ಮೈಕ್ರೋಸಾಫ್ಟ್‌ನ ಬ್ಲೂಟೂಥ್ ಮೊಬೈಲ್ ಕೀಬೋರ್ಡ್ 500 ನೊಂದಿಗೆ ನಿರಾತಂಕವಾಗಿರಿ
ಈಗಿನಿಂದ 2015 ರವರೆಗೆ ಟ್ಯಾಬ್ಲೆಟ್ ಖರೀದಿಯು ಶೇಕಾಡ 81 ರಷ್ಟು ಹೆಚ್ಚಾಗುವ ನಿರೀಕ್ಷೆಯೊಂದಿಗೆ, ಮನೆ ಮತ್ತು ಕಚೇರಿ ಎರಡೂ ಕಡೆಯಲ್ಲಿಯೂ ಲ್ಯಾಪ್‌ಟಾಪ್‌ಗಳು ಮತ್ತುಟ್ಯಾಬ್ಲೆಟ್‌ಗಳು ಅತ್ಯಗತ್ಯ ಸಾಧನಗಳಾಗಿವೆ ಮತ್ತು ಆಗಾಗ್ಗೆ ಆನ್-ಸ್ಕ್ರೀನ್ ಕೀಬೋರ್ಡ್‌ಗೆ ಸೀಮಿತವಾದಾದ ನಮ್ಮ ಬೆರಳುಗಳು ಮತ್ತು ಮಣಿಕಟ್ಟುಗಳಿಗೆ ತೊಂದರೆಯುಂಟಾಗುತ್ತದೆ.
More Details: http://www.microsoft.com/hardware/en-us/p/bluetooth-mobile-keyboard-6000

ಇಂದು, ಮೈಕ್ರೋಸಾಫ್ಟ್‌ನ ಹಾರ್ಡ್‌ವೇರ್ ಹೊಸ ಬ್ಲೂಟೂಥ್ ಮೊಬೈಲ್ ಕೀಬೋರ್ಡ್ 5000 ನೊಂದಿಗೆ ಆರಾಮದಾಯಕ ಕೀಬೋರ್ಡ್ ಅನುಭವವನ್ನು ನೀಡುತ್ತದೆ - ಇದು ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಬಳಕೆದಾರರಿಬ್ಬರಿಗೂ ಪರಿಪೂರ್ಣವಾದ ಚಲನೆ ಮತ್ತು ಆರಾಮದಾಯಕತೆಯನ್ನು ನೀಡುತ್ತದೆ. ದಕ್ಷತಾಶಾಸ್ತ್ರಜ್ಞರಿಂದ ಅನುಮೋದಿತ ಆರಾಮದಾಯಕ ಬಾಗಿದ ವಿನ್ಯಾಸದೊಂದಿಗೆ, ನೀವು ಕಚೇರಿಯ ಸ್ಥಳದಿಂದ ಟೈಪ್ ಮಾಡುತ್ತಿರಲಿ ಅಥವಾ ನಿಮ್ಮ ಮೆಚ್ಚಿನ ಕೆಫೆಯಿಂದ ಟೈಪ್ ಮಾಡುತ್ತಿರಲಿ ಕೀಬೋರ್ಡ್‌ನ ಆರಾಮದಾಯಕತೆಯು ತನ್ನ ಚಲನೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಇದರ ತೆಳುವಾದ ವಿನ್ಯಾಸವು ಅದನ್ನು ಹಗುರ ಮತ್ತು ತೆಗೆದುಕೊಂಡು ಹೋಗಲು ಅನುಕೂಲಕರವಾಗಿಸುತ್ತದೆ – ಇದನ್ನು ಕೇವಲ ನಿಮ್ಮ ಬ್ಯಾಗ್‌ನಲ್ಲಿರಿಸಿಕೊಳ್ಳಿ ಮತ್ತು ಹೊರಡಿ!
ಕೋರ್ಡ್‌ಗಳು, ಡಾಕ್‌ಗಳು ಮತ್ತು ಯುಎಸ್‌ಬಿ ನ್ಯಾನೋ ಟ್ರಾನ್ಸ್ ರಿಸೀವರ್‌ಗಳಿಗೆ ವಿದಾಯ ಹೇಳಿ ಮತ್ತು ವಿಂಡೋಸ್ ಆಧಾರಿತ ಟ್ಯಾಬ್ಲೆಟ್‌ಗಳು ಐಪ್ಯಾಡ್‌ಗಳು ಮತ್ತು ಆಂಡ್ರಾಯ್ಡ್ ಸಾಧನಗಳಿಗೆ ಬ್ಲೂಟೂಥ್ ಮುಖಾಂತರ ಸುಲಭವಾಗಿ ಸಂಪರ್ಕಪಡಿಸಿ. ನೀವು ಇತ್ತೀಚಿನ ಸಂಗೀತಕ್ಕೆ ಹುಡುಕಾಟ ನಡೆಸುತ್ತಿರಲಿ, ಮೀಟಿಂಗ್‌ನಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿರಲಿ ಅಥವಾ ಇಮೇಲ್ ಪರಿಶೀಲಿಸುತ್ತಿರಲಿ, ಕೆಲಸವು ಆರಾಮದಾಯಕವಾಗಿ ಆಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬ್ಲೂಟೂಥ್ ಮೊಬೈಲ್ ಕೀಬೋರ್ಡ್ 5000 ಇದೀಗ ಯು.ಎಸ್.ನಲ್ಲಿ $49.95 ಗೆ ಲಭ್ಯವಿದೆ.