ಮೈಕ್ರೋಸಾಫ್ಟ್‌ನಿಂದ ಅಭಿವೃದ್ಧಿಗಾರರಿಗೆ ಉಚಿತ ಟೂಲ್ಸ್ ಮತ್ತು ತರಬೇತಿ ಘೋಷಣೆ
ವಿಶ್ವಾದ್ಯಂತ ಅಭಿವೃದ್ಧಿಗಾರರಿಗೆ ಉಚಿತ ಪ್ರವೇಶ ಟೂಲ್ಸ್ ಮತ್ತು ತರಬೇತಿಯ (Free Accessibility Tools and Training) ತಕ್ಷಣದ ಲಭ್ಯತೆಯನ್ನು ಮೈಕ್ರೋಸಾಫ್ಟ್ ಘೋಷಿಸಿದೆ. ಇದು ಅಭಿವೃದ್ಧಿಗಾರರು ಅಥವಾ ಡೆವಲಪರ್‌ಗಳಿಗೆ ಆನ್ ಲೈನ್‌ನಲ್ಲಿ ಲಭ್ಯವಾಗುವ ಉಚಿತವಾದ ತರಬೇತಿ ಕೋರ್ಸ್‌ಗಳು, ಟೂಲ್‌ಗಳು ಮತ್ತು ಸಂಪನ್ಮೂಲಗಳಾಗಿವೆ. ತಂತ್ರಜ್ಞಾನ ಉತ್ಪನ್ನಗಳು, ಸೇವೆಗಳು ಮತ್ತು ವೆಬ್‌ಸೈಟ್‌ಗಳು ಅಶಕ್ತತೆಯಿರುವ ಜನರಿಗೆ ಲಭ್ಯವಾಗುವಂತೆ ಮತ್ತು ವಾಣಿಜ್ಯ ನಾಯಕರುಗಳಿಗೆ ಹೆಚ್ಚು ವ್ಯೂಹಾತ್ಮಕವಾದ ತಂತ್ರಜ್ಞಾನದ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಈ ತರಬೇತಿ ಮತ್ತು ಟೂಲ್‌ಗಳನ್ನು ಉಚಿತವಾಗಿ ಲಭ್ಯವಾಗಿಸಲಾಗಿದೆ.
ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ, ನಾರ್ತ್‌ರಿಜ್ (ಸಿಎಸ್‌ಯುಎನ್- CSUN) ಪ್ರಾಯೋಜಿತವಾದ ಅಂತಾರಾಷ್ಟ್ರೀಯ ತಂತ್ರಜ್ಞಾನ ಮತ್ತು ಅಶಕ್ತ ವ್ಯಕ್ತಿಗಳ 26ನೆ ವಾರ್ಷಿಕ ಸಮ್ಮೇಳನದಲ್ಲಿ ಮೈಕ್ರೋ ಸಾಫ್ಟ್ ಈ ಘೋಷಣೆಯನ್ನುಮಾಡಿದೆ. ಉತ್ತಮ ಪ್ರಾಕ್ಟೀಸ್‌ಗಳನ್ನು ಹಂಚಿಕೊಳ್ಳಲು ಮತ್ತು ಹೊಸ ಮತ್ತು ಆವಿಷ್ಕಾರಕ ಪ್ರವೇಶ ಉತ್ಪನ್ನಗಳು ಮತ್ತು ಸೊಲ್ಯುಶನ್‌ಗಳ ಕುರಿತು ಕಲಿಯಲು ವಾರ್ಷಿಕ ಸಿಎಸ್‌ಯುಎನ್ ಸಮ್ಮೇಳನವು ಲಭ್ಯತಾ ಸಮುದಾಯವನ್ನು ಒಟ್ಟು ತರುತ್ತದೆ.
ಪ್ರವೇಶ ದ್ವಾರದ ಅರಿವನ್ನು ಹೆಚ್ಚಿಸಲು ಮತ್ತು ತನ್ನದೇ ಆದ ಅಭಿವೃದ್ಧಿ ಪಂಗಡದಲ್ಲಿ ಪರಿಣತಿಯನ್ನು ಸಾಧಿಸಲು ಮೈಕ್ರೋ ಸಾಫ್ಟ್ ಆರಂಭದಲ್ಲಿ ಆನ್‌ಲೈನ್ ಟೂಲ್‌ಗಳನ್ನು ವೃದ್ಧಿ ಪಡಿಸಿತು. ಅದಾಗ್ಯೂ, ಬರಬರುತ್ತಾ ಲಭ್ಯತೆಯ ಅಥವಾ ಪ್ರವೇಶದ್ವಾರದ ಮಾರ್ಗದರ್ಶನಕ್ಕಾಗಿ ಗ್ರಾಹಕರ ಬೇಡಿಕೆಗೆ ಪ್ರತಿಯಾಗಿ ಮೈಕ್ರೋ ಸಾಫ್ಟ್ ಸಂಪನ್ಮೂಲಗಳನ್ನು ಯಾವುದೇ ದರ ವಿಧಿಸದೆಯೇ, ಉಚಿತವಾಗಿ ವಿಶ್ವಾದ್ಯಂತವಾಗಿ ತಂತ್ರಜ್ಞಾನದ ಲಭ್ಯತೆಯನ್ನು ಹೆಚ್ಚೆಚ್ಚು ಬಯಸುವ ನಿಗಮಗಳು, ಸರ್ಕಾರಗಳು ಮತ್ತು ಸರಕಾರೇತರ ಸಂಸ್ಥೆಗಳಿಗೆ (ಎನ್‌ಜಿಒಗಳು) ಲಭ್ಯವಾಗಿಸಲು ನಿರ್ಧರಿಸಿತು.
ಎಲ್ಲಾ ವಿಧದ ಸಾಮರ್ಥ್ಯಗಳನ್ನು ಹೊಂದಿರುವ ಜನರ ಅವಶ್ಯಕತೆಗಳನ್ನು ಸಂಘಟನೆಗಳು ಭರಿಸಲು ಸಹಾಯವಾಗುವಂತೆ ಸಹ ಮೈಕ್ರೋಸಾಫ್ಟ್ ಒಂದು ಲಭ್ಯತಾ ಸಂಪನ್ಮೂಲ ಮಾರ್ಗದರ್ಶಿಯ ಆಹ್ವಾನವನ್ನೂ ಸಹ ನೀಡುತ್ತದೆ. ಡೌನ್ ಲೋಡ್ ಮಾಡಿಕೊಳ್ಳಬಹುದಾದಂತ ಅಥವಾ ಮುದ್ರಿಸಿಕೊಳ್ಳಲು ಸಾಧ್ಯವಿರುವ ಈ ಮಾರ್ಗದರ್ಶಿಯು, ಹಲವು ರೀತಿಯ ಅಶಕ್ತತೆಗಳು, ಕಿವುಡುತನಗಳು, ದೌರ್ಬಲ್ಯಗಳು ಮತ್ತು ವಯೋ ಸಂಬಂಧಿ ಕಷ್ಟಗಳ ಕುರಿತು ಮತ್ತು ಅವುಗಳನ್ನು ಪರಿಹರಿಸಲು ಸಹಾಯ ಮಾಡಲು ಸಾಧ್ಯವಾಗುವಂತಹ ಲಭ್ಯವಿರುವ ತಾಂತ್ರಿಕ ಪರಿಹಾರಗಳ ಕುರಿತು ನಿರ್ದಿಷ್ಟವಾದ ಮಾಹಿತಿಯನ್ನು ಒದಗಿಸುತ್ತದೆ. ತರಬೇತಿ ಕೋರ್ಸ್‌ಗಳು, ಟೂಲ್‌ಗಳು ಮತ್ತು ಸಂಪನ್ಮೂಲ ಮಾರ್ಗಸೂಚಿ- ಇವೆಲ್ಲವುಗಳೂ ಆನ್ ಲೈನ್ ನಲ್ಲಿ ಲಭ್ಯವಿದೆ; ಇವುಗಳಲ್ಲಿ ಹೆಚ್ಚಿನ ಸಂಪನ್ಮೂಲಗಳು ಸಿಡಿಯಲ್ಲೂ ಸಹ ಲಬ್ಯವಿದೆ.
ಪ್ರವೇಶ ಆವಿಷ್ಕಾರದಲ್ಲಿ, ಮೈಕ್ರೋಸಾಫ್ಟ್ ಪ್ರವೇಶ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಉದ್ಯಮದ ಮುಂದಾಳುಗಳಲ್ಲಿ ಮೈಕ್ರೋಸಾಫ್ಟ್ ಒಂದಾಗಿದೆ, ಮತ್ತು ನಾವು ನಮ್ಮ ಉತ್ಪನ್ನಗಳು ಮತ್ತು ಸೇವೆಯ ಪ್ರವೇಶವನ್ನು ಸುಧಾರಿಸಲು ನಿರಂತರವಾಗಿ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್‌ನ ಟ್ರಸ್ಟ್ ವರ್ಥೀ ಕಂಪ್ಯೂಟಿಂಗ್‌ನ ಮಾರುಕಟ್ಟೆ ನಿರ್ದೇಶಕ ಬೋನ್ನಿ ಕಿಯರ್ನಿ ಹೇಳಿದ್ದಾರೆ.
ಮೈಕ್ರೋ ಸಾಫ್ಟ್ ಅಭಿವೃದ್ಧಿ ಪಡಿಸಿರುವ ಏಳು ತರಬೇತಿ ಕೋರ್ಸ್‌ಗಳು ತಾಂತ್ರಿಕ ಮತ್ತು ತಾಂತ್ರಿಕೇತರ ಶ್ರೋತೃಗಳಿಗೆ ಹೊಂದಿಕೆಯಾಗುವಂತಹ ಕೋರ್ಸ್ ಗಳಾಗಿವೆ. ಒಂದು ಡೆವಲಪ್‌ಮೆಂಟ್ ಓವರ್ ವ್ಯೂ ಕೋರ್ಸ್ ಮತ್ತು ವಿಂಡೋಸ್ ಫಾರ್ಮ್ಸ್ ಮತ್ತು ವಿಂಡೋಸ್ ಪ್ರೆಸೆಂಟೇಶನ್ ಫೌಂಡೇಶನ್ ಸೇರಿದಂತೆ ವಿಂಡೋಸ್ ಪ್ಲಾಟ್‌ಫಾರಂ ಟೆಕ್ನಾಲಜಿಯನ್ನು ವ್ಯಾಪಿಸುತ್ತದೆ.
ಪ್ರವೇಶದ್ವಾರ ತರಬೇತಿಯು ವ್ಯಾಪಾರ, ಸರಕಾರ ಮತ್ತು ಎನ್‌ಜಿಓಗಳಿಗೆ ಹೇಗೆ ಅನುಕೂಲಕರವಾಗುತ್ತದೆ
ಪ್ರವೇಶ ದ್ವಾರ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಬಳಕೆಯು ಸಂಘಟನೆಗಳಿಗೆ ಅಸಾಧಾರಣ ಪ್ರತಿಭೆಯ ನೌಕರರನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅವನ್ನು ಪ್ರತಿಭಾವಂತ ಅಭ್ಯರ್ಥಿಗಳ ದೊಡ್ಡ ಸಮುಚ್ಛಯದಿಂದ ನೇಮಿಸಿಕೊಳ್ಳಲು ಶಕ್ತವಾಗಿಸುತ್ತದೆ ಮತ್ತು ಅವರಿಗೆ ಗರಿಷ್ಠವಾದ ಸಹಯೋಗ ಮತ್ತು ಉತ್ಪನ್ನವನ್ನು ಸಜ್ಜುಗೊಳಿಸಲೂ ಸಹ ಈ ಪ್ರವೇಶ ದ್ವಾರ ತರಬೇತಿ ಸಹಾಯ ಮಾಡುತ್ತದೆ.
ಗ್ರಾಹಕರಿಗೆ ಇದು ಹೇಗೆ ಸಹಾಯಕ
ಪ್ರವೇಶ ದ್ವಾರ ತಾಂತ್ರಿಕತೆಯು ವಿಶ್ವಾದ್ಯಂತ ಅಶಕ್ತ ಮಂದಿ ಅಥವಾ ವಯೋ ಸಂಬಂಧಿ ಕಷ್ಚುಗಳನ್ನು ಅನುಭವಿಸುವವರಿಂದ ಹಿಡಿದು, ಗಾಯಗಳಿಂದಾಗಿ, ಹವಾಮಾನ ಸ್ಥಿತಿಗತಿ ಅಥವಾ ಇತರ ಯಾವುದೇ ಪರಿಸ್ಥಿತಿಗಳಿಂದಾಗಿ ತಾತ್ಕಾಲಿಕವಾದ ಸಹಾಯ ಬಯಸುವ ಎಲ್ಲಾ ಮಂದಿಗೂ ಇದು ಅಗತ್ಯವಾಗಿದೆ. ವಿವಿಧ ರೀತಿಯ ಸಾರ್ಥ್ಯಗಳ ಮಂದಿಗೆ ಪ್ರವೇಶದ್ವಾರ ತಾಂತ್ರಿಕತೆಯು ಕಂಪ್ಯೂಟರನ್ನು ನೋಡುವಿಕೆ, ಕೇಳುವಿಕೆ ಮತ್ತು ಕಂಪ್ಯೂಟರ್ ಸಾಧನಗಳನ್ನು ಬಳಸುವಿಕೆಯನ್ನು ಸರಳವಾಗಿಸುತ್ತದೆ, ಮಾತ್ರವಲ್ಲದೆ, ಸರಕಾರಿ ಸೇವೆಗಳು, ಮಾಹಿತಿಗಳನ್ನು ತಿಳಿಯಲು ಉದ್ಯೋಗವನ್ನು ಭದ್ರಗೊಳಿಸಲು ಮತ್ತು ಉಳಿಸಿಕೊಳ್ಳಲು ಮತ್ತು ಅವರ ಉತ್ಪಾದಕೆಯನ್ನು ಪಾಲಿಸಿಕೊಳ್ಳಲು ಮತ್ತು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.
ಅಶಕ್ತ ವ್ಯಕ್ತಿಗಳ ಕುರಿತಾದ ಅಮೇರಿಕಾದ ಸಮ್ಮೇಳನದ ಪ್ರಕಾರ ಪ್ರತೀ ರಾಷ್ಟ್ರದಲ್ಲೂ ಅಶಕ್ತತೆಯು 15 ರಿಂದ 20 ಪ್ರತಿಶತಹದಷ್ಟು ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳಲ್ಲೂ ಕಂಡು ಬರುತ್ತದೆ. ಅಲ್ಲದೆ ದಿನಗಳೆದಂತೆ ಕಂಪ್ಯೂಟರ್ ಬಳಸುವ ವಯೋವೃದ್ಧರ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಾಗಿ ಇಂತಹವರಿಗೆ ಲಭ್ಯತಾ ತಂತ್ರಜ್ಞಾನದ ಪ್ರವೇಶವನ್ನು ಮೈಕ್ರೋಸಾಫ್ಟ್ ಉಚಿತವಾಗಿ ಲಭಿಸುವಂತೆ ಮಾಡಿದೆ.
ಮೈಕ್ರೋ ಸಾಫ್ಟ್ ಡೆವಲಪರ್ ಸೆಂಟರ್ ವೆಬ್‌ಸೈಟ್ ನಿಂದ ಮಕ್ರೋಸಾಫ್ಟ್‌ನ ಈ ಆಕ್ಸೆಸೇಬಿಲಿಟಿ ಟೂಲ್‌ಗಳು ಮತ್ತು ತರಬೇತಿ ಹಾಗೂ ಅಕ್ಸೆಸೇಬಿಲಿಟಿ ರೀಸೋರ್ಸ್ ಗೈಡನ್ನು ನೋಡಬಹುದು ಮತ್ತು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. http://msdn.microsoft.com/accessibility