ಹೋಮ್ ಎಂಟರ್‌ಟೈನ್‌ಮೆಂಟ್ ಸಿಸ್ಟಮ್
Xbox 360 ಎನ್ನುವುದು ಪ್ರೀಮಿಯರ್ ಹೋಮ್ ಎಂಟರ್‌ಟೈನ್‌ಮೆಂಟ್ ಮತ್ತು ವೀಡಿಯೋ ಗೇಮ್ ಸಿಸ್ಟಮ್ ಆಗಿದೆ. ಕೈನೆಕ್ಟ್ ಸೇರ್ಪಡೆಯ ಸಹಕಾರದೊಂದಿಗೆ, Xbox 360 ಎಂದಿಗೂ ಸಹ ಸಾಮಾಜಿಕ ಆಟ ಮತ್ತು ಮನರಂಜನೆಯನ್ನು ಹೊಸ ಪ್ರಕಾರದ ಆಟವಾಡುವಿಕೆಯಾದ – ಯಾವುದೇ ಕಂಟ್ರೋಲರ್ ಅಗತ್ಯವಿಲ್ಲದ ಪ್ರಕಾರಕ್ಕೆ ಬದಲಿಸಿದೆಯ Xbox 360 ಎನ್ನುವುದು ಅತ್ಯುತ್ತಮ ಮತ್ತು ವ್ಯಾಪಕವಾದ ಆಟಗಳು, ಜೊತೆಗೆ ಸಂಗೀತದ ಆನ್-ಡಿಮ್ಯಾಂಡ್ ಲೈಬ್ರರಿ, ಸ್ಟ್ಟಾಂಡರ್ಡ್ ಮತ್ತು ಹೈ ಡಿಫಿನಿಷನ್ ಚಲಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಆಟಗಳೆಲ್ಲವನ್ನೂ ಒಂದೇ ಸ್ಥಳದಲ್ಲಿ ನೀಡುವ ಕೇಂದ್ರವಾಗಿದೆ.
ಲೀವಿಂಗ್ ರೂಂನ ಮನರಂಜನೆಯ ಕೇಂದ್ರವಾದ Xbox 360, ಸುಮಾರು 35 ಮಿಲಿಯನ್ Xbox ಲೈವ್ ಸದಸ್ಯರೊಂದಿಗೆ ಪ್ರಮುಖ ಸಾಮಾಜಿಕ ಮನರಂಜನೆಯ ನೆಟ್ವರ್ಕ್ ಆಗಿದ್ದು,ಈ ಮೂಲಕ ಮನೆಯಲ್ಲಿ ಅಥವಾ ಜಗತ್ತಿನಾದ್ಯಂತ ಮಿತಿಯಿಲ್ಲದೇ ಮನರಂಜನೆಯ ಅನುಭವನ್ನು ಪಡೆದುಕೊಳ್ಳಬಹುದಾಗಿದೆ.
ಯುಬಿಸಾಫ್ಟ್‌ನ ಟಾಮ್ ಕ್ಲಾನ್ಸಿ ಸರಣಿಯ ಆಟಗಳು, ಎಲೆಕ್ಟ್ರಾನಿಕ್ ಆರ್ಟ್ಸ್ “ಮಾಸ್ ಎಫೆಕ್ಟ್ 3”, “ಮ್ಯಾಡೆನ್ ಎನ್ಎಫ್ಎಲ್”, “ಟೈಗರ್ ವುಡ್ಸ್ ಪಿಜಿಎ ಟೂರ್” ಮತ್ತು “ಫಿಫಾ”; ಯುಎಫ್‌ಸಿ ಒಳಗೊಂಡು ಕೈನೆಕ್ಟ್ ಬೆಂಬಲವನ್ನು ಅನಾವರಣಗೊಳಿಸಿದ ಪ್ರಮುಖ ಪ್ರಕಾಶಕರು Xbox 360 ಗೆ ಬರುತ್ತಾರೆ. ಹೊಸ ಆಟಗಳಗಳನ್ನು ಸೃಷ್ಟಿಸಿದ ಮೈಕ್ರೋಸಾಫ್ಟ್ ಕಾರ್ಪೊರೇಶನ್, ಅತ್ಯುನ್ನತ ಹಿಟ್‌ಗಳು ಮತ್ತು ಬ್ಲಾಕ್ ಬ್ಲಸ್ಟರ್ ಅನುಭವವನ್ನು ಮಿತಿಯಿಲ್ಲದೆಯೇ Xbox 360 ನೀಡುವುದನ್ನು ಮುಂದುವರಿಸಿದೆ ಎಂದು ಸಾಧಿಸಿ ತೋರಿಸಿದೆ. ಈ ವರ್ಷ, “ಗೇರ್ಸ್ ಆಫ್ ವಾರ್ 3”, “ ಫೋರ್ಜಾ ಮೋಟಾರ್‌ಸ್ಪೋರ್ಟ್ 4” ಮತ್ತು “ ಹಾಲೋ 4” ಗಾಗಿ ವಿಶ್ವ ಪ್ರೀಮಿಯರ್ ಟ್ರೈಲರ್ ಒಳಗೊಂಡು ಹಲವಾರು ಹೊಸ ಯಶಸ್ವಿ ಪ್ರಯೋಗಗಳನ್ನು ವಿಶೇಷವಾಗಿ Xbox 360 ನಲ್ಲಿ ಮೈಕ್ರೋಸಾಫ್ಟ್ ಪ್ರದರ್ಶಿಸಿದೆ.
ಹೆಚ್ಚಿನದಾಗಿ, ಹೆಸರಾಂತ “ಫೇಬಲ್” ಫ್ರಾಂಚೈಸಿಯ ಮುಂದಿನ ಹಂತವನ್ನು “ಫೇಬಲ್”ನೊಂದಿಗೆ ಪ್ರಾರಂಭಿಸಿದೆ: ಕೈನೆಕ್ಟ್ ಬೆಂಬಲಿತ ಐತಿಹಾಸಿಕ ಮಹಾಕಾವ್ಯವಾದ “ರೈಸ್” ನ ಪೂರ್ವಪ್ರದರ್ಶನವನ್ನೂ ಸಹ ಅಭಿಮಾನಿಗಳಿಗೆ ತೋರಿಸಲಾಗಿದೆ. ಅಂತಿಮವಾಗಿ, ಈ ಚಳಿಗಾಲದಲ್ಲಿ, ಸ್ವತಂತ್ರ ಪಿಸಿ ಗೇಮ್ ಆದ “ಮೈನ್‌ಕ್ರಾಫ್ಟ್” ಎನ್ನುವುದು Xbox 360 ನಲ್ಲಿ ವಿಶೇಷವಾಗಿ ಪ್ರಾರಂಭವಾಗಲಿದೆ ಎಂದು ಮೈಕ್ರೋಸಾಫ್ಟ್ ಬಹಿರಂಗಪಡಿಸಿದೆ.
ಉದ್ಯಮದ ಅತ್ಯುತ್ತಮ ರಚನೆಕಾರರು ಮತ್ತು ಪ್ರಕಾಶಕರುಗಳು Xbox ನಲ್ಲಿ ಅಭಿಮಾನಿಗಳಿಗೆ ಇನ್ನೂ ಹೆಚ್ಚಿನ ರೋಚಕ ಆಟಗಳನ್ನು ನೀಡಲು ಬದ್ಧರಾಗಿದ್ದಾರೆ. ಮೈಕ್ರೋಸಾಫ್ಟ್‌ನ E3 ಹಂತದಲ್ಲಿ, “ಟಾಮ್ ಕ್ಲಾನ್ಸಿ ಅವರ ಘೋಸ್ಟ್ ರೆಕಾನ್ ಫ್ಯೂಚರ್ ಸೋಲ್ಜರ್” ಒಳಗೊಂಡು ಭವಿಷ್ಯದ ಟಾಮ್ ಕ್ಲಾನ್ಸಿಯವರ ಆಟಗಳು ಕೈನೆಕ್ಟ್‌ನಿಂದ ಬಲವನ್ನು ಪಡೆದುಕೊಳ್ಳಲಿದೆ ಎಂದು ಯೂಬಿಸಾಫ್ಟ್ ಘೋಷಣೆ ಮಾಡಿದೆ. ಹೆಚ್ಚಿನದಾಗಿ “ಕಾಲ್ ಆಫ್ ಡ್ಯೂಟಿ: ಮಾಡರ್ನ್ ವಾರ್‌ಫೇರ್ 3” ಯ ಸಾರ್ವಜನಿಕ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ಮೈಕ್ರೋಸಾಫ್ಟ್ ಇನ್ನೂ ಉತ್ಸಾಹಭರಿತರನ್ನಾಗಿ ಮಾಡಿರುವ ಜೊತೆಗೆ 2011 ರಲ್ಲಿ ಮತ್ತು 2012 ರಲ್ಲಿ ಎಲ್ಲಾ “ಕಾಲ್ ಆಫ್ ಡ್ಯೂಟಿ: ಮಾಡರ್ನ್ ವಾರ್‌ಫೇರ್ 3” ಸೇರ್ಪಡಣೆಯ ವಿಷಯವನ್ನು ಮೊದಲ ಬಾರಿಗೆ Xbox 360 ಯಲ್ಲಿ ಪ್ರಾರಂಭಿಸಲಾಗುವುದು ಎಂದು ಜ್ಞಾಪಿಸಿದೆ.
“ಟೈಗರ್ ವೂಡ್ಸ್ ಪಿಜಿಎ ಟೂರ್”, “ಮ್ಯಾಡ್ಡೆನ್ ಎನ್ಎಫ್ಎಲ್” ಮತ್ತು “ಫಿಫಾ” ಒಳಗೊಂಡು 2012 ರಲ್ಲಿ ಹಲವು ತನ್ನ ಬ್ಲಾಕ್‌ಬ್ಲಸ್ಟರ್ ಶೀರ್ಷಿಕೆಗಳಿಗೆ ಕೈನೆಕ್ಟ್ ಬೆಂಬಲಿಸಲಿದೆ ಎಂದು ಇಎ ಸ್ಪೋರ್ಟ್ಸ್ ಘೋಷಣೆ ಮಾಡಿದೆ. ಮುಂದಿನ 12 ತಿಂಗಳುಗಳಲ್ಲಿ, “The Sims™ 3 ಪೆಟ್ಸ್”, “ಫ್ಯಾಮಿಲಿ ಗೇಮ್ ನೈಟ್ 4” ಮತ್ತು 2012 ರ ಅತೀ ಬೃಹತ್ ಆಟವೆಂದೇ ಖಚಿತವಾಗಿರುವ “ಮಾಸ್ ಎಫೆಕ್ಟ್ 3” ಅನ್ನು ಒಳಗೊಂಡು ಕೈನೆಕ್ಟ್ ಅನ್ನು ಒಳಗೊಂಡಿರುವ ಹಲವಾರು ಹೆಚ್ಚು ಶೀರ್ಷಿಕೆಗಳನ್ನು ಸಹ ಇಎ ಹೊಂದಿದೆ.
Xbox 360 ನಲ್ಲಿ ಎಲ್ಲಾ ಅತ್ಯುತ್ತಮ ಶೀರ್ಷಿಕೆಗಳ ಜೊತೆಗೆ, ಯುಎಫ್‌ಸಿ ಜೊತೆಗೆ ಸೇರಿಕೊಂಡು ಹಲವು ಬ್ಲಾಕ್‌ಬಸ್ಟರ್ ಮನರಂಜನೆಯನ್ನು ಸಹ ಮೈಕ್ರೋಸಾಫ್ಟ್ ಘೋಷಿಸಿದೆ. Xbox ಲೈವ್ ಗೋಲ್ಡ್ ಸದಸ್ಯರುಗಳು ಲೈವ್ ಪೇ-ಪರ್-ವ್ಯೂ ಪಂದ್ಯಗಳು, ಕ್ಲಾಸಿಕ್ ಫೈಟ್‌ಗಳು, ಸಂದರ್ಶನಗಳು ಮತ್ತು ಪರದೆಯ ಹಿಂದಿನ ದೃಶ್ಯಗಳನ್ನು ವಿಶೇಷವಾಗಿ ವೀಕ್ಷಿಸಲು ಯುಎಫ್‌ಸಿಗೆ ಚಂದಾದಾರರಾಗಬಹುದು; ಇದು ತೀರಾ ಹೊಸತಾದ ಸಂವಹನದ ವಿಧಾನದಲ್ಲಿ ಓಕ್ಟಾಗನ್‌ಗೆ ಪ್ರವೇಶವಾಗಿದೆ.
ಮನೆಯ ಪ್ರತಿಯೊಬ್ಬರಿಗೂ ಆಟಗಳು ಮತ್ತು ಮನರಂಜನೆಯೊಂದಿಗೆ, ವಿಶ್ವದಾದ್ಯಂತ ಸಂವಹನಕಾರಿ ಮನರಂಜನೆಯ ಅತ್ಯುತ್ತಮವಾದವುಗಳನ್ನು ನಿಮ್ಮ ಕೊಠಡಿಗೆ ತರುವುದನ್ನು Xbox 360 ಮುಂದುವರಿಸಲಿದೆ.