MSDN Training and Certification Resources
ಎಂಎಸ್‌ಡಿಎನ್ ತರಬೇತಿ ಮತ್ತು ಸರ್ಟಿಫಿಕೇಶನ್ ಸಂಪನ್ಮೂಲಗಳು


ನಿಮ್ಮ ಚಾತುರ್ಯ ಅಥವಾ ಕೌಶಲ್ಯಗಳನ್ನು ತಾಜಾವಾಗಿಸಲು ನಿಮಗೆ ಅಗತ್ಯವಿರುವ ತರಬೇತಿಯನ್ನು ಕಂಡುಕೊಳ್ಳಲು ಇಲ್ಲಿಂದ ಆರಂಭಿಸ ಬಹುದು. ನಿಮಗೆ ಶ್ರೇಷ್ಠವಾಗಿ ಹೊಂದಿಕೊಳ್ಳುವ ಹಾದಿಯ ಮೂಲಕ ಇಲ್ಲಿ ಕಲಿಯಬಹುದು, ವೀಡಿಯೋ ವೀಕ್ಷಿಸಬಹುದು. ಇಲ್ಲವೇ ತರಬೇತಿ ಕೋರ್ಸ್ ಪಡೆಯಬಹುದು ಅಥವಾ ಪುಸ್ತಕ ಓದಬಹುದು. ಇಲ್ಲಿ ನಿಮಗೆ ಸೂಕ್ತವೆನಿಸುವ ಮಟ್ಟದಲ್ಲಿ ತರಬೇತಿಗಳು ಲಭ್ಯ, ನೀವೊಬ್ಬ ಆರಂಭಿಕರಾಗಿರಬಹುದು ಅಥವಾ ಒಬ್ಬ ವೃತ್ತಿಪರರಾಗಿರಬಹುದು.

 

   ತರಬೇತಿ ಕೋರ್ಸ್‌ಗಳು


ಹೊಸ ಮೈಕ್ರೋಸಾಫ್ಟ್ ಉತ್ಪನ್ನಗಳು ಮತ್ತು ವಿಂಡೋಸ್ ಫೋನ್ 7, ವಿಂಡೋಸ್ ಅಜೂರ್ ಮತ್ತು ಸಿಲ್ವರ್‌ಲೈಟ್‌ನಂತಹ ತಂತ್ರಜ್ಞಾನಗಳಲ್ಲಿ ವೇಗವನ್ನು ಗಳಿಸಲು ಈ ಉಚಿತ ತಾಂತ್ರಿಕ ತರಬೇತಿ ಕೋರ್ಸ್‌ಗಳನ್ನು ಬಳಸಬಹುದಾಗಿದೆ. ಪ್ರತಿಯೊಂದು ಕೋರ್ಸ್‌ಗಳಲ್ಲೂ ಸಹ ವೀಡಿಯೋಗಳು, ಹ್ಯಾಂಡ್ಸ್ ಆನ್ ಲ್ಯಾಬ್‌ಗಳು ಮತ್ತು ಸೋರ್ಸ್ ಕೋಡ್ ಮಾದರಿಗಳು ಲಭ್ಯವಿದ್ದು, ತಕ್ಷಣವೇ ವೇಗಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಇದರಲ್ಲಿ ಈ ಕೆಳಗಿನ ತರಬೇತಿಗಳು ಸೇರಿವೆ.


• ವಿಂಡೋಸ್ ಫೋನ್ 7 ತರಬೇತಿ ಕೋರ್ಸ್
• ವಿಂಡೋಸ್ ಅಜೂರ್ ತರಬೇತಿ ಕೋರ್ಸ್
• ಸಿಲ್ವರ್‌ಲೈಟ್ 4 ತರಬೇತಿ ಕೋರ್ಸ್
• ವಿಶುವಲ್ ಸ್ಟುಡಿಯೋ 2010 ತರಬೇತಿ ಕೋರ್ಸ್
• ವಿಂಡೋಸ್ 7 ತರಬೇತಿ ಕೋರ್ಸ್
• ಆಫೀಸ್ 2010 ಡೆವಲಪರ್ ತರಬೇತಿ ಕೋರ್ಸ್
• ಶೇರ್ ಪಾಯಿಂಟ್ 2010 ಡೆವಲಪರ್ ತರಬೇತಿ ಕೋರ್ಸ್
• ಯುನಿಫೈಡ್ ಕಮ್ಯೂನಿಕೇಶನ್ಸ್ "14" ತರಬೇತಿ ಕೋರ್ಸ್
• ಅನನ್ಯತೆಯ ತರಬೇತಿ ಕೋರ್ಸ್
• ಎಸ್‌ಕ್ಯೂಎಲ್ ಸರ್ವರ್ 2008 ಅರ್2 ಬಿಸ್ನೆಸ್ ಇಂಟೆಲಿಜೆನ್ಸ್ ತರಬೇತಿ ಕೋರ್ಸ್


ಆಫ್‌ಲೈನ್ ತರಬೇತಿ ಕಿಟ್‌ಗಳು


ಪ್ರತಿಯೊಂದು ತರಬೇತಿ ಕೋರ್ಸ್‌ಗಳೂ ಸಹ, ನೀವು ಡೌನ್ ಲೋಡ್ ಮಾಡಬಲ್ಲಂತಹ ಆಫ್‌ಲೈನ್ ಕಿಟ್‌ಗಳಿಗೆ ಸಂಪರ್ಕ ಹೊಂದಿರುತ್ತದೆ. ವಿಡಿಯೋ ಮತ್ತು ಹ್ಯಾಂಡ್ಸ್ ಆನ್ ಲ್ಯಾಬ್‌ಗಳಲ್ಲದೆ ತರಬೇತಿ ಕಿಟ್‌ಗಳಲ್ಲಿ ಸ್ಲೈಡ್ ಡೆಕ್‌ಗಳು ಮತ್ತು ಡೆಮೋಗಳನ್ನೂ ಸಹ ನೀಡಲಾಗಿದೆ. ಇದನ್ನು ನೀವು ಪ್ರೆಸೆಂಟೇಶನ್‌ಗಳನ್ನು ಮತ್ತು ತಂತ್ರಜ್ಞಾನಗಳ ಕುರಿತ ಘಟನೆಗಳನ್ನು
 ನೀಡಲು ಬಳಸಬಹುದಾಗಿದೆ.

 

ಮೈಕ್ರೋಸಾಫ್ಟ್ ತರಬೇತಿ ವಿಷಯ ಪಟ್ಟಿ


ನಿಮಗೆ ಉತ್ತಮವಾಗಿ ಹೊಂದಿಕೊಳ್ಳುವ ಮೈಕ್ರೋಸಾಫ್ಟ್ ತರಬೇತಿ ವಿಷಯ ಪಟ್ಟಿಯನ್ನು ಬಳಸಬಹುದು. ತರಬೇತಿ ವಿಷಯ ಪಟ್ಟಿಯಲ್ಲಿ ಮೈಕ್ರೋಸಾಫ್ಟ್ ಕಲಿಕಾ ಸಂಪನ್ಮೂಲಗಳ ಸಮಗ್ರ ಸಂಗ್ರಹವಾಗಿದೆ. ಇದರಲ್ಲಿ ತರಬೇತಿ ಪುಸ್ತಕಗಳು, ತರಗತಿ ತರಬೇತಿ, ಪರೀಕ್ಷೆ ಹಾಗೂ ಇತರ ಅಂಶಗಳು ಸೇರಿವೆ.

 

ಇದಲ್ಲದೆ ಹೊಸಬರಿಗಾಗಿ ಆರಂಭಿಕ ಡೆವಲಪರ್ ತರಬೇತಿ ಕೇಂದ್ರ ಹಾಗೂ ರಾಂಪ್ ಅಪ್‌ಗಳು ಲಭ್ಯವಿವೆ.
ಆರಂಭಿಕ ಪ್ರೋಗ್ರಾಮರ್‌ಗಳನ್ನು ಗುರಿಯಾಗಿಸಿರುವ ಕಲಿಕಾ ಪರಿಸರವಿದು. ಸಾಕಷ್ಟು ವಿಷಯ ವ್ಯೂಹಗಳಿದ್ದು ಇವುಗಳನ್ನು ತಳಮಟ್ಟದಿಂದಲೇ ನೀಡಲಾಗಿದೆ. ಇದು ನಿಮಗೆ ಅಭಿವೃದ್ಧಿ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡುವ ಮೂಲಕ ಪೂರ್ಣ ಪ್ರಮಾಣದ ಡೆವಲಪರ್ ಆಗಲು ಸಹಾಯ ಮಾಡುತ್ತದೆ.

 

ಆರಂಭಿಕ ಪ್ರೊಗ್ರಾಮರ್‌ಗಳನ್ನು ಗುರಿಯಾಗಿ ವಿಶೇಷವಾಗಿ ಡೆವಲಪ್‌ ಮಾಡಲಾಗಿರುವ ಕೇಂದ್ರೀಕೃತ ಕಲಿಕಾ ಪರಿಸರದಲ್ಲಿ ನಿಮ್ಮ ಯಶಸ್ಸಿನ ಹಾದಿಯನ್ನು ಪಡೆಯಬಹುದಾಗಿದೆ.

 

ರಾಂಪ್‌ ಅಪ್ನ‌


ರಾಂಪ್ ಅಪ್ ಒಂದು ಉಚಿತ, ಆನ್‌ಲೈನ್ ಸಮುದಾಯ ಆಧಾರಿತ ಕಲಿಕಾ ಪ್ರೋಗ್ರಾಮ್ ಆಗಿದ್ದು ವೃತ್ತಿಪರ ಅಭಿವೃದ್ಧಿ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಉಚಿತವಾದ ಈ ಕೋರ್ಸಿಗೆ ಸೇರುವ ಮೂಲಕ ತಮ್ಮ ಕೆರಿಯರ್ ಸುಧಾರಿಸಿಕೊಳ್ಳಬಹುದಾಗಿದೆ.

 

Read More on....