Microsoft Visual Studio

 

ಮೈಕ್ರೋಸಾಫ್ಟ್ ವಿಶುವಲ್ ಸ್ಟುಡಿಯೋ

 

 

ಕಂಪ್ಯೂಟಿಂಗ್‌ನಲ್ಲಿ ಮೈಕ್ರೋಸಾಫ್ಟ್ ವಿಶುವಲ್ ಸ್ಟುಡಿಯೋವು ಮೈಕ್ರೋಸಾಫ್ಟ್‌ನಿಂದ ಒಂದು ಸಮಗ್ರ ಅಭಿವೃದ್ಧಿ ಪರಿಸರವಾಗಿದೆ. ಇದನ್ನು ವಿಂಡೋಸ್ ಫಾರ್ಮ್ಸ್ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು, ವೆಬ್ ಅಪ್ಲಿಕೇಶನ್‌ಗಳು ಮತ್ತು ವೆಬ್ ಸರ್ವೀಸ್‌ಗಳೊಂದಿಗೆ ಕಂಸೋಲ್ ಮತ್ತು ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸಲು ಬಳಸಬಹುದು.

ಇದನ್ನು ಮೈಕ್ರೋಸಾಫ್ಟ್ ವಿಂಡೋಸ್, ವಿಂಡೋಸ್ ಮೊಬೈಲ್, ವಿಂಡೋಸ್ ಸಿಇ, .ನೆಟ್ ಫ್ರೇಮ್‌ವರ್ಕ್, .ನೆಟ್ ಕೊಂಪ್ಯಾಕ್ಟ್ ಫ್ರೇಮ್‌ವರ್ಕ್ ಮತ್ತು ಮೈಕ್ರೋಸಾಫ್ಟ್ ಸಿಲ್ವರ್‌ಲೈಟ್‌ಗಳು ಬೆಂಬಲಿಸುವ ಎಲ್ಲಾ ವೇದಿಕೆಗಳಿಗೆ ನೇಟೀವ್ ಕೋಡ್ ಹಾಗೂ ವ್ಯಸ್ಥಿತ ಕೋಡ್‌ಗಳೊಂದಿಗೆ ಬಳಸಬಹುದಾಗಿದೆ. 
 

ವಿಶುವಲ್ ಸ್ಟುಡಿಯೋದಲ್ಲಿ ಇಂಟೆಲಿಸೆನ್ಸ್ ಹಾಗೂ ಕೋಟ್ ರಿಫ್ಯಾಕ್ಟರಿಂಗ್ ಬೆಂಬಲಿಸುವ ಕೋಡ್ ಎಡಿಟರ್ ಸೇರಿದೆ. ಇದರಲ್ಲಿರುವ ಡಿ ಬಗ್ಗರ್, ಮೂಲ ಮಟ್ಟದ ಹಾಗೂ ಯಂತ್ರ ಮಟ್ಟದ ಡಿ ಬಗ್ಗರ್ ಹೀಗೆ ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಳಗಡೆ ಅಳವಡಿಸಲಾಗಿರುವ ಇತರ ಪರಿಕರಗಳಲ್ಲಿ ಜಿಯುಐ(GUI)ನಿರ್ಮಾಣ ಅಪ್ಲಿಕೇಶನ್‌ಗಳ ಡಿಸೈನರ್, ವೆಬ್ ಡಿಸೈನರ್, ಕ್ಲಾಸ್ ಡಿಸೈನರ್, ಮತ್ತು ಡೇಟಾಬೇಸ್ ಸ್ಕೀಮ್ ಡಿಸೈನರ್‌ಗಳು ಸೇರಿವೆ. 


 
ಬಹುತೇಕ ಎಲ್ಲಾ ಹಂತಗಳ ಕಾರ್ಯಗಳನ್ನು ವಿಸ್ತರಿಸುವ ಪ್ಲಗ್-ಇನ್ಗಳನ್ನು ಅದು ಸ್ವೀಕರಿಸುತ್ತದೆ. ಇದರಲ್ಲಿ ಸಬ್ ವರ್ಶನ್ ಮತ್ತು ವಿಶುವಲ್ ಸೋರ್ಸ್ಸೇಫ್ ನಂತಹ ಸೋರ್ಸ್ ಕಂಟ್ರೋಲ್ ಸಿಸ್ಟಂಗಳಿಗೆ ಬೆಂಬಲ ಸೇರ್ಪಡೆ ಎಡಿಟರ್ಸ್ ಮತ್ತು ಡೊಮೇನ್ ನಿರ್ದಿಷ್ಟ ಲಾಂಗ್ವೇಜ್ಗಳಿಗೆ ವಿಶುವಲ್ ಡಿಸೈನರ್ನಂತಹ ಅಥವಾ ಸಾಫ್ಟ್ವೇರ್ ಡೆವಲಪ್ಮೆಂಟ್ ಲೈಫ್ಸೈಕಲ್ನ ಇತರ ಅಂಶಗಳಿಗೆ ಹೊಸ ಟೂಲ್ಸೆಟ್ಗಳ ಸೇರ್ಪಡೆ ಸೇರಿದೆ.

 

ಲಾಂಗ್ವೇಜ್ ಸೇವಾ ವಿಧಾನದಲ್ಲಿ ವಿಶುವಲ್ ಸ್ಟುಡಿಯೋ ವಿವಿಧ ಪ್ರೋಗ್ರಾಮಿಂಗ್ ಲಾಂಗ್ವೇಜ್ಗಳನ್ನು ಬೆಂಬಲಿಸುತ್ತದೆ. ನಿರ್ದಿಷ್ಟ ಲಾಂಗ್ವೇಜ್ ಸೇವೆ ಅಸ್ತಿತ್ವದಲ್ಲಿದ್ದರೆ,  ಕೋಡ್ ಎಡಿಟರ್ ಮತ್ತು ಡಿ ಬಗ್ಗರನ್ನು ಸರಿಸುಮಾರು ಯಾವುದೇ ಪ್ರೋಗ್ರಾಮಿಂಗ್ ಲಾಂಗ್ವೇ ಜನ್ನು ಬೆಂಬಲಿಸಲು ಅನುಮತಿಸುತ್ತದೆ. ಅಳವಡಿಸಲಾಗಿರುವ ಲಾಂಗ್ವೇಜ್ಗಳ ಮೂಲಕ), VB.NET (Visual Basic .NET ಮೂಲಕ), C# (Visual C# ಮೂಲಕ), ಮತ್ತುF# (ವಿಶುವಲ್ ಸ್ಟುಡಿಯೋ2010ರಂತೆ).

ಲಾಂಗ್ವೇಜ್ ಸೇವೆಗಳನ್ನು ಪ್ರತ್ಯೇಕವಾಗಿ ಅಳವಡಿಸುವ ಮೂಲಕ M, Python, C/C++ (Visual C++ಮತ್ತು Ruby ಗಳನ್ನು ಇತರ ಲಾಂಗ್ವೇಜ್‌ಗಳೊಂದಿಗೆ ಬೆಂಬಲಿಸುತ್ತದೆ. ಇದು XML/XSLT, HTML/XHTML, JavaScript ಮತ್ತು  CSSಗಳನ್ನೂ ಸಹ ಬೆಂಬಲಿಸುತ್ತದೆ. ಪ್ರತ್ಯೇಕ ನಿರ್ದಿಷ್ಟ ಭಾಷಾ ಆವೃತ್ತಿಗಳೂ ಲಭ್ಯವಿದ್ದು ಇವುಗಳು ಬಳಕೆದಾರರಿಗೆ ಹೆಚ್ಚು ಸೀಮಿತ ಲಾಂಗ್ವೇಜ್ ಸೇವೆಯನ್ನು ಒದಗಿಸುತ್ತದೆ. ಅವುಗಳೆಂದರೆ, Microsoft Visual Basic, Visual J#, Visual C#, and Visual C++.

ವಿಶುವಲ್ ಸ್ಟುಡಿಯೋ 2010 ಭಾಗಗಳಾದ ವಿಶುವಲ್ ಬೇಸಿಕ್, ವಿಶುವಲ್ ಸಿ#, ವಿಶುವಲ್ ಸಿ++ ಮತ್ತು ವಿಶುವಲ್ ವೆಬ್ ಡೆವಲಪರ್‌ಗಳನ್ನು ಮೈಕ್ರೋ ಸಾಫ್ಟ್  ತನ್ನ ಎಕ್ಸ್‌ಪ್ರೆಸ್ ಆವೃತ್ತಿಗಳೊಂದಿಗೆ ಉಚಿತವಾಗಿ ಒದಗಿಸುತ್ತದೆ.

ಮೈಕ್ರೋಸಾಫ್ಟ್‌ನ ಡ್ರೀಮ್‌ಸ್ಪಾರ್ಕ್ ಪ್ರೋಗ್ರಾಮ್ ಮೂಲಕ ವಿಶುವಲ್ 2010, 2008 ಮತ್ತು 2005 ವೃತ್ತಿಪರ ಆವೃತ್ತಿಗಳು ಲಾಂಗ್ವೇಜ್ ನಿರ್ದಿಷ್ಟ ಆವೃತ್ತಿ(ವಿಶುವಲ್ ಬೇಸಿಕ್, ಸಿ++, ಸಿ#, ಜೆ#)ಗಳೊಂದಿಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ. 

ವಿಶುವಲ್ ಸ್ಟುಡಿಯೋ ಯಾವುದೇ ಪ್ರೋಗ್ರಾಮಿಂಗ್ ಲಾಂಗ್ವೇಜ್, ಸೊಲ್ಯುಶನ್ ಅಥವಾ ಟೂಲ್‌ಗಳಅನ್ನು ಅಂತರ್ಗತವಾಗಿ ಬೆಂಬಲಿಸುವುದಿಲ್ಲ.  ಬದಲಿಗೆ ವಿವಿಧ ರೀತಿಯ ಕಾರ್ಯಗಳಲ್ಲಿ ಅದು ಪ್ಲಗ್ಗಿಂಗ್‌ಗಳನ್ನು ಅನುಮತಿಸುತ್ತದೆ. ವಿಎಸ್‌ಪ್ಯಾಕೇಜ್‌ನಂತೆ ನಿರ್ದಿಷ್ಟ ಕಾರ್ಯವನ್ನು ಕೋಡ್ ಮಾಡಲಾಗಿದೆ.  ಇದನ್ನು ಅಳವಡಿಸಿದಾಗ ಕಾರ್ಯವು ಸೇವೆಯಂತೆ ಲಭ್ಯವಾಗುತ್ತದೆ.

ಐಡಿಇ SVsSolution, SVsUIShell ಹಾಗೂ  SVsShell ಈ ಮೂರು ಸೇವೆಗಳನ್ನು ಒದಗಿಸುತ್ತದೆ. ಇದರೊಂದಿಗೆ ಸೇವೆಗಳ ನಡುವೆ ಸಂಯೋಜನೆ ಹಾಗೂ ಸಂವಹನವನ್ನು ಸಮರ್ಥವಾಗಿಸಲೂ ಸಹ ಐಡಿಇ ಜವಾಬ್ದಾರವಾಗಿದೆ.

Read More on....