ವಿಂಡೋಸ್ ಇಂಟರ್ನೆಟ್ ಎಕ್ಸ್‌ಪ್ಲೋರರ್ 9

 

                     

                                     ವಿಶ್ವದಲ್ಲಿ ಅತಿ ಹೆಚ್ಚು ಬಳಸಲ್ಪಡುತ್ತಿರುವ ಬ್ರೌಸರ್‌ನ ಇತ್ತೀಚಿನ ಆವೃತ್ತಿ ವಿಂಡೋಸ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್ 9ನ್ನು ಮೈಕ್ರೋಸಾಫ್ಟ್ ಕಾರ್ಪೋರೇಶನ್ ಇತ್ತೀಚೆಗೆ ಬಿಡುಗಡೆ ಮಾಡಿದೆ. ಎಸ್ಎಕ್ಸ್‌ಎಸ್‌ಡಬ್ಲ್ಯು ಇಂಟರಾಕ್ಟೀವ್ ಕಾನ್ಪರೆನ್ಸ್‌ನಲ್ಲಿ ಈ ಹೊಸ ಆವೃತ್ತಿಯನ್ನು 39 ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು. ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಸಾರ್ವಕಾಲಿಕವಾಗಿ ಮೈಕ್ರೋಸಾಫ್ಟಿನ ಅತಿಹೆಚ್ಚು ಡೌನ್‌ಲೋಡ್ ಆಗಿರುವ ಬೇಟಾ ಆಗಿದೆ. 40 ದಶಲಕ್ಷಗಳಿಗಿಂತಲೂ ಹೆಚ್ಚು ಡೌನ್‌ಲೋಡ್ ಆಗಿದ್ದು ಇದು ವಿಂಡೋಸ್ 7ನಲ್ಲಿ ಶೇ.2ಕ್ಕಿಂತಲೂ ಹೆಚ್ಚು ಬಳಕೆಯನ್ನು ಗಳಿಸಿದೆ. ಇದೀಗಾಗಲೇ ವಿಶ್ವಾದ್ಯಂತ 250 ಉನ್ನತ ಸೈಟ್‌ಗಳು ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರ ಸಾಮರ್ಥ್ಯಗಳ ಅನುಕೂಲ ಪಡೆದುಕೊಂಡು ತಮ್ಮ ಗ್ರಾಹಕರಿಗೆ ವಿವಿಧ ರೀತಿಯ ಅನುಭವಗಳನ್ನು ಒದಗಿಸುತ್ತಿದ್ದು ಹೆಚ್ಚಿನವುಗಳು http://www.BeautyoftheWeb.com ನಲ್ಲಿ ತೋರಿಸಲ್ಪಟ್ಟಿವೆ. ಒಟ್ಟಿಗೆ ಈ ಭಾಗೀದಾರರು ವೆಬ್‌ನಲ್ಲಿ ಒಂದು ಶತಕೋಟಿಗಿಂತಲೂ ಅಧಿಕ ಅಂತರ್ಜಾಲ ಬಳಕೆದಾರರನ್ನು ತಲುಪುತ್ತಾರೆ. ವರ್ಷ ಒಂದರ ಒಳಗಾಗಿ ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಯಂತ್ರಾಶ ಭಾಗೀದಾರರು ಮತ್ತು ವೆಬ್ ಸಮುದಾಯದ ಸಹಾಯದಿಂದಾಗಿ ಆರಂಭಿಕ ಮುನ್ನೋಟದಿಂದ ಅಂತಿಮ ಬಿಡುಗಡೆಗೆಯತ್ತ ಸಾಗಿದೆ.

InternetExplorer9
 
ಪ್ರಮುಖ ತಾಣಗಳು ಮತ್ತು ವಿನ್ಯಾಸಕಾರರಿಗೆ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಅನುಕೂಲ


ಇಂಟರ್ನೆಟ್ ಎಕ್ಸ್‌ಪ್ಲೋರರ್ 9ಅನ್ನು ವೆಬ್ ತಾಣಗಳನ್ನು ವಿಂಡೋಸ್ 7 ಮೂಲಕ ಹೆಚ್ಚು ತಲ್ಲೀನತೆಯ ಮತ್ತು ಹೆಚ್ಚು ಸುಂದರವಾದ ಅನುಭವಗಳನ್ನು ಸಮರ್ಥಗೊಳಿಸುವ ಮೂಲಕ ಮುಂದಕ್ಕೆ ಹಾಗೂ ಕೇಂದ್ರಕ್ಕೆ ತರಲು ವಿನ್ಯಾಸಗೊಳಿಸಲಾಗಿದೆ. ಪಿನ್ನ್‌ಡ್ ಸೈಟ್‌ಗಳು ಮತ್ತು ಜಂಪ್ ಲಿಸ್ಟ್ ಜನರಿಗೆ ಅವರ ವೆಬ್‌ಸೈಟ್‌ಗಳನ್ನು ನೇರವಾಗಿ ವಿಂಡೋಸ್ 7 ಟಾಸ್ಕ್‌ಬಾರ್‌ನಲ್ಲಿ ಹಾಕಲು ಸಮರ್ಥವಾಗಿದೆ. ಇವುಗಳು ಸ್ಥಳೀಯ ಅಪ್ಲಿಕೇಶನ್‌ಗಳಂತೆಯೇ ಅನುಭವ ನೀಡುತ್ತಿದ್ದು ಆ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದ ಕಾರ್ಯಗಳನ್ನು, ಅಂದರೆ ತಮ್ಮ ಇನ್‌ಬಾಕ್‌್ಂಗಳನ್ನು ಚೆಕ್ ಮಾಡುವುದು, ಸಂಗೀತ ತಾಣಗಳನ್ನು ಬದಲಿಸುವುದು, ಸ್ನೇಹಿತರ ಆಹ್ವಾನಗಳನ್ನು ಸ್ವೀಕರಿಸುವುದು ಮುಂತಾದವುಗಳನ್ನು ಅತ್ಯಂತ ಕ್ಷಿಪ್ರವಾಗಿ ಮಾಡಬಹುದಾಗಿದೆ. 


250 ಪ್ರಮುಖ ತಾಣಗಳಲ್ಲದೆ, 1000ಕ್ಕೂ ಅಧಿಕ ಇತರ ತಾಣಗಳು ಮತ್ತು ವಿನ್ಯಾಸಕಾರರು ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಮತ್ತು ವಿಂಡೋಸ್‌ 7 ನ ಹೊಸ ಲಕ್ಷಣಗಳ ಅನುಕೂಲ ಪಡೆಯುತ್ತಿದ್ದಾರೆ. ಇವುಗಳು ಫೇಸ್‌ಬುಕ್ ಮತ್ತು ಅಮೆಜಾನ್‌ನಂತಹ ದೊಡ್ಡ ತಾಣಗಳಂತಹವು ಮಾತ್ರವಲ್ಲದೆ, ವೆಬ್ ಮತ್ತು ವಿಶ್ವಾದ್ಯಂತ ಮುಂಚೂಣಿಯಲ್ಲಿರುವ ಅನುಭವಗಳನ್ನೂ ಸಹ ಒಳಗೊಂಡಿದೆ.


ಸಾಮಾಜಿಕ ಮತ್ತು ಮಾಹಿತಿ ನೆಟ್ವರ್ಕಿಂಗ್‌ನಲ್ಲಿ ಇಂಟರ್ನೆಟ್ ಭಾಗೀದಾರರಲ್ಲಿ ಫೇಸ್‌ಬುಕ್, ಟ್ವಿಟರ್ ಮತ್ತು ವರ್ಡ್‌ಪ್ರೆಸ್ ಸೇರಿದೆ.

ಇ-ಕಾಮರ್ಸ್‌ನಲ್ಲಿ ವಿಶ್ವಾದ್ಯಂತ ಮುಂಚೂಣಿಯಲ್ಲಿರುವ ಶಾಪಿಂಗ್ ತಾಣ ಅಮೆಜಾನ್, ನಂ ವನ್ ಏಲಂ ತಾಣ ಈಬೆ ಸೇರಿದೆ.

ಅಮೆರಿಕದಲ್ಲಿ ಅತಿಹೆಚ್ಚು ಬೇಡಿಕೆ ಇರುವ ಐದು ವೀಡಿಯೋ ಮತ್ತು ಸ್ಟ್ರೀಮಿಂಗ್ ಭಾಗೀದಾರರಲ್ಲಿ ಮೂರು ತಾಣಗಳಾದ ಹುಲು, ಬ್ರೆಕ್.ಕಾಮ್ ಮತ್ತು ಡೈಲಿಮೋಶನ್ ಸೇರಿದೆ. ಮುಂಚೂಣಿಯಲ್ಲಿರುವ ಪ್ರಮುಖ ಅಂತರ್ಜಾಲ ರೇಡಿಯೋ ತಾಣಗಳಾದ ಸ್ಲಾಕರ್, ಪಂಡೋರಾ ಅಂತರ್ಜಾಲ ರೇಡಿಯೋ ಮತ್ತು ಜಾಂಗೋ ಸೇರಿದೆ. ಇದಲ್ಲದೆ ವಿಶ್ವದ ಪ್ರಮುಖ ಬ್ರಾಡ್‌ಕಾಸ್ಟರ್‌ಗಳಾದ ಕೆನಡಾದಲ್ಲಿ ಸಿಬಿಸಿ ಮತ್ತು ಸಿಟಿವಿ, ಫ್ರಾನ್ಸ್‌ನಲ್ಲಿ ವಾಟ್.ಟಿವಿ ಮತ್ತು ಅಮೆರಿಕದಲ್ಲಿ ಸಿಎನ್ಎನ್ ಸೇರಿದೆ.


ಅಮೆರಿಕದ ಸುದ್ದಿ ವೆಬ್‌ಸೈಟ್ ಭಾಗೀದಾರರಲ್ಲಿ ವಾಲ್ ಸ್ಟ್ರೀಟ್ ಜರ್ನಲ್, ಯುಎಸ್ಎ ಟುಡೇ ಮತ್ತು ದಿ ಹಫ್ಫಿಂಗ್ಟನ್ ಒಳಗೊಂಡಿದೆ. ಅಂತೆಯೇ ವಿಶ್ವಾದ್ಯಂತ ಎಲ್ಲಾ ಪ್ರಮುಖ ಭೌಗೋಳಿಕ ಸ್ಥಳಗಳಲ್ಲೂ ಪ್ರಮುಖ ಮುಂಚೂಣಿಯ ಸುದ್ದಿ ತಾಣಗಳು ಸೇರಿವೆ.

ಹಲವಾರು ಭಾಗೀದಾರರು ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಈ ಕೆಳಗಿನವು ಸೇರಿವೆ:
• ಸ್ಲಾಕರ್.(Slacker) ತಮ್ಮ ಟಾಸ್ಕ್‌ಬಾರ್‌ಗಳಲ್ಲಿ ಸ್ಲಾಕರ್ ತಾಣವನ್ನು ಪಿನ್ ಮಾಡುವವರಿಗೆ ಒಂದು ತಿಂಗಳು ಪೂರ್ತಿ ಚಂದಾ ಉಚಿತ.
• ಗ್ರೂಪ್‌ಆನ್. (Groupon) ಇಂಟರ್ನೆಟ್ ಎಕ್ಸ್‌ಪ್ಲೋರರ್ ಜಂಪ್ ಲಿಸ್ಟ್‌ನಿಂದ ಮಾಡುವ ಪ್ರಥಮ ಖರೀದಿಗೆ ಗ್ರೂಪ್‌ಆನ್ ಬಕ್ಸ್‌ನಲ್ಲಿ ಐದು ಡಾಲರ್.
• ಹುಲು.(Hulu) ಹುಲ್ ಪಿನ್ ಮಾಡುವ ಬಳಕೆದಾರರಿಗೆ ಉಚಿತ ತಿಂಗಳ ಹುಲು ಪ್ಲಸ್ ಚಂದಾ
• ಈಬೆ.(eBay) ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಪಿನ್ನಿಂಗ್ ಮತ್ತು ಜಂಪ್ ಲಿಸ್ಟ್ ಫೀಚರ್‌ಗಳನ್ನು ಬಳಸಿ ಬಿಡ್ ಅಥವಾ ಖರೀದಿ ಮಾಡಿದರೆ ಕೂಪನ್‌ಗಳು ಅಥವಾ ಈಬೇ ಬಕ್ಸ್‌ಗಳು
• ಗಿಲ್ಟ್.(Gilt) ಜಂಪ್ ಲಿಸ್ಟ್ ಮೂಲಕ ನಿರ್ದಿಷ್ಟ ಮೊತ್ತದ ಖರೀದಿ ಮಾಡುವ ಗ್ರಾಹಕರಿಗೆ ಉತ್ಪನ್ನ ಪಿಂಡಿಗಳ ಸರಣಿ.

 

ಯಂತ್ರಾಂಶ ವೇಗ ವರ್ಧಕ
ಇಂಟರ್ನೆಟ್ ಎಕ್ಸ್‌ಪ್ಲೋ‌ರರ್‌ನ ಹೊಸ ಆವೃತ್ತಿಯು ಆಧುನಿಕ ವಿಂಡೋಸ್ ಪಿಸಿ ಯಂತ್ರಾಂಶ ಶಕ್ತಿಯ ಅನುಕೂಲವನ್ನು ಉಪಯೋಗಿಸಿಕೊಂಡು ವೆಬ್ ಬ್ರೌಸಿಂಗ್ ಕಾರ್ಯಕ್ಷಮತೆಯ ಸರ್ವಾಂಗೀಣ ಸುಧಾರಣೆ ಮಾಡುತ್ತದೆ. ಎಲ್ಲಾ ಗ್ರಾಫಿಕ್‌ಗಳು, ಪಠ್ಯ, ಆಡಿಯೋ ಮತ್ತು ವಿಡಿಯೋ ವಿಸ್ತರಿತ ಯಂತ್ರಾಂಶ ವರ್ಧಕ ಎಚ್‌ಟಿಎಂಎಲ್5 ಏಕೈಕ ಬ್ರೌಸರ್ ಇದಾಗಿದೆ.

 

ವಿಂಡೋಸ್ ಎಕ್ಸ್‌ಪ್ಲೋರರ್ 9 ಅನ್ನು ವಿಶ್ವಾಸಾರ್ಹ ಬ್ರೌಸರ್ ಆಗಿ ರಚಿಸಲಾಗಿದೆ. ವೆಬ್ ಇಂದು ಹೆಚ್ಚೆಚ್ಚು ಅಭದ್ರವಾಗುತ್ತಿರುವುದು ಮತ್ತು ಖಾಸಗೀತನವನ್ನು ಕಳೆದುಕೊಳ್ಳುತ್ತಿರುವುದನ್ನು ಮನಗಂಡು ಈ ಬ್ರೌಸರನ್ನು ಆಂತರಿವಾಗಿ ಸುದೃಢವಾಗಿ ನಿರ್ಮಿಸಲಾಗಿದೆ. ಖಾಸಗಿತನ ವಿಶ್ವಾಸಾರ್ಹ ತಂತ್ರಜ್ಞಾನಗಳನ್ನೊಳಗೊಂಡಿದ್ದು ಗ್ರಾಹಕರು ಆನ್‌ಲೈನಿನಲ್ಲಿ ಸುರಕ್ಷಿತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.


ಹೆಚ್ಚಿನ ಮಾಹಿತಿಯು http://www.BeautyoftheWeb.com ನಲ್ಲಿ ಲಭ್ಯವಿದೆ.

 


 

Read More on....