ಯೂನಿಕೋಡ್‌ಗೆ ವಲಸೆ
ಯೂನಿಕೋಡ್ ಆಧಾರಿತ ಹೊಸ ಪೋಗ್ರಾಂ ರೂಪಿಸುವುದು ಖಂಡಿತವಾಗಿಯೂ ಸುಲಭ ಸಾಧ್ಯ. ಯೂನಿಕೋಡ್ ವಿಶೇಷ ನಿರ್ವಹಣೆಯ ಕೆಲವು ಅಂಶಗಳನ್ನು ಒಳಗೊಂಡಿದೆಯಾದರೂ ಇವುಗಳನ್ನು ನೀವು ನಿಮ್ಮ ಕೋಡ್‌ನಲ್ಲಿ ಪ್ರತ್ಯೇಕಿಸಿಡಬಹುದು. ಈಗಿರುವ ಪ್ರೋಗ್ರಾಂನ್ನು ಕೋಡ್ ಪೇಜ್ ಸಂಕೇತೀಕರಣ ವ್ಯವಸ್ಥೆಯ ಯೂನೀಕೋಡ್ ಬಳಸುವ ವ್ಯವಸ್ಥೆಗೆ ಪರಿವರ್ತಿಸುವುದು ಒಂದು ನೇರ ಕಾರ್ಯಚರಣೆ. ಅದಕ್ಕಾಗಿ ಅನುಸರಿಸಬೇಕಾದ ಕ್ರಮಗಳು ಈ ಕೆಳಗಿನಂತಿವೆ.

(ಪೂರ್ವರಚಿತ ಮತ್ತು ಸಂಯುಕ್ತ ಅಕ್ಷರಗಳು)
• ನಿಮ್ಮ ಸಂಕೇತಾಕ್ಷರ ಸಂಹಿತೆಯನ್ನು ಇಡಿಯಾಗಿ ಜೆನೆರಿಕ್ ದತ್ತಾಂಶ ಮಾದರಿಗೆ ಪರಿವರ್ತಿಸಿ.
• ಜೆನೆರಿಕ್ ಕಾರ್ಯಚರಣೆ ಮೂಲಮಾದರಿಗೆ ನಿಮ್ಮ ಮಾದರಿಯನ್ನು ಅಭಿವೃದ್ದಿಪಡಿಸಿ
• ಟೆಕ್‌ಸ್ಟ್‌ಮ್ಯಾಕ್ರೋದೊಂದಿಗೆ ವ್ಯವಸ್ಥಾಪನಾ ಕಾರ್ಯಾಚರಣೆ ರೂಪಿಸಿ
• ನಿಮ್ಮ ಮಾಹಿತಿ ರಚನೆಗಳ ಜೆನೆರಿಕ್ ಆವೃತ್ತಿಗಳನ್ನು ರಚಿಸಿ
• ರಚನಾ ಪ್ರಕ್ರಿಯೆಯನ್ನು ಬದಲಿಸಿ
• ಅಂಕಗಣಿತ ಪಾಯಿಂಟರ್ ಹೊಂದಾಣಿಕೆ ಮಾಡಿ
• ಒಂದು ಬೈಟ್ ದಿರ್ಘದ ರಚನೆ/ಅಕ್ಷರ ವಿನ್ಯಾಸವನ್ನು ಪರಿಗಣಿಸಿ ಯಾವುದೇ ಕೋಡ್ ಪರಿಶೀಲಿಸಿ
• ವಿಶೇಷ ಏಕರೂಪಿ ವ್ಯವಸ್ಥೆಯನ್ನು ಬೆಂಬಲಿಸುವ ಸಂಹಿತೆಯನ್ನು ಸೇರಿಸಿ.
• ನಿಮ್ಮ ಕಂಪ್ಲೈಯರ್‌ನ ಮಾದರಿ ಪರೀಶೀಲನೆಯನ್ನು ಸಮರ್ಥಗೊಳಿಸುವ ಮೂಲಕ ನಿಮ್ಮ ಪೋರ್ಟನ್ನು ಡಿಬಗ್ ಮಾಡಿ
ಏಕಸಂಹಿತೆ (ಯೂನಿಕೋಡ್) ನಿಯಮಗಳು ನಿರ್ದಿಷ್ಟಪಡಿಸಿದ ಕೋಡ್ ಪಾಯಿಂಟ್ ಅಸೈನ್‌ಮೆಂಟ್‌ಗಳನ್ನು ಹೊಂದಿರುತ್ತವೆ. ಪ್ರತಿಯೊಂದು ಕೋಡ್ ಪಾಯಿಂಟ್‌ಗಳೂ ನಿರ್ದಿಷ್ಟ ಪಡಿಸಿದ ಪ್ರಾತಿನಿಧ್ಯವನ್ನು ಹೊಂದಿರುತ್ತವೆ. ಕೆಲವು ಸಂದರ್ಭಗಳಲ್ಲಿ ಏಕಸಂಹಿತೆಯಲ್ಲಿ ಕೋಡ್ ಪಾಯಿಂಟ್‌ಗಳು ಲಭ್ಯವಿಲ್ಲದೆಯೂ ಇರಬಹುದು. ಹಾಲಿ ಇರುವ ಚಿತ್ರಕ ಅಥವಾ ಅಕ್ಷರಗಳಿಗೆ ಪ್ರತ್ಯೇಕ ಕೋಡ್ ಪಾಯಿಂಟ್‌ಗಳನ್ನು ಒದಗಿಸದೇ ಇರಲು ಮುಖ್ಯ ಕಾರಣ ಅವುಗಳು ಒಂದೇ ಚಿತ್ರಕ ಅಥವಾ ಅಕ್ಷರದ ನೆರಳು ಪ್ರತಿಗಳಾಗಿರಬಹುದು ಉದಾ: ಅಕ್ಷರಗಳಲ್ಲಿ ವಿಭಿನ್ನತೆಗಳು ಅಂದರೆ ದಪ್ಪ ಅಕ್ಷರಗಳು ಮತ್ತು ಇಟಾಲಿಕ್ ಅಕ್ಷರಗಳು ಮೂಲತಹ ಒಂದೇ ಚಿತ್ರಕ ಅಥವಾ ಅಕ್ಷರಗಳನ್ನು ಪ್ರತ್ಯೇಕ ಮಾದರಿಗಳಲ್ಲಿ ತೋರಿಸುವಂತಹವು.
ಹೆಚ್ಚಿನ ಸಂದರ್ಭಗಳಲ್ಲಿ ಏಕಸಂಹಿತೆ ಚಿತ್ರಕ/ಅಕ್ಷರಗಳನ್ನು ಪ್ರತ್ಯೇಕವಾಗಿ ಪ್ರದರ್ಶಿಸುತ್ತದೆ. ಕೆಲವು ಚಿತ್ರಕ/ಅಕ್ಷರಗಳು ಒಟ್ಟು ಸೇರಿ ಇತರ ಚಿತ್ರಕ /ಅಕ್ಷರಗಳನ್ನು ರೂಪಿಸಲು ಸಾಧ್ಯವಿದೆ. ಉದಾ: ಉಚ್ಚಾರಣೆಯನ್ನು ನಿರ್ದೇಶಿಸುವ ಸಂಕೇತಗಳು ಫ್ರೆಂಚ್, ಜರ್ಮನ್ ಮತ್ತು ಇತರ ಹಲವು ಯೂರೋಪಿಯನ್ ಭಾಷೆಗಳಲ್ಲಿ ಬಳಸುವ ಸಾಮನ್ಯ ಉಚ್ಚಾರಣ ಸಂಕೇತಗಳು ಸಂರಚನಾ ಪೂರ್ವ ಮಾದರಿಯಲ್ಲಿರುವುದರಿಂದ ಅವುಗಳಿಗೆ ಕೋಡ್ ಪಾಯಿಂಟ್‌ಗಳನ್ನು ನೀಡಲಾಗಿರುತ್ತದೆ. ಈ ರಚನೆ ಅಥವಾ ಸಂಕೇತಾಕ್ಷರಗಳನ್ನು ಮೂಲ ಅಕ್ಷರದ ಅಥವಾ ಚಿತ್ರಕದ ಜತೆ ಸೇರಿಸಿ ಒಂದು ಸ್ಥಳ ಬಿಟ್ಟು ಅಥವಾ ಸ್ಥಳ ಬಿಡದೆ ಜತೆ ಸೇರಿಸಿದ ಸಂಕೇತಾಕ್ಷರಗಳೊಂದಿಗೆ ಉಚ್ಚರಿಸಬೇಕಾಗುತ್ತದೆ. ಸ್ಥಳ ಬಿಡದೆ ಜೋಡಿಸಿದ ಉಚ್ಚಾರಣ ಸಂಕೇತಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಉಚ್ಚಾರಣ ಶಬ್ದಗಳನ್ನು ಅವುಗಳಿಗೆ ಪ್ರತ್ಯೇಕ ಕೋಡ್ ಫಾಂಟ್ ನೀಡದೆ ರೂಪಿಸಲು ಸಾಧ್ಯವಿದೆ. ಇದನ್ನು ವ್ಯಾಪಕವಾಗಿ ಬಳಸದೆ ಇರುವ, ಉದಾಹರಣೆಗೆ ಕೆಲವು ಆಫ್ರಿಕನ್ ಭಾಷೆಗಳಿಗೆ ಸಂಬಂಧಿಸಿದಂತೆ ಇರುವ ಉಚ್ಚಾರಣ ಶಬ್ದಗಳು ಅಕ್ಷರಗಳನ್ನು ನಿರ್ದೇಶಿಸಲು ಬಳಸಲು ಸಾಧ್ಯವಿದೆ. ಇದನ್ನು ವೈವಿಧ್ಯ ಗಣಿತ ಸಂಕೇತಗಳನ್ನು ನಿರ್ಮಿಸಲು ಬಳಸಬಹುದು. ಸಂಯೋಜನಾ ಪೂರ್ವ ಅಕ್ಷರಗಳನ್ನು ಮೊದಲು ಏಕಸಂಹಿತೆಯಲ್ಲಿ ಪ್ರಾಥಮಿಕವಾಗಿ ಅವುಗಳ ಇತರ ಎನ್‌ಕೋಡಿಂಗ್‌ಗಳಲ್ಲಿ ಬಳಸಲ್ಪಡಬಹುದಾದ ಸಾಧ್ಯತೆಯ ಬಗ್ಗೆ ಪರೀಶೀಲಿಸಲು ಬಳಸಲಾಗುವುದು.
ಏಕಸಂಹಿತೆ (ಯೂನಿಕೋಡ್) ವೆಬ್ ವಿಷಯಗಳನ್ನು ಜಾಗತಿಕ ಮಟ್ಟದಲ್ಲಿ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ವೆಬ್ ಪುಟಗಳಲ್ಲಿ ಸಂಕೇತಾಕ್ಷರವನ್ನು ನಿರ್ವಹಿಸುವುದು ಹೇಗೆಂದು ತಿಳಿದುಕೊಂಡರೆ ವೆಬ್‌ನಲ್ಲಿ ಬಳಕೆಯಲ್ಲಿರುವ ಭಾಷೆಗಳ ವೈವಿಧ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡಬಹುದು.