Microsoft Office 2010 Hits Major Milestone and Enters Technical Preview

 

 

ಪ್ರಮುಖ ಮೈಲಿಗಲ್ಲು ತಲುಪಿದ ಮೈಕ್ರೋಸಾಫ್ಟ್ 2010 ತಾಂತ್ರಿಕ ಮುನ್ನೋಟದತ್ತ

 

ಮೈಕ್ರೋಸಾಫ್ಟ್ ಆಫೀಸ್ 2010, ಮೈಕ್ರೋಸಾಫ್ಟ್ ಶೇರ್ ಪಾಯಿಂಟ್ ಸರ್ವರ್ 2010, ಮೈಕ್ರೋಸಾಫ್ಟ್ ವಿಸಿಯೋ 2010 ಮತ್ತು ಮೈಕ್ರೋಸಾಫ್ಟ್ ಪ್ರೋಜೆಕ್ಟ್ 2010ಗಳು ತಾಂತ್ರಿಕ ಮುನ್ನೋಟದ ಇಂಜೀನಿಯರಿಂಗ್ ಮೈಲಿಗಲ್ಲು ತಲುಪಿವೆ ಎಂಬುದಾಗಿ ಮೈಕ್ರೋಸಾಫ್ಟ್ ಘೋಷಿಸಿದೆ. ಅದು ಇತ್ತೀಚೆಗೆ ನಡೆದ ವರ್ಲ್ಡ್‌ವೈಡ್ ಪಾರ್ಟ್ನರ್ ಕಾನ್ಫರೆನ್ಸ್‌ನಲ್ಲಿ ಈ ಘೋಷಣೆಯನ್ನು ಮಾಡಿದ್ದು ಆಫೀಸ್ ಮತ್ತು ವಿಸಿಯೋವನ್ನು ತಾಂತ್ರಿಕ ಮುನ್ನೋಟ ಕಾರ್ಯದಂಗವಾಗಿ ಪರೀಕ್ಷಿಸಲು ಸಾವಿರಾರು ಮಂದಿಯನ್ನು ಆಹ್ವಾನಿಸಲಾಗಿದೆ.


ಆಫೀಸ್ 2010, ಪಿಸಿಗಳು, ಮೊಬೈಲ್ ಫೋನ್‌ಗಳು ಮತ್ತು ಬ್ರೌಸರ್‌ಗಳಾದ್ಯಂತ ಪ್ರಧಾನ ಉತ್ಪಾದಕತೆಯ ಸೊಲ್ಯೂಶನ್ ಆಗಿದೆ ಎಂಬುದಾಗಿ ಮೈಕ್ರೋಸಾಫ್ಟ್ ವಾಣಿಜ್ಯ ವಿಭಾಗದ ಹಿರಿಯ ಉಪಾಧ್ಯಕ್ಷ ಕ್ರಿಸ್ ಕಪೊಸ್ಸೆಲಾ ಅವರು ಪೂರ್ವವೀಕ್ಷಣೆ ಬಿಡುಗಡೆ ಸಂದರ್ಭದಲ್ಲಿ ನುಡಿದರು. ಆಫೀಸ್ 2010 ಮತ್ತು ಸಂಬಂಧಿತ ಉತ್ಪನ್ನಗಳು ಆವಿಷ್ಕಾರಿಕ ಸಾಮರ್ಥ್ಯಗಳನ್ನು ಒದಗಿಸುತ್ತದೆ ಮತ್ತು ಹೊಸ ಮಟ್ಟದ ನಮ್ಯತೆ ಹಾಗೂ ಜನರಿಗೆ ಸಹಾಯವಾಗುವಂತಹ ಸಹಾಯವನ್ನು ಒದಗಿಸುತ್ತದೆ.


ಆಫೀಸ್ ವೆಬ್ ಅಪ್ಲಿಕೇಶನ್‌ಗಳ ಮೂಲಕ ಎಲ್ಲಿಂದ ಬೇಕಿದ್ದರೂ ಕೆಲಸ ಮಾಡಿ - ವರ್ಡ್‌ನ ಹಗುರತಮವಾದ ವೆಬ್ ಬ್ರೌಸರ್‌ಗಳು, ಪವರ್ ಪಾಯಿಂಟ್, ಎಕ್ಸೆಲ್ ಮತ್ತು ಒನ್ ನೋಟ್ - ಇವುಗಳು ಅಕ್ಷರಶಃ ಎಲ್ಲಿಂದ ಬೇಕಿದ್ದರೂ ಪ್ರವೇಶವನ್ನು ಒದಗಿಸುತ್ತವೆ ಮತ್ತು ಸಾಧನದ ಅಭ್ಯಂತರ ಇಲ್ಲದಂತೆ ಅವುಗಳ ನೋಟ ಮತ್ತು ಅನುಭವವನ್ನು ಸಂರಕ್ಷಿಸಬಹುದಾಗಿದೆ.


ಮೈಕ್ರೋಸಾಫ್ಟ್ ವರ್ಡ್ 2010, ಮೈಕ್ರೋಸಾಫ್ಟ್ ಪವರ್ ಪಾಯಿಂಟ್ 2010 ಮತ್ತು ಮೈಕ್ರೋಸಾಫ್ಟ್ ಒನ್ ನೋಟ್ 2010, ಮತ್ತು ಅಡ್ವಾನ್ಸ್‌ಡ್ ಇ-ಮೇಲ್ ನಿರ್ವಹಣೆ ಹಾಗೂ ಬೇಡದ ಥ್ರೆಡ್‌ಗಳನ್ನು ಅಲಕ್ಷಿಸುವ ಆಯ್ಕೆ ಸೇರಿದಂತೆ ಮೈಕ್ರೋಸಾಫ್ಟ್ ಔಟ್‌ಲುಕ್ 2010ರಲ್ಲಿ ಕ್ಯಾಲೆಂಡರಿಂಗ್ ಸಾಮರ್ಥ್ಯಗಳು ಜತೆಗೆ ಚೆನ್ನಾಗಿ ಸಹವರ್ತಿಸುತ್ತದೆ.

 

ವಿಡಿಯೋ ಮತ್ತು ಪಿಕ್ಚರ್ ಎಡಿಟಿಂಗ್, ಮೈಕ್ರೋಸಾಫ್ಟ್ ಪವರ್ ಪಾಯಿಂಟ್ 2010ರಲ್ಲಿನ ಬ್ರಾಡ್‌ಕಾಸ್ಟ್ ಸಾಮರ್ಥ್ಯ, ಹೊಸ ಮೈಕ್ರೋಸಾಫ್ಟ್ ಆಫೀಸ್ ಬ್ಯಾಕ್‌ಸ್ಟೇಜ್ ನೋಟದ ಮೂಲಕ ಸುಲಭ ಡಾಕ್ಯುಮೆಂಟ್ ತಯಾರಿ ಮತ್ತು ದತ್ತಾಂಶಗಳ ದೃಶ್ಯೀಕರಣಕ್ಕಾಗಿ ಮತ್ತು ಅತ್ಯಂತ ಕ್ಷಿಪ್ರವಾಗಿ ಗತಿಯನ್ನು ಗುರುತಿಸುತ್ತಿದ್ದು ಇದು ಜೀವನಕ್ಕೆ ಐಡಿಯಾಗಳನ್ನು ತರುತ್ತದೆ.

 

ಆಫೀಸ್ ಆವೃತ್ತಿಗಳ ಸಂಖ್ಯೆಯನ್ನು ಎಂಟರಿಂದ ಐದಕ್ಕೆ ಸರಳಗೊಳಿಸಿ ಸಮರ್ಥಿಸುವುದಾಗಿಯೂ ಮೈಕ್ರೋಸಾಫ್ಟ್ ಘೋಷಿಸಿದೆ. ಅಲ್ಲದೆ ಪ್ರತಿಯೊಂದು ಆವೃತ್ತಿಯನ್ನೂ ಸಹ ಹೆಚ್ಚುವರಿ ಅಪ್ಲಿಕೇಶನ್‌ಗಳು ಮತ್ತು ಫೀಚರ್‌ಗಳೊಂದಿಗೆ ವಿಸ್ತರಿಸುವುದಾಗಿಯೂ ಹೇಳಿದೆ. ವಿಂಡೋಸ್ ಲೈವ್, ಆನ್ ಪ್ರಿಮೈಸಸ್ ಮತ್ತು ಮೈಕ್ರೋಸಾಫ್ಟ್ ಆನ್‌ಲೈನ್ ಸರ್ವೀಸಸ್ ಈ ಮೂರು ವಿಧಾನಗಳ ಮೂಲಕ ಆಫೀಸ್ ವೆಬ್ ಅಪ್ಲಿಕೇಶನ್‌ಗಳು ಲಭ್ಯವಿದೆ.

 

ಮೈಕ್ರೋಸಾಫ್ಟ್‌ನ ವಿಶ್ವಾದ್ಯಂತ ಭಾಗೀದಾರ ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರೂ ತಾಂತ್ರಿಕ ಮುನ್ನೋಟ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನ ಪಡೆಯಲಿದ್ದಾರೆ. ಆಫೀಸ್ 2010 ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳು 2010ನ ಮೊದಲರ್ಧದಲ್ಲಿ ಲಭ್ಯವಿದೆ. ಆಫೀಸ್ 2010 ಕುರಿತ ಹೆಚ್ಚಿನ ಮಾಹಿತಿಗಳು http://www.microsoft.com/Office2010 ನಲ್ಲಿ ಲಭ್ಯವಿದೆ.

Read More on....