ಭಾಷಾ ಇಂಡಿಯಾಗೆ ಮಂಥನ ಪ್ರಶಸ್ತಿ


       ಇ-ವಿಷಯಗಳು ಮತ್ತು ಸೃಜನಶೀಲತೆಯಲ್ಲಿನ ಶ್ರೇಷ್ಠ ಅನುಷ್ಠಾನವನ್ನು ಗುರುತಿಸಲು ಭಾರತದಲ್ಲಿ ಪ್ರಥಮವಾಗಿ ಹುಟ್ಟು ಹಾಕಲಾಗಿರುವ ಪ್ರಶಸ್ತಿ ಮಂಥನ ಪ್ರಶಸ್ತಿ. ಇದನ್ನು ವಿಶ್ವ ಶೃಂಗ ಪ್ರಶಸ್ತಿ, ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಸಿವಿಲ್ ಸೊಸೈಟಿ ಮೆಂಬರ್ಸ್, ಮಾಧ್ಯಮಗಳಂತಹ ಶೇರುದಾರರು ಮತ್ತು ಅಭಿವೃದ್ಧಿಗಾಗಿ ಡಿಜಿಟಲ್ ವಿಷಯದ ಪಾಲ್ಗೊಗೊಳ್ಳುವಿಕೆಯ ಉತ್ತೇಜನದಲ್ಲಿ ನಿರತವಾಗಿರುವ ಇಡಿಯ ದಕ್ಷಿಣ ಏಷ್ಯಾದ ರಾಷ್ಟ್ರಗಳ ಭಾಗೀದಾರಿಕೆಯೊಂದಿಗೆ ಡಿಜಿಟಲ್ ಎಂಪವರ್‌ಮೆಂಟ್ ಫೌಂಡೇಶನ್ ಇದನ್ನು ಅನಾವರಣಗೊಳಿಸಿದೆ.


ಅಲ್ಲಿಂದ ನಂತರ ಇದು ಭಾರತದಲ್ಲಿ ಅಭಿವೃದ್ಧಿ ರಂಗಕ್ಕಾಗಿ ಅತ್ಯುತ್ತಮ ಇ-ವಿಷಯದ ವ್ಯಾಖ್ಯಾನಕ್ಕಾಗಿ ಬಂದಿದೆ. ಮಾಹಿತಿ ಸಂಪರ್ಕ ತಂತ್ರಜ್ಞಾನದ (Information Communication Technology-ICT) ಫಲಪ್ರದವಾದ  ಮತ್ತು ಹೆಚ್ಚಿದ ಬಳಕೆಯನ್ನು ವಿಶ್ವಾದ್ಯಂತ ಗುರುತಿಸಲಾಗುತ್ತಿದೆ ಮತ್ತು ಸ್ವೀಕರಿಸಲಾಗುತ್ತದೆ. ಐಸಿಟಿಯು ಅಭಿವೃದ್ದಿಗಾಗಿ ಮತ್ತು ಸಬಲೀಕರಣಕ್ಕಾಗಿ ಒಂದು ಅಸಾಧರಣವಾದ ಟೂಲ್ ಎಂಬುದು ಅದರ ವಿವಿಧ ಶೇರುದಾರರಿಗೆ ಮನವರಿಕೆಯಾಗಿದೆ. ವಿಶ್ವದ ರಾಷ್ಟ್ರಗಳು ತಮ್ಮ ಮೂಲಭೂತವಾದ ಪರಿಸ್ಥಿತಿಗಳಿಗೆ ಅವಲಂಬಿಸಿ ಸಂಭವನೀಯವಾದ ಮತ್ತು ಸ್ಥಿರವಾದ  ತಮ್ಮ ಸಾಮಾಜಿಕ - ಸಾಂಸ್ಕೃತಿಕ ಮತ್ತು ಆರ್ಥಿಕವಾದ ಚಿತ್ರಣಗಳನ್ನು ಉತ್ತಮಗೊಳಿಸಲು ಐಸಿಟಿಯ ಬಳಕೆಯನ್ನು ನೆಲೆಗಾಣುತ್ತಿದ್ದಾರೆ.


 ಮುಂದುವರಿದ ರಾಷ್ಟ್ರಗಳು ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳು ಮತ್ತು ಸಮಾಜಗಳು ವಿವಿಧ ಡೊಮೇನ್ ಚಟುವಟಿಕೆಗಳಲ್ಲಿ ಐಸಿಟಿಯ ಹೆಚ್ಚಿದ ಮಧ್ಯಪ್ರವೇಶವನ್ನು ಅನುಭವಿಸುತ್ತಿವೆ. ಐಸಿಟಿ ಘಟಕಗಳನ್ನು ಅಭಿವೃದ್ಧಿ ಮತ್ತು ಸಬಲತೆಯ ಉದ್ದೇಶಗಳಿಗೆ ಹೆಚ್ಚುಹೆಚ್ಚಾಗಿ ಬಳಸಲಾಗುತ್ತಿದೆ. ಐಸಿಟಿ ಘಟಕಾಂಶಗಳನ್ನು ಹೆಚ್ಚುಹೆಚ್ಚಾಗಿ ಅಭಿವೃದ್ಧಿ ಮತ್ತು ಸಬಲೀಕರಣ ಉದ್ದೇಶಗಳಿಗೆ ಬಳಸುತ್ತಿದ್ದು, ಇವುಗಳಲ್ಲಿ ಕಂಪ್ಯೂಟರ್, ಅಂತರ್ಜಾಲ, ಸಮುದಾಯ ರೇಡಿಯೋ, ಆಡಿಯೋ-ವೀಡಿಯೋ ಮತ್ತು ಇತರ ಅತ್ಯಾಧುನಿಕ ಗ್ಯಾಜೆಟ್‌ಗಳು ಸೇರಿವೆ. ಐಸಿಟಿ ಡೊಮೇನ್‌ನಲ್ಲಿ ಬ್ಲಾಗಿಂಗ್ ಇನ್ನೊಂದು ಹೊಸ ಸೇರ್ಪಡೆಯಾಗಿದೆ.


ಶಿಕ್ಷಣ, ಆರೋಗ್ಯ, ಹೊಟ್ಟೆಪಾಡು, ವ್ಯಾಪಾರ, ವಾಣಿಜ್ಯ ಮತ್ತು ಆಡಳಿತ- ಇವು ಯಾವುದೇ ಉದ್ದೇಶ ಆಗಿದ್ದರೂ ವಿವಿಧ ಡೊಮೇನ್‌ಗಳ ಮಧ್ಯಪ್ರವೇಶಗಳಲ್ಲಿ ಐಸಿಟಿಯು ಉದ್ದ ಮತ್ತು ಅಗಲಗಳ ಬೆಳವಣಿಗೆಯನ್ನು ಕಂಡಿದೆ. ಸರ್ಕಾರಗಳು, ಸಿಎಸ್ಓಗಳು, ಕಾರ್ಪೋರೇಟ್ ಮಂಡಳಿಗಳು ಮತ್ತು ವ್ಯಕ್ತಿಗತವಾದ ಕೋರಿಕೆಯ ಮೇರೆಗೆ ಐಸಿಟಿ ಬಳಕೆಯೊಂದಿಗೆ ಸಾರ್ವಜನಿಕ ಮತ್ತು ಖಾಸಗೀ ಯೋಜನೆ ಮತ್ತು ಕಾರ್ಯಗಳನ್ನು ಉಪಕ್ರಮಿಸಲಾಗಿದೆ.


ಭಾರತದ ರಾಜ್ಯಗಳಾದ ಕೇರಳ, ತಮಿಳ್ನಾಡು, ಉತ್ತರಾಂಚಲ ಮತ್ತು ದೆಹಲಿಗಳಲ್ಲಿ ಐಸಿಟಿಯನ್ನು ಅತ್ಯಂತ ಉಪಯುಕ್ತವಾಗಿ ಮತ್ತು ಗುಣ ಮಟ್ಟದ ದೃಷ್ಟಿಕೋನದೊಂದಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬತಹ ವರದಿಗಳು ಹರಿದು ಬರುತ್ತಿವೆ. ಇಂಟರ್ನೆಟ್, ಪಿಸಿ, ಸಿಆರ್ ಮತ್ತು ಇತರ ಮಾಧ್ಯಮಗಳಂತಹ ವಿವಿಧ ಐಸಿಟಿ ಟೂಲ್‌ಗಳನ್ನು ಬಳಸಿ ವ್ಯಕ್ತಿಗಳು ಮತ್ತು ಸ್ಥಳೀಯ ಸಮುದಾಯಗಳು ಸಬಲವಾಗಿರುವ ಮತ್ತು ಸ್ಥಿರವಾಗಿರುವ ಉದಾಹರಣೆಗಳೂ ಸಹ ವರದಿಯಾಗಿವೆ.


ಭಾಷಾ ಇಂಡಿಯಾವು "ಇ-ಸ್ಥಳೀಕರಣ" (E-Localization) ವಿಷಯದಲ್ಲಿ  ಪ್ರಥಮ ಸ್ಥಾನದ ಮಂಥನ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ತಿಳಿಸಲು ನಮಗೆ ಹೆಮ್ಮೆಯಾಗುತ್ತಿದೆ. ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಶ್ರೀಲಂಕಾದ ಸಂಸ್ಥೆಗಳು ಪಡೆದುಕೊಂಡಿವೆ.


ಭಾಷಾ ಇಂಡಿಯಾವು ಒಂದು ಯಥಾರ್ಥವಾದ ಸಮುದಾಯ ತಾಣವಾಗಿದ್ದು ಇದು ಆನ್‌ಲೈನ್ ಕಂಟೆಂಟ್ ಅಥವಾ ಅಂತರ್ಜಾಲ ವಿಷಯ ಒದಗಿಸುವುದಕ್ಕಿಂದಲೂ ಹೆಚ್ಚು ಮುಂದೆ ಸಾಗಿದೆ.  ಕಾರ್ಯಾಗಾರಗಳು, ರಸಪ್ರಶ್ನೆ ಸ್ಫರ್ಧೆಗಳು, ವಿದ್ಯಾರ್ಥಿಗಳನ್ನು ತಲುಪುವ ಕಾರ್ಯಕ್ರಮಗಳು ಮುಂತಾದುವುಗಳನ್ನು ನಿರ್ವಹಿಸುವ ಕಾರ್ಯಗಳಲ್ಲಿ ನಮ್ಮ ತಜ್ಞರ ತಂಡವು ಸಕ್ರಿಯವಾಗಿ ತೊಡಗಿಕೊಂಡಿದೆ. ಭಾಷಾ ಇಂಡಿಯಾ ವೇದಿಕೆಯು ಪ್ರಶ್ನೆಗಳನ್ನು ಕೇಳಲು, ಸಮಸ್ಯೆಗಳನ್ನು ಚರ್ಚಿಸಲು, ಅಭಿಪ್ರಾಯ ಹಂಚಿಕೊಳ್ಳಲು ಸೂಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರು ವೇದಿಕೆಯಲ್ಲಿ ಭಾರತೀಯ ಭಾಷಾ ಕಂಪ್ಯೂಟಿಂಗ್ ಕುರಿತಂತೆ ಕೇಳುವ ಪ್ರಶ್ನೆಗಳಿಗೆ ಭಾಷಾ ಇಂಡಿಯಾದ ತಜ್ಞರ ತಂಡವು ಸೂಕ್ತವಾಗಿ ಉತ್ತರಿಸುತ್ತದೆ. ಇಂಡಿಕ್ ಭಾಷಾ ಕಂಪ್ಯೂಟಿಂಗ್ ಮತ್ತು ಈ ವ್ಯಾಪ್ತಿಯಲ್ಲಿ ಮಾಡಲಾಗಿರುವ ಅಭಿವೃದ್ಧಿ ಕೆಲಸಗಳನ್ನು ಉತ್ತೇಜಿಸುವುದು ಭಾಷಾ ಇಂಡಿಯಾದ ಗುರಿಗಳಲ್ಲಿ ಒಂದಾಗಿದೆ. ಭಾಷಾ ಇಂಡಿಯಾದಲ್ಲಿನ ಪರಿಹಾರ ಸೂಚಿಕೆ (ಸೊಲ್ಯುಶನ್ಸ್ ಡೈರೆಕ್ಟರಿ)ಯು ಒಂದು ಅಪರೂಪದ ವೇದಿಕೆಯಾಗಿದ್ದು ಇದು ಸಣ್ಣಪುಟ್ಟ ವ್ಯಾಪಾರಿಗಳಿಗೆ ಮತ್ತು ವ್ಯಕ್ತಿಗಳಿಗೆ ವೈಯಕ್ತಿಕವಾಗಿ ತಮ್ಮ ಭಾರತೀಯ ಭಾಷಾ ಅಪ್ಲಿಕೇಶನ್‌ಗಳು ಮತ್ತು ಫಾಂಟ್‌ಗಳನ್ನು ತಮ್ಮ ಉದ್ದೇಶಿತ ವೀಕ್ಷಕರಿಗೆ ವಿಕ್ರಯಿಸಲು ಉಚಿತವಾದ ಅವಕಾಶ ನೀಡುತ್ತದೆ.


ಇದಕ್ಕಾಗಿ ಮತ್ತು ಪ್ರಮುಖ ಭಾರತೀಯ ಭಾಷೆಗಳಾದ ಕನ್ನಡ, ಅಸ್ಸಾಮಿ, ಬೆಂಗಾಳಿ, ಗುಜರಾತಿ, ತಮಿಳು, ತೆಲುಗು, ಹಿಂದಿ ಹಾಗೂ ಮತ್ತಿತರ ಭಾಷೆಗಳಲ್ಲಿ ಭಾಷಾ ಕಂಪ್ಯೂಟಿಂಗ್ ಮಾಡುತ್ತಿರುವ ಭಾಷಾ ಇಂಡಿಯಾದ ಇಂತಹ  ಕಾರ್ಯಕ್ಕಾಗಿ ಪ್ರಶಸ್ತಿ ನೀಡಲಾಗಿದೆ.


ಪ್ರಧಾನವಾದ ಭಾಷಾ ಕಂಪ್ಯೂಟಿಂಗ್ ಕಾರ್ಯದಲ್ಲಿ ಐಎಂಇ (IME) ಎಂಬ ಹೆಸರಿನ ಪ್ರೋಗ್ರಾಂ ಅಭಿವೃದ್ಧಿ ಸೇರಿದೆ. ಐಎಂಇಯು ಆಂಗ್ಲ ಕ್ವಾರ್ಟಿ (QWERTY) ಕೀಲಿಮಣೆಯನ್ನು ಬಳಸಿ ಭಾರತೀಯ ಭಾಷೆಗಳಲ್ಲಿ ಪಠ್ಯಗಳನ್ನು ನಮೂದಿಸಲು ಅನುಕೂಲಕರವಾದ ಹಾದಿಯನ್ನು ತೋರುತ್ತದೆ. ಆಫೀಸ್ ಅಪ್ಲಿಕೇಶನ್‌ಗಳು, ವರ್ಡ್‌ಪ್ಯಾಡ್, ನೋಟ್ ಪ್ಯಾಡ್‌ಗಳಲ್ಲಿ ವಿವಿಧ ಆಪರೇಟಿಂಗ್ ಸಿಸ್ಟಂಗಳಲ್ಲಿ ಬಳಕೆದಾರರು ತಮ್ಮ ಭಾಷಾ ಲಿಪಿಗಳನ್ನು ನಮೂದಿಸ ಬಹುದಾಗಿದೆ. ಆನ್ - ಫ್ಲೈ - ಹೆಲ್ಪ್ (on-the-fly help), ವಿವಿಧ ಕೀಲಿಮಣೆ ವಿನ್ಯಾಸಗಳು ಮತ್ತು ಭಾಷೆಗಳ ನಡುವೆ ಹೊರಳುವಿಕೆ ಮುಂತಾದ ಹಲವಾರು ಸಾಮಾನ್ಯವಾದ ಲಕ್ಷಣಗಳನ್ನು ಟೂಲ್‌ಗಳು ಹೊಂದಿವೆ.


 

Read More on....