Integrated Drive Electronics
ಇಂಟೆಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್
ಇಂಟೆಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್ (ಐಡಿಇ) ಒಂದು ಸಾಮಾನ್ಯ ಇಲೆಕ್ಟ್ರಿಕ್ ಇಂಟರ್‌ಫೇಸ್. ಕಂಪ್ಯೂಟರ್ ಮದರ್ ಬೋರ್ಡ್‌ನ ಮಾಹಿತಿ ಹಾದಿಗಳು ಅಥವಾ ಬಸ್ ಮತ್ತು ಕಂಪ್ಯೂಟರ್‌ನ ಡೆಸ್ಕ್ ದಾಸ್ತಾನು ಉಪಕರಣಗಳಲ್ಲಿ ಇದು ಬಳಕೆಯಾಗುತ್ತದೆ.
ಐಡಿಇ ಇಂಟರ್‌ಫೇಸ್ ಇಬಿಎಂಪಿಸ್ ಉದ್ಯಮದ ಸ್ಟ್ಯಾಂಡರ್ಡ್ ವಸ್ತುವನ್ನು ಆಧಾರವಾಗಿರಿಸಿಕೊಂಡಿರುತ್ತದೆ. 16 ಬಿಟ್ ಸ್ಟಾಂಡರ್ಡ್ ಅಲ್ಲದೆ ಇತರ ಬಸ್ ಸ್ಟ್ಯಾಂಡರ್ಡ್‌ಗಳಲ್ಲಿ ಬಳಸಬಹುದು.
ಇಂದು ಮಾರಾಟವಾಗುವ ಬಹುತೇಕ ಕಂಪ್ಯೂಟರ್‌ಗಳು ಇಡಿಇಯ ಸುಧಾರಿತ ಆವೃತ್ತಿಯಾಗ ಎನ್‌ಹ್ಯಾನ್ಸ್‌ಡ್ ಇಂಟೆಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್(ಇಐಡಿಇ) ತಂತ್ರಜ್ಞಾನವನ್ನು ಬಳಸಿಕೊಂಡಿರುತ್ತದೆ. ಇಂದಿನ ಪೀಳಿಗೆಯ ಕಂಪ್ಯೂಟರ್‌ಗಳಲ್ಲಿ ಐಡಿಇ ನಿಯಂತ್ರಕಗಳನ್ನು ಮದರ್ ಬೋರ್ಡಿನಲ್ಲಿ ಅಳವಡಿಸಿರುತ್ತಾರೆ.
ಐಡಿಇಯನ್ನು ಗುಣಮಟ್ಟ ಮಾನದಂಡವಾಗಿ ಅಮೆರಿಕಾದ ನ್ಯಾಶನಲ್ ಸ್ಟಾಂಡರ್ಡ್ ಇನ್ಸ್‌ಟಿಟ್ಯೂಟ್ (ಎಎನ್ಎಸ್ಇ) 1990ರ ನವೆಂಬರ್‌ನಲ್ಲಿಯೇ ಅಂಗೀಕರಿಸಿದೆ. ಐಡಿಇಗೆ ಅದು ಮುಂದುವರಿದ ತಾಂತ್ರಿಕ ಸೇರ್ಪಡೆ(ಅಡ್ವಾನ್ಸ್‌ಡ್ ಟೆಕ್ನಿಕಲ್ ಅಟ್ಯಾಚ್‌ಮೆಂಟ್- ಎಟಿಎ) ಎಂಬ ಹೊಸ ನಾಮಕರಣವನ್ನು ಮಾಡಿದೆ. ಟಿ10 ಸಮಿತಿಯು ಇಡಿಇ ಅಥವಾ ಎಟಿಎಯನ್ನು ಅನುಸರಿಸತಕ್ಕ ಇತರ ಮಾನದಂಡಗಳಲ್ಲಿ ಇದೂ ಒಂದು ಎಂದು ಪರಿಗಣಿಸಿದೆ.
ಐಡಿಇ ಒಂದು ತಂತ್ರಾಂಶ ಅಭಿವೃದ್ಧಿ ವ್ಯವಸ್ಥೆ. ಇದೊಂದು ಕಂಪ್ಯೂಟರ್ ಹಾರ್ಡ್‌ವೇರ್ ಬಸ್. ಹಾರ್ಡ್‌ಡ್ರೈವ್ ಮತ್ತು ಆಫ್ಟಿಕಲ್ ಡ್ರೈವ್‌ಗಳಲ್ಲಿ ಬಳಕೆಯಲ್ಲಿರುತ್ತದೆ.
ಈಗ ಇಟಿಎ / ಎಟಿಎಪಿಇ ಎಂದು ಕರೆಯಲ್ಪಡುತ್ತಿರುವ ಇಂಟರ್‌ಫೇಸ್‌ನ ಮೊದಲ ಆವೃತ್ತಿಯನ್ನು ಅಭಿವೃದ್ಧಿಪಡಿಸಿದ್ದು ವೆಸ್ಟರ್ನ್ ಡಿಟಿಟಲ್ ಆಗ ಅದಕ್ಕೆ ನೀಡಿದ ಹೆಸರು ಇಂಟೆಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್(ಐಡಿಇ). ಕಂಟ್ರೋಲ್ ಡಾಟಾ ಕಾರ್ಪೋರೇಶನ್ ಇದರ ಹಾರ್ಡ್ ಡ್ರೈವ್ ಭಾಗವನ್ನು ತಯಾರಿಸಿದರೆ ಕಾಂಪ್ಯಾಕ್ ಕಂಪ್ಯೂಟರ್ ತನ್ನ ಸಿಸ್ಟಂನಲ್ಲಿ ಇ ಡ್ರೈವ್ ಅನ್ನು ಅಳವಡಿಸಿಕೊಂಡಿತು. ಇವರು ಕನೆಕ್ಟರನ್ನು ಅಭಿವೃದ್ಧಿ ಪಡಿಸಿದರು. ಸಂಕೇತ ಪ್ರೊಟೋಕಾಲ್‌ಗಳನ್ನು ಸುಧಾರಿಸಿದರು. ಮೊದಲ ಬಾರಿಗೆ ಇಂತಹ ಡ್ರೈವ್‌ಗಳು 1986ರಲ್ಲಿ ಕಾಂಪ್ಯಾಕ್ಟ್ ಪರ್ಸನಲ್ ಕಂಪ್ಯೂಟರ್‌ಗಳಲ್ಲಿ ಬಳಕೆಯಾದವು.
ಇಂಟೆಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್ ಎಂದರೆ ಕನೆಕ್ಟರ್ ಮತ್ತು ಇಂಟರ್‌ಫೇಸ್ ವ್ಯಾಖ್ಯಾನ ಮಾತ್ರವಲ್ಲ, ಇದು ಡ್ರೈವ್ ಕಂಟ್ರೋಲ್‌ಗಳನ್ನು ಡ್ರೈವ್‌ನೊಳಗೆ ಅಳವಡಿಸಿದ ಭಾಗವನ್ನು ಒಳಗೊಂಡಿದೆ.
ಹಳೆಯ ಕಂಪ್ಯೂಟರ್‌ಗಳಲ್ಲಿ ಒಂದು ಎಟಿಎ ಕಂಟ್ರೋಲರ್ ಮಾತ್ರ ಇರುತ್ತಿತ್ತು. ಎರಡು ಹಾರ್ಡ್ ಡ್ರೈವ್‌ಗಳನ್ನು ಸಂಭಾಳಿಸುವ ಸಾಮರ್ಥ್ಯ ಮಾತ್ರ ಅದಕ್ಕಿತ್ತು. ಸಿಡಿ ರೋಂಗಳು ಅಭಿವೃದ್ಧಿಗೊಂಡಾಗ ಎರಡು ಹಾರ್ಡ್‌ಡ್ರೈವ್‌ಗಳನ್ನು ಅಳವಡಿಸಿದ್ದ ಹಲವು ಕಂಪ್ಯೂಟರ್‌ಗಳು ಇದನ್ನು ಸ್ವೀಕರಿಸಲು ನಿರಾಕರಿಸಿದವು. ಸಿಡಿ ರೋಂ ಸೇರಿಸಬೇಕಿದ್ದರೆ ಒಂದು ಡ್ರೈವ್‌ಅನ್ನು ತೆಗೆದು ಹಾಕಬೇಕಾದ ಪರಿಸ್ಥಿತಿ ಬಂತು.
ಆಗ ಎಸ್‌ಸಿಎಸ್ಇಯು ಸಿಡಿರೋಂಗೆ ವಿಸ್ತರಣಾ ಘಟಕವಾಗಿ ದೊರೆಯುತ್ತಿದ್ದಾದರೂ, ಎಸ್‌ಸಿಎಸ್ಐಯೊಂದಿಗೆ ಉಪಕರಣಗಳು ದುಬಾರಿಯಾಗಿದ್ದವು. ಆಗ ಕಡಿಮೆ ಖರ್ಚಿನ ಪರಿಹಾರವಾಗಿ ದೊರೆತದ್ದು ಎರಡನೇ ಎಟಿಎ ಇಂಟರ್‌ಫೇಸ್. ಇದು ಧ್ವನಿಕಾರ್ಡ್ (ಸೌಂಡ್ ಕಾರ್ಡ್)ನಲ್ಲಿ ಇದೊಂದು ವಿಸ್ತರಣಾ ಸಾಧ್ಯೆತೆಯಾಗಿ ಬಳಕೆಯಾಯಿತು. ಮೊದಲ ಪೀಳಿಗೆಯ ಉದ್ಯಮ ಪಿಸಿಗಳು ಆಂತರಿಕ ಧ್ವನಿಪೆಟ್ಟಿಗೆಗಳಿಂದ ಬೀಪ್ ಶಬ್ದ ಹೊರಡಿಸಿದರೆ ಬೇರಾವ ಧ್ವನಿಗಳನ್ನು ಹೊರಡಿಸುವ ಸಾಮರ್ಥ್ಯ ಹೊಂದಿರಲಿಲ್ಲ. ಆಗ ಹಿನ್ನೆಲೆ ಧ್ವನಿ, ರಾಗಗಳು ಅವುಗಳಿಗೆ ಅಗತ್ಯವೂ ಇರಲಿಲ್ಲ. ಆದರೆ ಸಿಡಿರೋಂಗಳ ಪ್ರವೇಶದಿಂದ ಡಿಜಿಟಲ್ ಧ್ವನಿ ವ್ಯವಸ್ಥೆಯನ್ನು ಕಂಪ್ಯೂಟರ್‌ಗಳಿಗೆ ಸೇರಿಸುವ ಅಗತ್ಯ ಬಂತು. ಮಲ್ಟಿಮೀಡಿಯಾ ಪರ್ಸನಲ್ ಕಂಪ್ಯೂಟರ್‌ಗಳು ರೂಪುಗೊಂಡವು.
1994ರಲ್ಲಿ ಸುಧಾರಿತ ಅಥವಾ ಹೆಚ್ಚು ಸಾಮರ್ಥ್ಯದ ಇಡಿಇ (ಎನ್‌ಹ್ಯಾನ್ಸ್‌ಡ್ ಇಡಿಇ) ವ್ಯವಸ್ಥೆ ಜಾರಿಗೆ ಬಂದಿತು. ಇದು ಹಳೆಯ ಎಟಿಎ-1 ಮತ್ತು ಸಿಡಿ ರೋಂ ಬಳಕೆಗೆ ಬಂದಾಗಿನ ಎರಡನೇ ತಲೆಮಾರಿನ ಎಟಿಎ ಇಂಟರ್ಫೇಡಸ್ ಅಂಶಗಳನ್ನು ಒಳಗೊಂಡಿರುವ ಒಂದು ವ್ಯವಸ್ಥೆಯಾಗಿದೆ.
ಇಂದು ಇಂಟೆಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್(ಐಡಿಇ) ಮತ್ತು ಎನ್‌ಹ್ಯಾನ್ಸ್‌ಡ್ ಐಡಿಇ ವಿವರಣೆಯನ್ನು ಎಟಿಎ ಒಳಗೊಂಡಂತೆ ನೀಡಲಾಗುತ್ತದೆ. ಪ್ರತಿ ಎಟಿಎ ಡ್ರೈವ್ ಕೂಡಾ ಇಂಟಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್ ಆಗಿರುತ್ತದೆ.
ಕಂಪ್ಯೂಟರ್‍ಗಳಲ್ಲಿ ಮಾಹಿತಿ ದಾಸ್ತಾನು ಬಹಳ ಮುಖ್ಯವಾಗಿದೆ. ಹೆಚ್ಚಿನ ಪರ್ಸನಲ್ ಕಂಪ್ಯೂಟರ್‌ಗಳು ಪ್ಲಾಪಿ ಡ್ರೈವ್, ಹಾರ್ಡ್ ಡ್ರೈವ್, ಸಿಡಿ ರೋಂ ಡ್ರೈವ್‌ಗಳಲ್ಲಿ ಯಾವುದಾದರೊಂದು ದಾಸ್ತಾನು ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ಉಪಕರಣಗಳು ಕಂಪ್ಯಟರ್‌ಗೆ ಇಂಟೆಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್(ಐಡಿಇ) ಮೂಲಕ ಸಂಪರ್ಕ ಪಡೆದುಕೊಂಡಿರುತ್ತದೆ. ಇದಕ್ಕೆ ಐಡಿಇ ಸರಿಯಾದ ತಂತ್ರಾಶ ಹೊಂದಿಲ್ಲ. ಇದರ ಮೂಲ ಹೆಸರು ಎಟಿ ಅಟ್ಯಾಚ್‌ಮೆಂಟ್ (ಎಟಿಎ)