Microsoft Pushes Private Cloud Computing Forward With System Center 2012

ಸಿಸ್ಟಂ ಸೆಂಟರ್ 2012ರೊಂದಿಗೆ ಪ್ರೈವೇಟ್ ಕ್ಲೌಡ್ ಕಂಪ್ಯೂಟಿಂಗನ್ನು ಮುಂದೆ ತಳ್ಳುತ್ತಿರುವ ಮೈಕ್ರೋಸಾಫ್ಟ್


       ಇತ್ತಿಚೆಗೆ ನಡೆದ ಮೈಕ್ರೋಸಾಫ್ಟ್ ಮ್ಯಾನೇಜ್‌ಮೆಂಟ್ ಶೃಂಗ ಸಮ್ಮೇಳನದಲ್ಲಿ ಮೈಕ್ರೋ ಸಾಫ್ಟ್ ಕಾರ್ಪೋರೇಶನ್ ಉಪಾಧ್ಯಕ್ಷ ಬ್ರಾಡ್ ಆ್ಯಂಡರ್ಸನ್ ಅವರು ಮೈಕ್ರೋಸಾಫ್ಟ್ ತಂತ್ರಜ್ಞಾನದೊಂದಿಗೆ ರಚಿಸಲಾಗಿರುವ ಖಾಸಗೀ ಕ್ಲೌಡ್‌ಗಳು ಮಾಹಿತಿ ತಂತ್ರಜ್ಞಾನ ಸಂಘಟನೆಗಳು ತಮ್ಮ ಕಂಪೆನಿಯ ಹೆಚ್ಚು ಲಘುಬಗೆಯ ಸೇವೆಗಾಗಿರುವ ಬೇಡಿಕೆಗಳನ್ನು ಪೂರೈಸಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದರು. ಆ್ಯಂಡರ್ಸನ್ ಅವರು ಹೊಸ ಸಿಸ್ಟಂ ಸೆಂಟರ್ 2012ನ್ನು ಪರಿಚಯಿಸಿದ್ದು, ಇದು ಮಾಹಿತಿ ತಂತ್ರಜ್ಞಾನ ನಿರ್ವಾಹಕರಿಗೆ ಖಾಸಗೀ ಕ್ಲೌಡ್ ಸೇವೆಗಳನ್ನು ಒದಗಿಸಲು ಶಕ್ತವಾಗಿಸುತ್ತದೆ. ಇದು  ವಾಣಿಜ್ಯ ತಂಡಗಳನ್ನು ಸಬಲೀಕರಣಗೊಳಿಸುತ್ತದೆ, ಅಪ್ಲಿಕೇಶನ್ ಕಾರ್ಯಕ್ಷಮತೆಗೆ ಹೆಚ್ಚು ಇನ್‌ಸೈಟ್‌ಗಳನ್ನು ಒದಗಿಸುತ್ತದೆ ಮತ್ತು ಸಾರ್ವಜನಿಕವಾದ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಅಳವಡಿಸಿಕೊಳ್ಳುವ ವೇಳೆಗೆ ಬಂಡವಾಳವನ್ನು ಬಳಸಿಕೊಳ್ಳುವಂತೆ ಅದನ್ನು ಮುಂದಕ್ಕೆ ಸಾಗಿಸಲು (ಕ್ಯಾರಿ ಫಾರ್ವರ್ಡ್) ಮಾಡಲು ಮಾಹಿತಿ ತಂತ್ರಜ್ಞಾನಕ್ಕೆ ಅನುವು ಮಾಡುತ್ತದೆ.


"ವಿಶುವಲೈಶೇಶನ್ ಮತ್ತು ಸರ್ವರ್ ಕಂಸೋಲಿಡೇಶನ್ ಕ್ಲೌಡ್ ಕಂಪ್ಯೂಟಿಂಗ್ ಕುರಿತಾಗಿರುವ ಪ್ರಮುಖ ಹಂತಗಳಾಗಿವೆ, ಆದರೆ, ಅಪ್ಲಿಕೇಶನ್‌ಗಳು ತಮ್ಮಷ್ಟಕೆ ಹೇಗೆ ಮಾಡುತ್ತವೆ ಎಂಬ ಕುರಿತು ಗುಪ್ತಮಾಹಿತಿ ಒದಗಿಸುವ ನಿರ್ವಹಣಾ ಟೂಲ್‌ಗಳನ್ನು ಹೊಂದುವುದು ಅತ್ಯಂತ ಅವಶ್ಯಕವೇ ಹೊರತು ವರ್ಚುವಲ್ ಮೆಶಿನ್ ಬ್ಲಾಕ್ ಬಾಕ್ಸ್‌ಗಳ ನಿರ್ವಹಣೆ ಮಾತ್ರವಲ್ಲ. ಅವಶ್ಯಕತೆ ಇರುವ ಓವರ್‌ಸೈಟ್‌ಗಳ ಜತೆಗೆ ಈ ಇನ್ ಸೈಟನ್ನು ಮೈಕ್ರೋ ಸಾಫ್ಟ್ ಮ್ಯಾನೇಜ್ ಮೆಂಟ್ ಒದಗಿಸುತ್ತದೆ.


ಸಿಸ್ಟಂ ಸೆಂಟರ್ 2012: ವಾಸ್ತವಿಕ ಯಂತ್ರಗಳಿಗಿಂತ ಹೆಚ್ಚಿನ ನಿರ್ವಹಣೆ


        ಈ ವರ್ಷದ ಅಂತ್ಯದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಿಸ್ಟಂ ಸೆಂಟರ್ 2012, ಐಟಿ ಮ್ಯಾನೇಜರುಗಳು ಇಂದಿನ ದಿನಮಾನದಲ್ಲಿ ತಾವು ತಿಳಿದಿರುವ ಮತ್ತು ಹೊಂದಿರುವ - ವೆಂಡರ್ಸ್ ಪ್ಲಾಟ್‌ಫಾರಂಗಳು ಮತ್ತು ವಿಶುವಲೈಸೇಶನ್ ತಂತ್ರಜ್ಞಾನಗಳು ಸೇರಿದಂತೆ ಮೂಲಭೂತ ಸೌಕರ್ಯಗಳೊಂದಿಗೆ ಖಾಸಗೀ ಸಮುಚ್ಚಯಗಳನ್ನು ನಿರ್ಮಿಸಲು ಶಕ್ತವಾಗಿಸುತ್ತದೆ. ತಮ್ಮ ಪ್ರಧಾನ ಭಾಷಣದಲ್ಲಿ ಆ್ಯಂಡರ್ಸನ್ ಅವರು ಸಿಸ್ಚಂ ಸೆಂಟರ್‌ 2012ರಲ್ಲಿ ವರ್ಚುವಲ್ ಮೆಶಿನ್ ಮ್ಯಾನೇಜರ್ ಸಾಮರ್ಥ್ಯವನ್ನು ಪ್ರಾತ್ಯಕ್ಷೀಕರಣಗೊಳಿಸಿದ್ದು, ಇದು ಬೇಟಾ ಬಿಡುಗಡೆಯಾಗಿ http://www.microsoft.com/systemcenter/en/us/try-it.aspx ಇಲ್ಲಿ ಲಭ್ಯವಿದೆ. ಮೈಕ್ರೋಸಾಫ್ಟ್ ಖಾಸಗೀ ಸಮುಚ್ಚಯ ಸೊಲ್ಯೂಶನ್‌ಗಳ ಈ ಪ್ರಧಾನ ಅಂಶವನ್ನು ಬಳಸುತ್ತಾ ಮಾಹಿತಿ ತಂತ್ರಜ್ಞಾನ ಮ್ಯಾನೇಜರುಗಳು ಮೂಲಸೌಕರ್ಯಗಳನ್ನು ಮತ್ತು ಅಪ್ಲಿಕೇಶನ್ ಸರ್ವೀಸ್‌ಗಳನ್ನು ದಕ್ಷವಾಗಿ ಪ್ರಮಾಣೀಕರಿಸಬಹುದು ಮತ್ತು ಅಪ್ಲಿಕೇಶನ್‌ಗಳ ಶೀಘ್ರವಾದ ನಿಯೋಜನೆಗಾಗಿ ಅವುಗಳನ್ನು ವಾಣಿಜ್ಯ ಪಾಲುದಾರರಿಗೆ ನಿಯೋಜನೆಗೊಳಿಸಬಹುದಾಗಿದೆ.


ಮಾಹಿತಿ ತಂತ್ರಜ್ಞಾನ ನಿರ್ವಾಹಕರು ತಮ್ಮ ವಾಣಿಜ್ಯ ತಂಡಗಳಿಗೆ ಹೆಚ್ಚಿನ ನಮ್ಯತೆ ಮತ್ತು ಲಘುಬಗೆಯ ಸಹಾಯವನ್ನು ನೀಡುವ ವೇಳೆ ವಿಭಾಗ ಮಟ್ಟದ ಅಪ್ಲಿಕೇಶನ್ ನಿರ್ವಾಹಕರಿಗೆ ತಮ್ಮ ಅಪ್ಲಿಕೇಶನ್‌ಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಮುಚ್ಚಯ ಮೂಲಸೌಕರ್ಯಗಳಿಗೆ ನಿಯೋಜಿಸಲು ಶಕ್ತವಾಗಿಸುವಂತಹ ಹೊಸ ಸಿಸ್ಟಂ ಸೆಂಟರ್ 2012 ಸಾಮರ್ಥ್ಯವಾದ ಸಂಕೇತ ಹೆಸರು "ಕಾನ್ಸೆರೋ" (Concero)ವನ್ನೂ ಸಹ ಆ್ಯಂಡರ್ಸನ್ ಅವರು ಪ್ರದರ್ಶಿಸಿದರು.


"ಸಮುಚ್ಚಯ ಕಂಪ್ಯೂಟಿಂಗ್‌ನ ಚಲನೆಯು ಪ್ರಮುಖವಾಗಿ ಉದ್ಯಮ ನಿರ್ವಹಣಾ ಸೊಲ್ಯೂಶನ್‌ಗಳಲ್ಲಿ ಏನನ್ನು ನಿರೀಕ್ಷಿಸಲಾಗಿದೆಯೋ ಆ ಬಾರನ್ನು ಹೆಚ್ಚಿಸುತ್ತದೆ" ಎಂದು ಗಾರ್ಟನರ್‌ನಲ್ಲಿ ಸಂಶೋಧನಾ ಉಪಾಧ್ಯಕ್ಷರಾಗಿರುವ ಕ್ರಿಸ್ ವೂಲ್ಫ್ ನುಡಿದರು. ಮಾರಾಟಗಾರನೊಬ್ಬನಿಗೆ ಸೃಷ್ಟಿಯನ್ನು ಸ್ವಯಂ ಆಗಿ ಮಾಡಬಲ್ಲಂತಹ ಟೂಲ್ ಅನ್ನು ಸೃಷ್ಟಿಸುವುದು ಮತ್ತು ಅದನ್ನು 'ಸಮುಚ್ಛಯ ನಿರ್ವಹಣೆ' ಎಂಬುದಾಗಿ ಕರೆಯುವುದು ಸುಲಭ" ಎಂದು ನುಡಿದ ಅವರು "ಅದಾಗ್ಯೂ, ಸೇವೆಯೊಂದನ್ನು ಚೆನ್ನಾಗಿರಿಸಿದಾಗ ಮತ್ತು ಅದು ಚಲಾವಣೆಯಲ್ಲಿದ್ದಾಗ  ಮಾಹಿತಿ ತಂತ್ರಜ್ಞಾನ ನಿರ್ವಹಣೆಯ ನಿಜವಾದ ಮೌಲ್ಯವು ಬರುತ್ತದೆ. ಇದರರ್ಥ, ಕಾನ್ಫಿಗರೇಶನ್ ಮತ್ತು ಕಾರ್ಯಾಚರಣೆಗಳನ್ನು ಸ್ವಯಂಚಲಾಯಿಸುವ ಟೂಲ್‌ಗಳು ಆಪ್ಟಿಮಲ್ ಲೈಫ್ ಸೈಕಲ್ ಖಚಿತತೆಗಾಗಿ  ಅಪ್ಲಿಕೇಶನ್ ಜ್ಞಾನದ ಅನುಕೂಲಗಳನ್ನು ಪಡೆಯಲೇ ಬೇಕು. ಪ್ರಸಕ್ತ ಪ್ರಕ್ರಿಯೆಗಳ ಮರು ಲೆಕ್ಕಾಚಾರ ಮಾಡಲು ಮತ್ತು ನಾಳಿನ ಸಮುಚ್ಛಯ ಶಕ್ತವಾದ ಮಾಹಿತಿ ತಂತ್ರಜ್ಞಾನ ಸೇವೆಗಳ ಸಂಕೀರ್ಣ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯವುಳ್ಳ ವೇದಿಕೆಯೊಂದಿಗೆ ಮುಂದಕ್ಕೆ ಚಲಿಸುವ ಒಂದು ಅವಕಾಶವಾಗಿ ಸಂಘಟನೆಗಳು ಈ ನಿರ್ವಹಣಾ ಮಾರ್ಪರಿಜು ಸ್ಥಳಾಂತರವನ್ನು ತೆಗೆದುಕೊಳ್ಳಬೇಕು ಅಥವಾ ಪರಿಗಣಿಸಬೇಕು.


ಹೈಪರ್ - ವಿ ಸಮುಚ್ಛಯದೊಂದಿಗೆ ಆರಂಭ: ಮೊದಲ ಹಂತವಾಗಿ ವಾಸ್ತವೀಕರಣ


      ಸಿಸ್ಟಂ ಸೆಂಟರ್ 2012 ಸೊಲ್ಯೂಶನ್‌ಗಳು ಪ್ರಸಕ್ತವಿರುವ ಮೈಕ್ರೋಸಾಫ್ಟ್ ಹೈಪರ್ - ವಿ ಕ್ಲೌಡ್ ಪ್ರೋಗ್ರಾಮ್‌ಗಳನ್ನು ವಿಸ್ತರಿಸುತ್ತವೆ ಮತ್ತು ವರ್ಚುವಲೈಸ್ಡ್ ವರ್ಕ್‌ಲೋಡ್‌ಗಳ ಶ್ರೇಷ್ಠ ನಿರ್ವಹಣೆಗೆ ಸಾಮರ್ಥ್ಯ ಸೇರಿದಂತೆ ಖಾಸಗೀ ಸಮುಚ್ಚಯ ಕಂಪ್ಯೂಟಿಂಗ್‌ಗಳ ಆಹ್ವಾನ ನೀಡುತ್ತದೆ. ವಿಂಡೋಸ್ ಶೇರ್ ಪಾಯಿಂಟ್ ಸೇವೆಗಳ ವರ್ಚುವಲೈಸೇಶನ್, ಮೈಕ್ರೋಸಾಫ್ಟ್ ಎಕ್ಸ್‌ಚೇಂಜ್ ಸರ್ವರ್ 2010 ಮತ್ತು ಮೈಕ್ರೋಸಾಫ್ಟ್ ಎಸ್‌ಕ್ಯುಎಲ್ ಸರ್ವರ್ 2008ಗಾಗಿ, ವಿಂಡೋಸ್ ಸರ್ವರ್ 2008 ಹೈಪರ್ - ವಿಯ ಉದ್ದಿಮೆ ಸಿದ್ಧತೆ ಮತ್ತು ಕಾರ್ಯಕ್ಷಮತೆಯಲ್ಲಿ ಉದ್ಯಮ ವ್ಯೂಹ ಸಮೂದಿಂದ ಹೊಸದಾಗಿ ಕಂಡುಕೊಂಡಿರುವ ವಿಚಾರಕ್ಕೆ ಆ್ಯಂಡರ್ಸನ್ ಒತ್ತು ನೀಡಿದರು. ಈ ಕಂಡುಕೊಂಡಿರುವಿಕೆಯ ಹೆಚ್ಚಿನ ಮಾಹಿತಿಯು ಈ ಕೆಳಗಿನ ಕೊಂಡಿಯಲ್ಲಿ ಲಭ್ಯವಿದೆ.

 http://www.microsoft.com/virtualization/en/us/solution-business-apps.aspx


ಗ್ರಾಹಕರು ಹೈಪರ್ - ವಿ ಸಮುಚ್ಛಯ ಮತ್ತು ಆಹ್ವಾನಗಳ ಕುರಿತು ಹೆಚ್ಚಿನದನ್ನು ಈ ಕೆಳಗಿನ ಕೊಂಡಿಯ ಮೂಲಕವೂ ಕಲಿಯಬಹುದಾಗಿದೆ. http://www.microsoft.com/virtualization/en/us/private-cloud.aspx ಕ್ಲೌಡ್ ಕಂಪ್ಯೂಟಿಂಗ್ ಮತ್ತು ನಿರ್ವಹಣೆಯ ಕುರಿತು ಚಿಂತನೆಗಳು ಮತ್ತು ಇನ್‌ಸೈಟ್ ಗಳನ್ನು ಆ್ಯಂಡರ್ ಸನ್ ಅವರು ಮೈಕ್ರೋ ಸಾಫ್ಟ್ ಬ್ಲಾಗಿನಲ್ಲಿ ಹಾಕಿದ್ದು, ಈ ಕೂಂಡಿಯ ಮೂಲಕ ಅದನ್ನು ಓದಬಹುದಾಗಿದೆ. http://blogs.technet.com/b/microsoft_blog. ಮೈಕ್ರೋಸಾಫ್ಟ್ ಮ್ಯಾನೇಜ್ ಮೆಂಟ್ ಶೃಂಗ ಸಮ್ಮೇಳನದ ಕುರಿತು ಹೆಚ್ಚಿನ ವಿವರಗಳು ಮತ್ತು ಸುದ್ದಿಗಳು ಫ್ಯಾಕ್ಟ್ ಶೀಟ್ ನೊಂದಿಗೆ ಈ ಕೊಂಡಿಯಲ್ಲಿ ಲಭ್ಯವಿದೆ.

http://www.microsoft.com/presspass/presskits/cloud.


 

Read More on....