು ಸಿದ್ಧಗೊಂಡಾಗ ನಾವು ಅಣಕು ಪ್ರಾದೇಶೀಕರಣವನ್ನು ಮಾಡುತ್ತೇವೆ. ಅಣಕು ಪ್ರಾದೇಶಿಕರಣವೆಂದರೆ, ಇದು ತಂತ್ರಾಂಶದ ಅಂತಾರಾಷ್ಟ್ರೀಕರಣ ಅಂಶಗಳನ್ನು ಪರೀಕ್ಷಿಸಲು ಬಳಸುವ ತಂತ್ರಾಂಶ ಪರೀಕ್ಷಾ ವಿಧಾನವಾಗಿದೆ. ಬಳಿಕ ಪರೀಕ್ಷಕರು ಎಲ್ಲವೂ ಸೂಕ್ತವಾಗಿ ಪ್ರದರ್ಶಿತವಾಗುತ್ತಿದೆ ಎಂಬುದರ ಖಚಿತತೆಗಾಗಿ ಯುಐ(UI)ನ ಪ್ರತೀ ಅಂಶವನ್ನು ತಪಾಸಿಸುತ್ತಾರೆ.
ಅಪ್ಲಿಕೇಶನ್ ಒಂದರ ಪ್ರಾದೇಶೀಕರಣಕ್ಕೆ, ಅಕ್ಷರಗಳ ಕುರಿತ ಮೂಲಭೂತ ತಿಳುವಳಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಅರಿವಿನ ಅವಶ್ಯಕತೆ ಇದೆ. ಅಪ್ಲಿಕೇಶನ್‌ನ ಬಳಕೆದಾರ ಇಂಟರ್‌ಫೇಸ್‌ನ ಅನುವಾದ ಹಾಗೂ ನಿರ್ದಿಷ್ಟ ಸಂಸ್ಕೃತಿ/ಸ್ಥಳಕ್ಕೆ ತಕ್ಕಂತೆ ದೃಶ್ಯಸಂಕೇತಗಳನ್ನು ಅಳವಡಿಸುವುದೂ ಪ್ರಾದೇಶೀಕರಣದಲ್ಲಿ ಸೇರಿದೆ. ಅಪ್ಲಿಕೇಶನ್‌ಗೆ ಸಂಬಂಧಿಸಿದ ಯಾವುದೇ ಸಹಾಯ ವಿಷಯವನ್ನೂ ಸಹ ಪ್ರಾದೇಶೀಕರಣ ಪ್ರಕ್ರಿಯೆಯಲ್ಲಿ ಸೇರಿಸಬಹುದು.
ಭಾರತೀಯ ಭಾಷೆಗಳಿಗೆ ಯಾವುದೇ ಉತ್ಪನ್ನವನ್ನು ಪ್ರಾದೇಶೀಕರಣಗೊಳಿಸುವ ವೇಳೆಗೆ ನಾವು ಎದುರಿಸುವ ಬಹುದೊಡ್ಡ ಸವಾಲೆಂದರೆ ಜಾಗದ ನಿರ್ಬಂಧ. ಇಂಗ್ಲೀಷ್ ಶಬ್ದಗಳಿಗೆ ಹೆಚ್ಚಿನ ಜಾಗ ಬೇಕಿಲ್ಲ. ಆದರೆ ಭಾರತೀಯ ಭಾಷೆಗಳಿಗೆ ಅನುವಾದಗೊಂಡಾಗ ಅಕ್ಷರ ಪುಂಜಗಳು ಉದ್ದವಾಗುತ್ತವೆ. ಉತ್ಪನ್ನದ ಯೋಜನೆ ವೇಳೆಗೆಯೇ ಈ ಸಮಸ್ಯೆಯನ್ನು ಬಗೆಹರಿಸಬೇಕು.
ಇನ್ನೊಂದು ದೊಡ್ಡ ಸವಾಲೆಂದರೆ ಪ್ರಾದೇಶೀಕರಣಗೊಂಡ ಉತ್ಪನ್ನದ ಗುಣಮಟ್ಟ. ಉತ್ತಮ ಗುಣಮಟ್ಟದ ಅನುವಾದವನ್ನು ಪಡೆಯಲು ಮೈಕ್ರೋಸಾಫ್ಟಿನಲ್ಲಿ ನಾವು ಯಾವಾಗಲೂ ಪ್ರಯತ್ನಿಸುತ್ತೇವೆ.
ಭಾಷಾ ತಜ್ಞರು ಹಾಗೂ ಕಂಪ್ಯೂಟಿಂಗ್ ತಜ್ಞರಿಂದ ಯೂನಿಕೋಡ್ ಗುಣಮಟ್ಚದ ಕುರಿತು ಹಲವಾರು ದೂರುಗಳಿವೆ. ಯೂನಿಕೋಡ್ ಹಾಗೂ ಅಳವಡಿಕಾ ವಿಧಾನ ಕುರಿತಂತೆ ನಿಕಟವಾಗಿ ತೊಡಗಿಸಿಕೊಂಡಿರುವ ತಾವು ಈ ದೂರುಗಳನ್ನು ಹೇಗೆ ನೋಡುವಿರಿ?
ಹೌದು. ಯೂನಿಕೋಡ್ ಗುಣಮಟ್ಟದ ಕುರಿತು ದೂರುಗಳಿವೆ. ಖಂಡಿತವಾಗಿಯೂ ಸಮಸ್ಯೆಗಳಿವೆ. ಯೂನಿಕೋಡ್ ಪರಿಪೂರ್ಣವಲ್ಲ. ಆದರೆ, ಈ ಕುರಿತಂತೆ ನಾನು ಯಾರ ಮೇಲೂ ಗೂಬೆಕೂರಿಸಲಾರೆ. ಸೂಕ್ತವಾದ ಸಂವಹನ ಇಲ್ಲದೇ ಇದ್ದಾಗ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅನವಶ್ಯಕ ಜಗಳಗಳು ಅಥವಾ ಬಿಸಿಬಿಸಿ ವಾಗ್ವಾದಗಳು ಭಾಷಾ ಕಂಪ್ಯೂಟಿಂಗ್ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಎಂಬುದು ನನ್ನ ಬಲವಾದ ನಂಬುಗೆ. ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಭಾಷಾ ಮಂಡಳಿಗಳು ಯೂನಿಕೋಡ್ ಸಹಯೋಗದೊಂದಿಗೆ ಸೂಕ್ತವಾದ ಸಂವಹನವನ್ನು ಹೊಂದಬೇಕೆಂಬ ಸಲಹೆಯನ್ನು ನಾನು ನೀಡುತ್ತೇನೆ.
ಭಾರತಕ್ಕಾಗಿ ಮೈಕ್ರೋಸಾಫ್ಟ್‌ನ ಭಾಷಾ ಕಂಪ್ಯೂಟಿಂಗ್ ಉಪಕ್ರಮದ ಕುರಿತು ನಮಗೆ ತಿಳಿಸುವಿರಾ?
ಮೈಕ್ರೋಸಾಫ್ಟ್ ಇಂಡಿಯಾವು ಭಾಷಾ ಕಂಪ್ಯೂಟಿಂಗ್‌ಗಾಗಿ 1998ರಿಂದಲೇ ಕಾರ್ಯವೆಸಗುತ್ತಿದೆ. ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್‌ಗೇಟ್ಸ್ ಅವರು ಭಾರತಕ್ಕೆ ಭೇಟಿ ನೀಡಿದ ವೇಳೆ ರಾಷ್ಟ್ರದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿಯು ಅರಂಭಗೊಳ್ಳಬೇಕಿದ್ದರೆ ಭಾಷಾ ಕಂಪ್ಯೂಟಿಂಗ್ ಅಗತ್ಯವೆಂಬ ವಿಚಾರ ಅರಿವಿಗೆ ಬಂದಿದ್ದು ಆಗಿನಿಂದಲೇ ಇದು ಆರಂಭವಾಗಿತ್ತು.
33ಕ್ಕಿಂತಲೂ ಹೆಚ್ಚು ಭಾಷೆಗಳು ಹಾಗೂ 1652 ಉಪಭಾಷೆಗಳನ್ನು ಹೊಂದಿರುವ ಭಾರತವು ವಿವಿಧ ಸಂಸ್ಕೃತಿ ಹಾಗೂ ಭಾಷೆಗಳ ರಾಷ್ಟ್ರವಾಗಿದೆ. ಸುಮಾರು ಶೇಕಡಾ 95ರಷ್ಟು ಮಂದಿ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯವೆಸಗಲು ಆದ್ಯತೆ ನೀಡಿದರೆ, ಕೇವಲ ಶೇಕಡಾ ಐದು ಮಂದಿ ಮಾತ್ರ ಇಂಗ್ಲೀಷ್ ಬಲ್ಲವರಾಗಿದ್ದಾರೆ. ಭಾಷಾ ಬಳಕೆಯಲ್ಲಿಯ ಅಸಮಾನತೆಯು ಅಂಕೀಯ ವಿಭಜನೆಗೆ ಕಾರಣವಾಗುತ್ತದೆ. ಈ ಅಂತರವನ್ನು ತುಂಬಲು ಭಾಷಾ ಅಡ್ಡಿಯನ್ನು ತೊಡೆದು ಹಾಕಲು ಕಂಪೆನಿಯು 1989ರಿಂದಲೇ ಕಾರ್ಯವೆಸಗುತ್ತಿದೆ.
ಇದುವರೆಗೆ ಮೈಕ್ರೋಸಾಫ್ಟ್ ಭಾರತದ ಮಾರುಕಟ್ಟೆಗಾಗಿ ಹಲವಾರು ಗ್ರಾಹಕ ಯೋಗ್ಯ ಸೊಲ್ಯುಶನ್‌ಗಳನ್ನು ಅಭಿವೃದ್ಧಿಪಡಿಸಿದೆ. ಇದು ಫ್ಲಾಗ್‌ಶಿಫ್ ಉತ್ಪನ್ನಗಳನ್ನು ಪ್ರಾದೇಶೀಕರಣಗೊಳಿಸುವ ಮೂಲಕ ತಂತ್ರಜ್ಞಾನ ಲಭ್ಯತೆಯು ಅದರ ಪ್ರಯತ್ನದ ಅಂಗವಾಗಿದೆ.
ಮೈಕ್ರೋಸಾಫ್ಟ್ ಒಂದು ಪ್ರವೇಶ ಟೂಲ್ (ಇಂಡಿಕ್ ಲಾಂಗ್ವೇಜ್ ಇನ್‌ಪುಟ್ ಟೂಲ್) ಅನ್ನು ವೃದ್ಧಿಪಡಿಸಿದ್ದು ಇದು ಬಳಕೆದಾರರು ಕಂಪ್ಯೂಟರ್‌ನಲ್ಲಿ ಭಾರತೀಯ ಭಾಷಾ ಪಠ್ಯಕ್ಕೆ ಸುಲಭವಾಗಿ ಮತ್ತು ಕ್ಷಿಪ್ರವಾಗಿ ಪ್ರವೇಶಿಸಲು ಸಹಾಯ ಮಾಡುತ್ತದೆ. ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳು (LIPಗಳು) ಭಾರತದ 12 ಭಾಷೆಗಳಲ್ಲಿ ಲಭ್ಯವಿದೆ. ಮೈಕ್ರೆ ಸಾಫ್ಟ್‌ನ ಬ್ರೌಸರ್ ಹಾಗೂ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸಹಿತ ಭಾರತದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ.
ನೀವು ಮೈಕ್ರೋ ಸಾಫ್ಟ್‌ನ ಮಾಜಿ ಅತಿ ಮೌಲ್ಯಯುತ ಉದ್ಯೋಗಿ (Most Valued Professional (MVP) ಎಂಬುದನ್ನು ನಾವು ತಿಳಿದಿದ್ದೇವೆ. ಈ ಕುರಿತು ಒಂದಿಷ್ಟು ಹೇಳುವಿರಾ?
ಹೌದು, ನಾನೊಬ್ಬ ಮಾಜಿ ಅತ್ಯಂತ ಮೌಲ್ಯ ವೃತ್ತಿಪರ. ಮೈಕ್ರೋಸಾಫ್ಟ್ ಕಂಪ್ಯೂ ಸರ್ವ್ ಆಕ್ಸೆಸ್ ಫಾರಂ ಅನ್ನು ಪ್ರಾಯೋಜಿಸಿದಾಗ ನಾನು ಬಹಳ ಸಮಯವನ್ನು ಅದರಲ್ಲೇ ವ್ಯಯಿಸುತ್ತಿದ್ದೆ. ಎಂವಿಪಿಯು ಮೈಕ್ರೋಸಾಫ್ಟ್‌ನ ಅತ್ಯಾಧುನಿಕ ಉತ್ಪನ್ನಗಳಿಗೆ ತೆರೆದುಕೊಳ್ಳುತ್ತಾನೆ. ಇದು ಆಕೆ/ಆತ ಇತರೆಲ್ಲರಿಗಿಂತ ಒಂದು ಹೆಜ್ಜೆ ಮುಂಚಿತವಾದ ಅನುಭವವನ್ನು ಪಡೆಯಲು ಅನುಮತಿಸುತ್ತದೆ.
ಎಂವಿಪಿ ಸ್ಥಾನಮಾನವು ಮೈಕ್ರೋಸಾಫ್ಟ್ ಸುದ್ದಿಗಳು, ತಂತ್ರಾಂಶ ಮುನ್ನೋಟಗಳು ಮತ್ತು ತಾಂತ್ರಿಕ ಜ್ಞಾನ ಮೂಲಗಳಿಗೆ ಉತ್ತಮ ಪಾಸ್‌ಪೋರ್ಟ್ ಆಗಿದೆ. ಎಂವಿಪಿ ಆಗಿರುವುದರಿಂದ ನೀವು ನಿಮ್ಮ ಕೆಲಸದಲ್ಲಿ ಸಹಾಯ ಮಾಡಬಲ್ಲ ಜನರನ್ನು ಮೈಕ್ರೋಸಾಫ್ಟ್‌ನಲ್ಲಿ ಭೇಟಿಮಾಡುವ ಅವಕಾಶ ಸಿಗುತ್ತದೆ. ಎಂವಿಪಿಯು ತನ್ನ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿರಬೇಕು. ಎಂವಿಪಿಗಳಿಂದ ಸಾಕಷ್ಟು ಸಂಶೋಧನೆ ಹಾಗೂ ಕಠಿಣತಮವಾದ ಕಾರ್ಯವನ್ನು ನಿರೀಕ್ಷಿಸಲಾಗುತ್ತದೆ. ನನ್ನ ಎಂವಿಪಿ ದಿನಗಳನ್ನು ನಾನು ಸಂತಸದಿಂದ ಅನುಭವಿಸುತ್ತಿದ್ದೆ. ನಂತರದಲ್ಲಿ ನಾನು ಮೈಕ್ರೋಸಾಫ್ಟ್‌ನಿಂದ ಕೆಲಸದ ಆಹ್ವಾನ ಬಂದಾಗ ನಾನು ನನ್ನ ಎಂವಿಪಿ ಸ್ಥಾನವನ್ನು ತ್ಯಜಿಸಿದೆ.
ಇತ್ತೀಚೆಗೆ ಕೊಯಂಬುತ್ತೂರಿನಲ್ಲಿ ನಡೆದ ತಮಿಳು ಅಂತರಜಾಲ ಸಮ್ಮೇಳದಲ್ಲಿ ನೀವೊಬ್ಬ ಅಧಿಕೃತ ಆಹ್ವಾನಿತರು. ನೀವು ಭಾರತವನ್ನು ಹೇಗೆ ನೋಡುತ್ತೀರಿ? ತಮಿಳು ಅಂತರಜಾಲ ಸಮ್ಮೇಳನದ ಅನುಭವವನ್ನು ಹಂಚಿಕೊಳ್ಳುವಿರಾ?
ಅದೊಂದು ಅದ್ಭುತವಾದ ಅನುಭವ. ನಾನು ಎರಡು ಪ್ರಬಂಧಗಳನ್ನು ಮಂಡಿಸಿದೆ. ನಾನು ಭಾರತ ಹಾಗೂ ಎರಡನೇ ಭೇಟಿ. ನಾನು ಕೊಯಂಬುತ್ತೂರಿನಲ್ಲಿ ಕಂಪ್ಯೂಟಿಂಗ್ ವೃತ್ತಿಪರರು ಹಾಗೂ ಭಾಷಾತಜ್ಞರುಗಳನ್ನು ಭೇಟಿಯಾಗಲು ಸಾಧ್ಯವಾಯಿತು. ಆಸಕ್ತಿದಾಯಕ ವಿಚಾರವೆಂದರೆ, ತಮಿಳ್ನಾಡು ಸರ್ಕಾರದಿಂದ ನಾನು ಉದ್ಯೋಗದ ಆಹ್ವಾನವನ್ನೂ ಪಡೆದೆ(ನಗು). ಇದೊಂದು ಸ್ಮರಣೀಯ ವಿಚಾರವಾಗಿದೆ. ನಾನು ಭಾರತದಲ್ಲೇ ಇರಲು ಇಷ್ಟಪಡುತ್ತೇನೆ. ಆದರೆ ನಾನು ಮೈಕ್ರೋಸಾಫ್ಟ್‌ನ ಉಪಕ್ರಮಗಳಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಬೇಕಿದೆ.
ಭಾಷಾ ಇಂಡಿಯಾದ ಪ್ರಯತ್ನಗಳನ್ನು ನೀವು ಹೇಗೆ ಅಳೆಯುತ್ತೀರಾ?
ಭಾಷಾ ಇಂಡಿಯಾವು ಒಂದು ರೀತಿಯಲ್ಲಿ ಅಪೂರ್ವವಾದ ಪೋರ್ಟಲ್ ಆಗಿದ್ದು ಇದು ಭಾರತೀಯ ಭಾಷಾ ಕಂಪ್ಯೂಟಿಂಗ್ ಮತ್ತು ಪ್ರಾದೇಶೀಕರಣ ಡೊಮೇನ್ ಮೇಲೆ ಬೆಳಕು ಚೆಲ್ಲುತ್ತದೆ. ನಾನು ನಿತ್ಯವೂ ಭಾಷಾ ಇಂಡಿಯಾಗೆ ಭೇಟಿ ನೀಡುತ್ತೇನೆ. ಭಾಷಾ ಕಂಪ್ಯೂಟಿಂಗ್ ಕುರಿತಂತೆ ಇದು ಅರಿವನ್ನು ಪಸರಿಸುತ್ತದೆ. ಇದನ್ನು ನೋಡುವುದು ಹರ್ಷದಾಯಕ. ಅದಾಗ್ಯೂ ಇಲ್ಲಿ ನನ್ನದೊಂದು ಸಲಹೆ ಇದೆ. ನಾವು ಮೈಕ್ರೋಸಾಫ್ಟ್‌ನಲ್ಲಿ ಉತ್ಪನ್ನಗಳ ಬಗ್ಗೆ ಬಳಕೆದಾರರ ಪ್ರತಿಕ್ರಿಯೆಗಾಗಿ ಕಾತರರಾಗಿದ್ದೇವೆ. ಭಾಷಾ ಇಂಡಿಯಾವು ಸಂವಾದ ಅವಕಾಶವನ್ನು ಸೇರಿಸಿಕೊಂಡು ಮೈಕ್ರೋಸಾಫ್ಟ್ ಉತ್ಪನ್ನಗಳ ಕುರಿತು ಬಳಕೆದಾರರ ಪ್ರತಿಕ್ರಿಯೆಯನ್ನು ಅಹ್ವಾನಿಸಬಹುದಾಗಿದೆ.
ಅದೇನೇ ಇದ್ದರೂ ಭಾಷಾ ಇಂಡಿಯಾದ ಪ್ರಯತ್ನಗಳು ಮಾತ್ರ ಬೆಲೆಕಟ್ಟಲಾಗದಂತಹದ್ದು. ಭಾರತೀಯ ಭಾಷಾ ಕಂಪ್ಯೂಟಿಂಗ್‌ನಲ್ಲಿ ಮಾರ್ಗದರ್ಶಿಯಾಗಿರುವ ಭಾಷಾ ಇಂಡಿಯಾಗೆ ನಾನು ಸರ್ವಯಶಸ್ಸನ್ನು ಹಾರೈಸುತ್ತೇನೆ.