Microsoft Announces Global Availability of Internet Explorer 9
ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರ ಜಾಗತಿಕ ಲಭ್ಯತೆ ಮೈಕ್ರೋಸಾಫ್ಟ್ ನಿಂದ ಘೋಷಣೆ
ವಿಶ್ವದಲ್ಲಿ ಅತಿ ಹೆಚ್ಚು ಬಳಸಲ್ಪಡುವ ಬ್ರೌಸರ್ ಆಗಿರುವ ವಿಂಡೋಸ್ ಎಕ್ಸ್‌ಪ್ಲೋರರ್ 9ರ ಇತ್ತೀಚಿನ ಆವೃತ್ತಿಯ ಅನಾವರಣವನ್ನು ಮೈಕ್ರೋಸಾಫ್ಟ್ ಘೋಷಿಸಿದೆ. 39 ಭಾಷೆಗಳಲ್ಲಿ ಲಭ್ಯವಿರುವ ಇದರ ಬಿಡುಗಡೆಯ ಘೋಷಣೆಯನ್ನು ಎಸ್ಎಕ್ಸ್ಎಸ್‌ಡಬ್ಲ್ಯೂ (SXSW) ಸಂವಾದ ಸಮ್ಮೇಳನದಲ್ಲಿ ಮಾಡಲಾಯಿತು. ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಇದುವರೆಗೆ ಮೈಕ್ರೋಸಾಫ್ಟ್‌ನ ಅತಿಹೆಚ್ಚು ಡೌನ್‌ಲೋಡ್ ಆಗಿರುವ ಬ್ರೌಸರ್ ಬೇಟಾ ಆಗಿದ್ದು, 40 ದಶಲಕ್ಷಕ್ಕಿಂತಲೂ ಅಧಿಕ ಡೌನ್ ಲೋಡ್ ಗಳಾಗಿವೆ ಮತ್ತು ಇದೀಗಾಗಲೇ ವಿಂಡೋಸ್ 7ನಲ್ಲಿ ಶೇಕಡಾ ಎರಡಕ್ಕಿಂತಲೂ ಹೆಚ್ಚು ಬಳಕೆಯನ್ನು ಸಂಪಾದಿಸಿದೆ. ಇದಿಗಾಗಲೇ, ವಿಶ್ವಾದ್ಯಂತ 250 ಉನ್ನತ ಸೈಟುಗಳು ತಮ್ಮ ಗ್ರಾಹಕರಿಗೆ ವ್ಯತ್ಯಸ್ಥವಾದ ಅನುಭವಗಳನ್ನು ಒದಗಿಸಲು ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರ ಸಾಮರ್ಥ್ಯಗಳ ಅನುಕೂಲ ಪಡೆಯುತ್ತಿವೆ. ಇವುಗಳ ಲಕ್ಷಣಗಳನ್ನು http://www.BeautyoftheWeb.com ಇಲ್ಲಿ ಕಾಣಬಹುದಾಗಿದೆ. ಒಟ್ಟಾಗಿ, ಈ ಭಾಗೀದಾರರು ವೆಬ್‌ನಲ್ಲಿ ಒಂದು ಶತಕೋಟಿಗಿಂತಲೂ ಸಕ್ರಿಯ ಅಂತರ್ಜಾಲ ಬಳಕೆದಾರರನ್ನು ತಲುಪುತ್ತಾರೆ.

"ವೆಬ್‌ನ ಶ್ರೇಷ್ಠ ಅನುಭವವೆಂದರೆ, ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರೊಂದಿಗೆ ವಿಂಡೋಸ್‌ನಲ್ಲಿ" ಎಂಬುದಾಗಿ ಮೈಕ್ರೋಸಾಫ್ಟ್‌ನಲ್ಲಿ ವಿಂಡೋಸ್ ಇಂಟರ್ನೆಟ್ ಎಕ್ಸ್‌ಪ್ಲೋರರ್‍ನ ಕಾರ್ಪೋರೆಟ್ ಉಪಾಧ್ಯಕ್ಷ ಡೀನ್ ಹಚಾಮೋವಿಚ್ ಹೇಳಿದ್ದಾರೆ. "ಇಂದು, ವಿಂಡೋಸ್ ಮತ್ತು ಇಂಟರ್ನೆಟ್ ಎಕ್ಸ್‌ಪ್ಲೋರರ್‍ನ ಮೂಲಕ ವೆಬ್ ಶ್ರೇಷ್ಠ ಪಿಸಿ ಹಾರ್ಡ್‌ವೇರ್‌ನ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಹೊರಗೆಡಹ ಬಹುದಾಗಿದೆ. ಪಿನ್ನ್‌ಡ್ ಸೈಟ್‌ಗಳಂತಹ ಗುಣಲಕ್ಷಣಗಳೊಂದಿಗೆ ವಿಂಡೋಸ್ 7ನೊಳಗೆಯೇ ಹೆಚ್ಚು ಅಪ್ಲಿಕೇಶನ್‌ಗಳಂತೆಯೇ ವೆಬ್‌ಸೈಟ್‌ಗಳೂ ಸಹ ಕೆಲಸ ಮಾಡಬಹುದಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ, ಹಾರ್ಡ್‌ವೇರ್ ಪಾಲುದಾರರು ಮತ್ತು ವೆಬ್ ಸಮುದಾಯದ ಸಹಾಯದೊಂದಿಗೆ, ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಆರಂಭಿಕ ಪೂರ್ವ ವೀಕ್ಷಣೆಯಿಂದ ಅಂತಿಮ ಬಿಡುಗಡೆಯ ತನಕ ಸಾಗಿದೆ" ಎಂದು ಅವರು ಹೇಳಿದರು.
ಉನ್ನತ ಸೈಟ್‌ಗಳು ಮತ್ತು ವಿನ್ಯಾಸಕಾರರು ಇಂಟರ್ನೆಟ್ ಎಕ್ಸ್‌ಪ್ಲೋರರ್‍ನ ಅನುಕೂಲ ಪಡೆಯುತ್ತಾರೆ
ವಿಂಡೋಸ್ 7 ಮುಖಾಂತರ ಸೈಟ್‌ಗಳನ್ನು ಎದುರಿಗೆ ಮತ್ತು ಕೇಂದ್ರಕ್ಕೆ ತರುವಂತೆ ಇಂಟರ್ನೆಟ್ ಎಕ್ಸ್‌ಪ್ಲೋರರ್ 9ನ್ನು ವಿನ್ಯಾಸಗೊಳಿಸಲಾಗಿದೆ. ಪಿನ್ನ್‌ಡ್ ಸೈಟ್‌ಗಳು ಮತ್ತು ಜಂಪ್ ಲಿಸ್ಟ್ ನಂತಹ ಲಕ್ಷಣಗಳು ಬಳಕೆದಾರರಿಗೆ ತಮ್ಮ ವೆಬ್‌ಸೈಟ್‌ಗಳನ್ನು ನೇರವಾಗಿ ವಿಂಡೋಸ್ 7 ಟಾಸ್ಕ್‌ಬಾರ್‌ಗೆ ತರಲು ಶಕ್ತವಾಗಿಸುತ್ತದೆ. ಇವುಗಳು ಸ್ಥಳೀಯ ಅಪ್ಲಿಕೇಶನ್‌ಗಳಾಗಿದ್ದರೂ, ಆ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದಂತಹ ಇನ್‌ಬಾಕ್ಸ್‌ಗಳನ್ನು ಚೆಕ್ ಮಾಡುವುದು, ಮ್ಯೂಸಿಕ್ ಸ್ಟೇಶನ್ ಬದಲಿಸುವುದು, ಸ್ನೇಹದ ಆಹ್ವಾನಗಳನ್ನು ಸ್ವೀಕರಿಸುವುದು ಅಥವಾ ಬ್ರೇಕಿಂಗ್ ನ್ಯೂಸ್‌ಗಳನ್ನು ನೋಡುವುದು ಮುಂತಾದ ಕಾರ್ಯಗಳನ್ನು ಕ್ಷಿಪ್ರವಾಗಿ ಮತ್ತು ಸುಲಭವಾಗಿ ನಂತರದಲ್ಲಿ ಮಾಡಬಹುದಾಗಿದೆ.
250 ಉನ್ನತವಾದ ಸೈಟ್‌ಗಳಲ್ಲದೆ, 1000ಕ್ಕೂ ಹೆಚ್ಚು ಇತರ ಸೈಟ್‍ಗಳು ಮತ್ತು ವಿನ್ಯಾಸಗಾರರು ಈ ಹೊಸ ಗುಣಲಕ್ಷಣಗಳ ಅನುಕೂಲಗಳನ್ನು ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಮತ್ತು ವಿಂಡೋಸ್ 7 ನೊಂದಿಗೆ ಪಡೆಯುತ್ತವೆ. ಈ ಸೈಟ್‌ಗಳು ಫೇಸ್ ಬುಕ್ ಮತ್ತು ಅಮೆಜಾನ್ ನಂತಹ ಬೃಹತ್ ಸೈಟ್ ಗಳನ್ನು ಸೇರಿಸಿಕೊಂಡಿವೆ ಮಾತ್ರವಲ್ಲದೆ, ವಿಶ್ವಾದ್ಯಂತ ಮತ್ತು ವೆಬ್ ಆದ್ಯಂತ ಮುಂಚೂಣಿಯ ಅನುಭವಗಳನ್ನೂ ಸೇರಿಸಿಕೊಂಡಿವೆ.
o ಸಾಮಾಜಿಕ ಮತ್ತು ಮಾಹಿತಿ ನೆಟ್ ವರ್ಕಿಂಗ್‌ನಲ್ಲಿ, ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರ ಪಾಲುದಾರರಲ್ಲಿ, ಅಮೆರಿಕ, ಯುರೋಪ್, ರಶ್ಯ, ಕೊರಿಯ ಮತ್ತು ಲ್ಯಾಟಿನ್ ಅಮೆರಿಕದ ಮುಂಚೂಣಿಯಲ್ಲಿರುವ ವೃತ್ತಿಪರ ನೆಟ್‌ವರ್ಕ್ ಗಳಲ್ಲದೆ, ಹೆಚ್ಚುವರಿಯಾಗಿ ಫೇಸ್ ಬುಕ್, ಟ್ವಿಟರ್ ವಿಶ್ವದ ನಂ 1 ಬ್ಲಾಗಿಂಗ್ ವೇದಿಕೆಯಾಗಿರುವ ವರ್ಡ್‌ಪ್ರೆಸ್ ನಂತಹ ವರ್ಗೀಕೃತ ನಾಯಕರು ಸೇರಿದ್ದಾರೆ.
o ಈ ಕಾಮರ್ಸ್‌ನಲ್ಲಿ, ವಿಶ್ವಾದ್ಯಂತವಾದ ಮುಂಚೂಣಿಯ ಶಾಪಿಂಗ್ ಸೈಟ್ ಅಮೆಜಾನ್, ಮತ್ತು ನಂ. 1 ಏಲಂ ಸೈಟ್ ಈಬೇ (eBay) ಮಾತ್ರವಲ್ಲದೆ, ಎಮರ್ಜೆಂಟ್ "ಡೈಲಿ ಡೀಲ್ಸ್" ಸ್ಪೇಸ್, ಗ್ರೂಪ್ಆನ್ ಸಹ ಪಾಲುದಾರರಲ್ಲಿ ಸೇರಿದೆ.
o ವೀಡಿಯೋ ಮತ್ತು ಸ್ಟ್ರೀಮಿಂಗ್ ಪಾರ್ಟನರ್‌ಗಳಲ್ಲಿ ಅಮೆರಿಕಾದ ಬೇಡಿಕೆ ಮೇಲೆ ವಿಡಿಯೋದ ಐದು ಉನ್ನತ ಸೈಟ್‌ಗಳಲ್ಲಿ ಮೂರು ಸೈಟ್ ಗಳಾದ ಹುಲು, ಬ್ರೇಕ್ ಡಾಟ್ ಕಾಮ್ ಮತ್ತು ಡೇಲಿ ಮೋಷನ್ (Hulu, Break.com and Dailymotion) ಸೇರಿವೆ - ಮತ್ತು ಮುಂಚೂಣಿಯಲ್ಲಿರುವ ಇಂಟರ್ನೆಟ್ ರೇಡಿಯೋ ಸೈಟ್‌ಗಳಾದ ಸ್ಲಾಕರ್, ಪಂಡೋರಾ ಇಂಟರ್ನೆಟ್ ರೇಡಿಯೋ ಮತ್ತು ಜಾಂಗೋ (Slacker, Pandora internet radio and Jango) ಸೇರಿದೆ. ಇದಲ್ಲದೆ ಪಾಲುದಾರರಲ್ಲಿ ವಿಶ್ವದ ಉನ್ನತ ಆಕಾಶವಾಣಿಗಳಾದ ಕೆನಡಾದ ಸಿಬಿಸಿ ಮತ್ತು ಸಿಟಿವಿ, ಫ್ರಾನ್ಸ್‌ನ ವಾಟ್.ಟಿವಿ(Wat.tv) ಮತ್ತು ಅಮೆರಿಕಾದ ಸಿಎನ್ಎನ್ ಸೇರಿದೆ.
o ಅಮೆರಿಕಾದ ನ್ಯೂಸ್ ವೆಬ್‌ಸೈಟ್ ಪಾಲುದಾರರಲ್ಲಿ ವಾಲ್ ಸ್ಟ್ರೀಟ್ ಜರ್ನಲ್, ಯುಎಸ್ಎ ಟುಡೆ ಮತ್ತು ದಿ ಹಫಿಂಗ್ಟನ್ ಪೋಸ್ಟ್ ಸೇರಿದಂತೆ ವಿಶ್ವಾದ್ಯಂತ ಎಲ್ಲಾ ಪ್ರಮುಖ ಸ್ಥಳಗಳ ಮುಂಚೂಣಿಯ ಹಲವಾರು ಸುದ್ದಿತಾಣಗಳು ಸೇರಿವೆ.
ಹಲವಾರು ಪಾಲುದಾರರು ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರ ಗ್ರಾಹಕರಿಗೆ ವಿಶೇಷ ಆಹ್ವಾನವನ್ನು ಘೋಷಿಸುತ್ತಿದ್ದು ಇವುಗಳು ಮುಂಬರುವ ವಾರಗಳಲ್ಲಿ ಲಭ್ಯವಾಗಲಿದ್ದು, ಅವುಗಳಲ್ಲಿ ಈ ಕೆಳಗಿನವುಗಳು ಸೇರಿವೆ.
• ಸ್ಲಾಕರ್ (Slacker) : ತಮ್ಮ ಟಾಸ್ಕ್ ಬಾರ್ ಗಳಿಗೆ ಸ್ಲಾಕರ್ ಸೈಟ್ ಪಿನ್ ಮಾಡುವ ಗ್ರಾಹಕರಿಗೆ ಒಂದು ತಿಂಗಳ ಉಚಿತ ಚಂದಾ.
• ಗ್ರೂಪ್ಆನ್ (Groupon) : ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರ ಜಂಪ್ ಲೀಸ್ಟ್ ನಿಂದ ಮೊದಲ ಖರೀದಿ ಮಾಡುವ ವೇಳೆಗೆ ಗ್ರೂಪ್ಆನ್ ಬಕ್ಸ್‌ಗಳಲ್ಲಿ ಐದು ಡಾಲರ್ ಗಳು.
• ಹುಲು (Hulu) : ಹುಲು ಪಿನ್ ಮಾಡುವ ಗ್ರಾಹಕರಿಗೆ ಒಂದು ತಿಂಗಳ ಉಚಿತ ಹುಲು ಪ್ಲಸ್ ಚಂದಾ.
• ಈಬೇ (eBay) : ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರ ಪಿನ್ನಿಂಗ್ ಮತ್ತು ಜಂಪ್ ಲೀಸ್ಟ್ ಬಳಸಿ ಖರೀದಿಗಾಗಿ ಬಿಡ್ ಮಾಡಲು ಕೂಪನ್ ಗಳು ಅಥವಾ ಈಬೇ ಬಕ್ ಗಳ ಆಹ್ವಾನ.
• ಗಿಲ್ಟ್ (Gilt) : ಜಂಪ್ ಲೀಸ್ಟ್ ಮುಖಾಂತರ ನಿರ್ದಿಷ್ಟ ಮೊತ್ತದ ಖರೀದಿಗಳನ್ನು ಮಾಡುವ ಗ್ರಾಹಕರಿಗೆ ಉತ್ಪನ್ನ ಸರಣಿಗಳ ಒಂದು ಕಂತೆ.
ವೇಗವೀಗ ಸುಂದರ: ಹಾರ್ಡ್ ವೇರ್ ವೇಗವರ್ಧಕದೊಂದಿಗೆ ಇಂಟರ್ನೆಟ್ ಎಕ್ಸ್‌ಪ್ಲೋರರ್ 9
ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಹೊಸ ಆವೃತ್ತಿಯು ಸರ್ವಾಂಗೀಣ ವೆಬ್ ಬ್ರೌಸಿಂಗ್ ಕಾರ್ಯಕ್ಷಮತೆಯ ಸುಧಾರಣೆಗೊಳಿಸಲು ಅಧುನಿಕ ವಿಂಡೋಸ್ ಪಿಸಿಗಳ ಹಾರ್ಡ್ ವೇರ್ ಶಕ್ತಿಯ ಅನುಕೂಲವನ್ನು ಪಡೆದುಕೊಳ್ಳುತ್ತದೆ. ಎಚ್‌ಟಿಎಂಎಲ್5 ಸ್ಪಾನಿಂಗ್‌ನ ಎಲ್ಲಾ ಗ್ರಾಫಿಕ್‌ಗಳು, ಪಠ್ಯ, ಆಡಿಯೋ ಮತ್ತು ವೀಡಿಯೋಳನ್ನು ಹಾರ್ಡ್‌ವೇರ್ ಚುರುಕು ಗೊಳಿಸವಂಹ ಬ್ರೌಸರ್ ಇದೊಂದೇ ಆಗಿದೆ. ಈ ಮೊದಲು ವೆಬ್ ಬ್ರೌಸರ್‌ಗಳು ಮುಟ್ಟದೇ ಇದ್ದಂತಹ ಪಿಸಿಯ 90 ಶೇಕಡಾ ಶಕ್ತಿಯನ್ನು ಹೊರಗೆಡಹುವ ಮೂಲಕ ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಗ್ರಾಪಿಕ್ಸ್ ಪ್ರೊಸೆಸಿಂಗ್ ಯೂನಿಟ್ (ಜಿಪಿಯು) ಶಕ್ತಿಯನ್ನು ಚಾಲಕ ಶಕ್ತಿಯಾಗಿ ಮಾಡುತ್ತದೆ.
ಡೆವಲಪರ್‌ಗಳು ಇದೀಗ ಹೆಚ್ಚು ಕ್ಷಿಪ್ರವಾದ ಹಾಗೂ ಹೆಚ್ಚು ಇಮ್ಮರ್ಸೀವ್ ಆದ ಎಚ್‌ಟಿಎಂಎಲ್5 ಬಳಸುತ್ತಾ ಸ್ಥಳೀಯವೆಂದು ಭಾವಿಸುವಂತಹ ವೆಬ್ ಸೈಟ್‌ಗಳನ್ನು ರಚಿಸಬಹುದಾಗಿದೆ. ಅಂತೆಯೇ ಅಡೋಬ್ ಫ್ಲಾಶ್ ಪ್ಲೇಯರ್ ಮತ್ತು ಮೈಕ್ರೋಸಾಫ್ಟ್ ಸಿಲ್ವರ್ ಲೈಟ್ ಗಳಂತಹ ರನ್ ಟೈಮ್‌ಗಳನ್ನೂ ರಚಿಸಬಹುದಾಗಿದೆ. ಇವೆರಡೂ ಸಹ ತಮ್ಮ ನಂತರದ ಆವೃತ್ತಿಗಳಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರಲ್ಲಿ ಹಾರ್ಡ್‌ವೇರ್ ಚುರುಕಾಗಿಸುವ ಅನುಕೂಲತೆಗಳನ್ನು ಪಡೆಯಲಿವೆ.
ಖಾಸಗೀತನ ಮತ್ತು ಸುರಕ್ಷಿತ ಆನ್‌ಲೈನ್ ಸುಧಾರಣೆ
ವೆಬ್ ಕಡಿಮೆ ಸುರಕ್ಷತೆ ಮತ್ತು ಖಾಸಗೀತನವನ್ನು ಹೊಂದಿರುವುದರಿಂದ, ಇಂಟರ್ನೆಟ್ ಎಕ್ಸ್‌ಪ್ಲೋರರನ್ನು ಒಂದು ನಂಬಿಕಸ್ಥ ಬ್ರೌಸರ್ ಆಗಿ ವಿನ್ಯಾಸಗೊಳಿಸಲಾಗಿದೆ. ಏಕೆಂದರೆ, ಇದರಲ್ಲಿ ಸುಭದ್ರವಾಗಿ ರಚಿಸಲಾಗಿರುವ ಆಂತರಿಕ ಭದ್ರತೆ, ಖಾಸಗಿತನ ಮತ್ತು ಗ್ರಾಹಕರನ್ನು ಸುರಕ್ಷಿತ ಆನ್‌ಲೈನ್ ಬಳಕೆಯ ವಿಶ್ವಾಸಾರ್ಹ ತಂತ್ರಜ್ಞಾನಗಳನ್ನು ಇದು ಹೊಂದಿದೆ.
ಡಿಸೆಂಬರ್‌ನಲ್ಲಿ ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್‌ಪ್ಲೋರರ್ 9ರಲ್ಲಿ ನಿಗಾ ವಹಿಸುವ ರಕ್ಷಣೆಯನ್ನು ಪರಿಚಯಿಸಿತು. ಮಾಹಿತಿಯನ್ನು ಹಂಚಿಕೊಳ್ಳಲು ಯಾವ ವೆಬ್ ಸೈಟ್‌ಗಳಿಗೆ ಆದ್ಯತೆ ನೀಡಬಾರದು ಎಂಬುನ್ನು ಗ್ರಾಹಕರಿಗೆ ಸೂಚಿಸುವುದನ್ನು ಶಕ್ತಗೊಳಿಸುವ ಮೂಲಕ ಇದು ಜನರು ವೆಬ್‌ನಲ್ಲಿ ಸಂಚರಿಸುವಾಗ ಅವರು ಯಾವ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ ಎಂಬ ನಿಯಂತ್ರಣ ಹೇರುತ್ತದೆ. ಗ್ರಾಹಕರು ಇದನ್ನು ನಿಗಾ ವಹಿಸುವ ರಕ್ಷಣಾ ಪಟ್ಟಿಗಳನ್ನು ಇಂಟರ್ನೆಟ್ ಎಕ್ಸ್‌ಪ್ಲೋರರ್ 9ಕ್ಕೆ ಸೇರಿಸುವ ಮೂಲಕ ಮಾಡುತ್ತಾರೆ. ಮತ್ತು ಪ್ರೈವೆಸಿ ಚಾಯಿಸ್, ಟ್ರಸ್ಟ್ಇ, ಆಬೈನ್ ಮತ್ತು ಆಡ್‌ಬ್ಲಾಕ್ ಪ್ಲಸ್ (PrivacyChoice, TRUSTe, Abine and Adblock Plus) ಗಳಂತಹ ಪಾಲುದಾರರು ಈ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಆನ್‌ಲೈನ್ ನಲ್ಲಿ ಜನರ ಸುರಕ್ಷತೆಗೆ ಮಾಲ್‌ವೇರ್ ನಂ.1 ಅಪಾಯವಾಗಿದೆ, ಮತ್ತು ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಸಮಗ್ರವಾದ ಸ್ಮಾರ್ಟ್‌ಸ್ಕ್ರೀನ್ ಮಾಲ್‌ವೇರ್ ರಕ್ಷಣೆ (SmartScreen malware protection) ಯೊಂದಿಗೆ ಪ್ರಥಮ ಡೌನ್ ಲೋಡ್ ನಿರ್ವಾಹಕವನ್ನು ಒದಗಿಸುತ್ತದೆ. ಈ ಬ್ರೌಸರ್ ಸ್ಮಾರ್ಟ್ ಸ್ಕ್ರೀನ್ ಡೌನ್ ಲೋಡ್ ರೆಪ್ಯುಟೇಶನ್ ಅನ್ನೂ ಸಹ ಪರಿಚಯಿಸುತ್ತದೆ. ಇದು ಒಂದು ನವನವೀನ ಬ್ರೌಸರ್ ಲಕ್ಷಣವಾಗಿದ್ದು, ಇದು ಚಿರಪರಿಚಿತ ಕಡತಗಳಿಗೆ ಅನಗತ್ಯ ಎಚ್ಚರಿಕೆ ನೀಡುವುದನ್ನು ತೆಗೆದು ಹಾಕಲು ಮತ್ತು ದುರುದ್ದೇಶ ಪೀಡಿತವಾದ ಹೆಚ್ಚಿನ ಅಪಾಯವನ್ನು ಡೌನ್ಲೋೋಡ್ ಒಂದು ಹೊಂದಿರುವಾಗ ಹೆಚ್ಚು ತೀವ್ರವಾದ ಎಚ್ಚರಿಕೆ ನೀಡಲು ಇದು ಪ್ರತಿಷ್ಠಾ ಮಾಹಿತಿಯನ್ನು (reputation data) ಬಳಸುತ್ತದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಸಾಮಾಜಿಕವಾಗಿ ಸೃಷ್ಟಿಸಲಾಗಿರುವ ಮಾಲ್‌ವೇರ್ ದಾಳಿಗಳನ್ನು ಶೇಕಡಾ 99ರಷ್ಚು ತಡೆಯುತ್ತಿದ್ದು, ಇದರ ಸಾಧ್ಯತೆ ಫೈರ್‌ಫಾಕ್ಸಿಗಿಂತ ಐದು ಪಟ್ಟು ಮತ್ತು ಗೂಗಲ್ ಕ್ರೋಮ್ ಗಿಂತ 33 ಪಟ್ಟು ಹೆಚ್ಚು ಎಂಬುದನ್ನು ಅಧ್ಯಯನಗಳು ತೋರಿಸಿವೆ.
ಉತ್ತಮ ವೆಬ್‌ಗಾಗಿ ಹೆಚ್ಚಿನ ನಿರೀಕ್ಷೆಗಳು
ವೆಬ್ ಬಳಕೆಯು ಪಿಸಿ ಅಪ್ಲಿಕೇಶನ್‌ಗಳಂತೆ ಸ್ಥಳೀಯವಾಗಿ ಭಾವಿಸುವಂತಾಗುವ ಹೊಸ ಅನುಭವಗಳನ್ನು ಸೃಷ್ಟಿಸುತ್ತಾ, ವಿಶ್ವಾದ್ಯಂತ ಪಾಲುದಾರರು ವಿಂಡೋಸ್ ಮತ್ತು ಇಂಟರ್ನೆಟ್ ಎಕ್‌್ಿಪ್ಲೋರರ್ 9 ಬಳಸುವ ಮೂಲಕ ತಮ್ಮ ವೆಬ್‌ಸೈಟ್‌ಗಳನ್ನು ಮರು ನಿರ್ಮಿಸುತ್ತಿದ್ದಾರೆ. ಇದರ ಫಲಿತಾಂಶವು ಇನ್ನಷ್ಟು ಸುಂದರವಾದ ವೆಬ್ ಅನುಭವವಾಗಿದೆ!
"ವೆಬ್ ಸೃಷ್ಟಿಸುವ ಆಹ್ಲಾದಕರವಾದ ಅನುಭವಗಳ ರೀತಿಗೆ ನಾನದನ್ನು ಇಷ್ಟಪಡುತ್ತೇನೆ" ಎಂಬುದಾಗಿ ಝೀ ಪ್ರಾಂಕ್ ಹೇಳುತ್ತಾರೆ. ಅವರು ಆಸ್ಟಿನ್ ಈವೆಂಟ್ ಸಹಯೋಗದೊಂದಿಗೆ ಸಾಮಾಜಿಕ ಆಟದ ತಾಣವಾದ ಸ್ಟಾರ್.ಮಿ (Star.Me) ಯಲ್ಲಿ ಇದನ್ನು ಅನಾವರಣ ಗೊಳಿಸುತ್ತಾರೆ. "ಎಚ್‌ಟಿಎಂಎಲ್5 ಬ್ರೌಸರ್‌ಗೆ ಒಂದು ಬೃಹತ್ತಾದ ಮುಂದಿನ ಹೆಜ್ಜೆಯಾಗಿದೆ, ಏಕೆಂದರೆ ಇದು ವೆಬ್ ಅನ್ನು ಸೃಷ್ಟಿಸಲು ಒಂದು ಏಕೀಕೃತ ವೇದಿಕೆಗೆ ತರುತ್ತದೆ. ಎಚ್‌ಟಿಎಂಎಲ್5ನ್ನು ಇಂಟರ್ನೆಟ್ ಎಕ್ಸ್‌ಪ್ಲೋರರ್ 9ಕ್ಕೆ ಸಮಗ್ರಗೊಳಿಸುವ ಮೂಲಕ ಮತ್ತು ಬ್ರೌಸರ್ ಹಾರ್ಡ್‌ವೇರ್ ಚುರುಕುಗೊಳಿಸುವ ಮೂಲಕ, ಮೈಕ್ರೋಸಾಫ್ಟ್ ವೆಬ್ಬನ್ನು ಮುಂದಕ್ಕೆ ತಳ್ಳುವ ತನ್ನ ಬದ್ಧತೆಯನ್ನು ಸೂಚಿಸಿದೆ, ಮತ್ತು ಇದು ನಿರ್ದಿಷ್ಟವಾಗಿಯೂ ಆಚರಣೆಗೆ ಯೋಗ್ಯವಾದುದಾಗಿದೆ" ಎಂಬುದು ಅವರ ಅಭಿಪ್ರಾಯವಾಗಿದೆ.
"ಎಚ್‌ಪಿ ಮತ್ತು ಮೈಕ್ರೋ ಸಾಫ್ಟ್ ತಮ್ಮ ಗ್ರಾಹಕರಿಗೆ ಅರ್ಥಪೂರ್ಣವಾದ ಆವಿಷ್ಕಾರಗಳನ್ನು ತರುವ ಇತಿಹಾಸವನ್ನು ಹೊಂದಿದೆ. ಇಂದು ನಾವು ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ರ ಅನಾವರಣವನ್ನು ಮೈಕ್ರೋಸಾಫ್ಟ್ ನೊಂದಿಗೆ ಆಚರಿಸುತ್ತಿದ್ದು, ಇದು ವೇಗವಾದ ಮತ್ತು ವೆಬ್ ಅನುಭವಗಳ ಹೆಚ್ಚು ದೃಶ್ಯೀಕರಣವನ್ನು ಹೆತ್ತು ಆಸಕ್ತಿಯುತವಾಗಿ ಶಕ್ತಗೊಳಿಸುವ ಒಂದು ಹೊಸ ಮೈಲಿಗಲ್ಲಾಗಿದೆ ಎಂಬುದಾಗಿ ಎಚ್‌ಪಿಯ ಖಾಸಗೀ ಸಿಸ್ಟಂ ಸಮೂಹಗಳ ಕಾರ್ಯಾಚರಣೆಗಳ ಹಿರಿಯ ಉಪಾಧ್ಯಕ್ಷ ಟಾನಿ ಪ್ರೊಫೆಟ್ ಹೇಳುತ್ತಾರೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ಒಂದು ಅಸಾಧರಣವಾದ ಬ್ರೌಸರ್ ಆಗಿದ್ದು ನಮ್ಮ ಹೆಚ್ಚಿನ ಗ್ರಾಹಕರ ಪಿಸಿಗಳನ್ನು ಲಭ್ಯವಾಗಿಸಲು ನಾವು ಸಂತಸ ಪಡುತ್ತೇವೆ ಎಂದು ಅವರು ಹೇಳಿದ್ದಾರೆ.
"ಡೆಲ್‌ನಲ್ಲಿ ನಾವು ನಮ್ಮ ಗ್ರಾಹಕರ ಸಾಧನಗಳಿಗೆ ಸಂಬಂಧಿಸಿದಂತೆ ಕಟಿಂಗ್ – ಎಜ್ ಅಥವಾ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮೇಲಿರುವಂತಹ ಆವಿಷ್ಕಾರದತ್ತ ಹೆಚ್ಚು ಗಮನ ಹರಿಸಿದ್ದೇವೆ ಮತ್ತು ಇಂಟರ್ನೆಟ್ ಎಕ್ಸ್‌ಪ್ಲೋರರ್ 9 ನಮ್ಮ ಹಾರ್ಡ್ ವೇರ್‌ನಲ್ಲಿ ಒಂದು ಶ್ರೀಮಂತವಾದ, ಹೆಚ್ಚು ತಲ್ಲೀನವಾಗುವ ವೆಬ್ ಅನುಭವದ ಆಹ್ವಾನ ನೀಡುವ ಪ್ರಪ್ರಥಮ ಬ್ರೌಸರ್ ಆಗಿದೆ ಎಂಬುದಾಗಿ ಡೆಲ್‌ನ ಅತ್ತ ಅಮೆರಿಕಾದ ಗ್ರಾಹಕರ ಮಾರಾಟದ ಪ್ರಧಾನ ವ್ಯವಸ್ಥಾಪಕ ಮತ್ತು ಉಪಾಧ್ಯಕ್ಷ ಮೈಖೆಲ್ ಟಟೆಲ್ ಮ್ಯಾನ್ ಹೇಳಿದ್ದಾರೆ. "ಗ್ರಾಹಕರು ವ್ಯತ್ಯಾಸವನ್ನು ನೋಡಲಿದ್ದಾರೆ ಮತ್ತು ಅನುಭವಿಸಲಿದ್ದಾರೆ ಎಂಬುದು ನಮಗೆ ತಿಳಿದಿದೆ, ಈ ಹೊಸ ಹಾಗೂ ಅತ್ಯಂತ ಸುಂದರವಾದ ವೆಬ್ ನಿರ್ಮಿಸುತ್ತಿರುವ ಮೈಕ್ರೋಸಾಫ್ಟ್ ವಿನ್ಯಾಸಕಾರರು ಮತ್ತು ಅಭಿವೃದ್ಧಿಗಾಗರರೊಂದಿಗೆ ವಿಶ್ವಾದ್ಯಂತವಾಗಿ ಕೆಲಸ ಮಾಡಲು ನಮಗೆ ಅತ್ಯಂತ ಹರ್ಷದಾಯಕವಾಗಿದೆ" ಎಂಬುದಾಗಿ ಅವರು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಳು http://www.BeautyoftheWeb.com ನಲ್ಲಿ ಲಭ್ಯವಿದೆ.