ಮುಖ್ಯ ಮೈಲುಗಲ್ಲನ್ನು ಮುಟ್ಟಿದ ಮೈಕ್ರೋಸಾಫ್ಟ್ ಆಫೀಸ್ 2010
ಮೈಕ್ರೋಸಾಫ್ಟ್ ಆಫೀಸ್ 2010, ಮೈಕ್ರೋಸಾಫ್ಟ್ ಶೇರ್‌ಪಾಯಿಂಟ್ ಸರ್ವರ್ 2010, ಮೈಕ್ರೋಸಾಫ್ಟ್ ವಿಸಿಯೋ 2010 ಮತ್ತು ಮೈಕ್ರೋಸಾಫ್ಟ್ ಪ್ರಾಜೆಕ್ಟ್ 2010 ಗಳು ತಾಂತ್ರಿಕ ಪೂರ್ವವೀಕ್ಷಣೆಯ ಇಂಜಿನಿಯರಿಂಗ್ ಮೈಲಿಗಲ್ಲನ್ನು ತಲುಪಿದೆ ಎಂದು ಮೈಕ್ರೋಸಾಫ್ಟ್ ಕಾರ್ಪೋರೇಶನ್ ಘೋಷಿಸಿದೆ. ಇಂದಿನಿಂದ ಪ್ರಾರಂಭಿಸಿ, ತಾಂತ್ರಿಕ ಪೂರ್ವವೀಕ್ಷಣೆಯ ಕಾರ್ಯಕ್ರಮದ ಅಂಗವಾಗಿ ಫೀಸ್ ಮತ್ತು ವಿಸಿಯೋ ಅನ್ನು ಪರೀಕ್ಷಿಸಲು ಸಾವಿರಾರು ಜನರನ್ನು ಆಹ್ವಾನಿಸಲಾಗುವುದು.
ಮೈಕ್ರೋಸಾಫ್ಟ್ ವ್ಯವಹಾರ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಕ್ರಿಸ್ ಕ್ಯಾಪೋಸ್ಸೆಲಾ ಅವರು ಹೇಳುವಂತೆ “ಆಫೀಸ್ 2010 ಎನ್ನುವುದು ಪಿಸಿಗಳು, ಮೊಬೈಲ್ ಫೋನ್‌ಗಳು* ಮತ್ತು ಬ್ರೌಸರ್*ಗಳಾದ್ಯಂತ ಪ್ರೀಮಿಯರ್ ಉತ್ಪನ್ನ ಪರಿಹಾರವಾಗಿದೆ. PowerPoint ನಲ್ಲಿ ಪ್ರಸಾರ ಮತ್ತು ವೀಡಿಯೋ ಎಡಿಟಿಂಗ್‌ನಿಂದ ಪ್ರಾರಂಭಿಸಿ, Excel ನಲ್ಲಿ ಹೊಸ ಡೇಟಾ ವಿಶುವಲೈಸೇಶನ್ ಸಾಮರ್ಥ್ಯಗಳು, ಮತ್ತು Word ನಲ್ಲಿ ಕೋ-ಆಥರಿಂಗ್‌ವರೆಗೆ, ಯಾವುದೇ ಸಾಧನವನ್ನು ಬಳಸಿ ಯಾವುದೇ ಸ್ಥಾನದಿಂದ ಜನರು ಜಾಣತನದಿಂದ ಮತ್ತು ವೇಗವಾಗಿ ಕಾರ್ಯನಿರ್ವಹಿಸಲು ನಾವು ತಂತ್ರಜ್ಞಾನಗಳನ್ನು ನೀಡುತ್ತಿದ್ದೇವೆ.
ಆಫೀಸ್ 2010 ಮತ್ತು ಸಂಬಂಧಿತ ಉತ್ಪನ್ನಗಳು ನಾವಿನ್ಯ ಸಾಮರ್ಥ್ಯಗಳನ್ನು ನೀಡುತ್ತವೆ ಮತ್ತು ಜನರಿಗೆ ಸಹಾಯಕವಾಗುವ ಹೊಸ ಮಟ್ಟದ ಅನುಕೂಲತೆ ಮತ್ತು ಆಯ್ಕೆಯನ್ನು ಒದಗಿಸುತ್ತವೆ.
• ಆಫೀಸ್ ವೆಬ್ ಅಪ್ಲಿಕೇಶನ್‌ಗಳ ಮೂಲಕ ಎಲ್ಲಿಂದ ಬೇಕಿದ್ದರೂ ಕೆಲಸ ಮಾಡಿ - ವರ್ಡ್, ಪವರ್ ಪಾಯಿಂಟ್, ಎಕ್ಸೆಲ್ ಮತ್ತು ಒನ್‌ನೋಟ್‌ನ ಹಗುರತಮವಾದ ವೆಬ್ ಬ್ರೌಸರ್‌ಗಳು- ಇವುಗಳು ಅಕ್ಷರಶಃ ಎಲ್ಲಿಂದ ಬೇಕಿದ್ದರೂ ಡಾಕ್ಯುಮೆಂಟ್‌ಗಳಿಗೆ ಪ್ರವೇಶವನ್ನು ಒದಗಿಸುತ್ತವೆ ಮತ್ತು ಸಾಧನಗಳು ಯಾವುದೇ ಇರಲಿ ಅವುಗಳ ನೋಟ ಮತ್ತು ಅನುಭವವನ್ನು ಸಂರಕ್ಷಿಸುತ್ತವೆ.
• ಮೈಕ್ರೋಸಾಫ್ಟ್ ವರ್ಡ್ 2010, ಮೈಕ್ರೋಸಾಫ್ಟ್ ಪವರ್ ಪಾಯಿಂಟ್ 2010 ಮತ್ತು ಮೈಕ್ರೋಸಾಫ್ಟ್ ಒನ್ ನೋಟ್ 2010, ಮತ್ತು ಮೈಕ್ರೋಸಾಫ್ಟ್ ಔಟ್‌ಲುಕ್ 2010ನಲ್ಲಿನ ಸುಧಾರಿತ ಇ-ಮೇಲ್ ನಿರ್ವಹಣೆ ಮತ್ತು ಕ್ಯಾಲೆಂಡರಿಂಗ್ ಸಾಮರ್ಥ್ಯಗಳೊಂದಿಗೆ, ಬಳಕೆದಾರರಿಗೆ ಬೇಡದ ಥ್ರೆಡ್‌ಗಳನ್ನು “ನಿರ್ಲಕ್ಷಿಸುವ” ಆಯ್ಕೆಯೊಂದಿಗೆ ಚೆನ್ನಾಗಿ ಸಹವರ್ತಿಸಿ.
• ವಿಡಿಯೋ ಮತ್ತು ಪಿಕ್ಚರ್ ಎಡಿಟಿಂಗ್, ಮೈಕ್ರೋಸಾಫ್ಟ್ ಪವರ್ ಪಾಯಿಂಟ್ 2010ರಲ್ಲಿನ ಬ್ರಾಡ್‌ಕಾಸ್ಟ್ ಸಾಮರ್ಥ್ಯ, ಹೊಸ ಮೈಕ್ರೋಸಾಫ್ಟ್ ಆಫೀಸ್ ಬ್ಯಾಕ್‌ಸ್ಟೇಜ್ ವ್ಯೂ ಮೂಲಕ ಸುಲಭ ಡಾಕ್ಯುಮೆಂಟ್ ತಯಾರಿ ಮತ್ತು ದತ್ತಾಂಶ ಮತ್ತು ಸ್ಪಾಟ್ ಟ್ರೆಂಡ್‌ಗಳನ್ನು ತ್ವರಿತವಾಗಿ ವೀಕ್ಷಿಸಲು ಹೊಸ ನಾವಿನ್ಯತೆಯೊಡನೆ ಜೀವನಕ್ಕೆ ಹೊಸ ಯೋಚನೆಗಳನ್ನು ತನ್ನಿ.
ಹೆಚ್ಚುವರಿ ಅಪ್ಲಿಕೇಶನ್‌ಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಪ್ರತಿ ಆವೃತ್ತಿಯನ್ನು ವರ್ಧಿಸುವ ಜೊತೆಗೆ ಆಫೀಸ್ ಆವೃತ್ತಿಗಳ ಸಂಖ್ಯೆಯನ್ನು ಎಂಟರಿಂದ ಐದಕ್ಕೆ ಸರಳಗೊಳಿಸುವುದಾಗಿ ಮೈಕ್ರೋಸಾಫ್ಟ್ ಘೋಷಿಸಿದೆ. ಆಫೀಸ್ ವೆಬ್ ಅಪ್ಲಿಕೇಶನ್‌ಗಳು ಮೂರು ವಿಧಗಳ ಮೂಲಕ ಲಭ್ಯವಿರುವುದಾಗಿ ಸಹ ಕಂಪನಿಯು ಘೋಷಿಸಿದೆ: ಯಾವುದೇ ವೆಚ್ಚವಿಲ್ಲದೇ 400 ಮಿಲಿಯನ್‌ಗಳಿಗಿಂತ ಹೆಚ್ಚು ಗ್ರಾಹಕರು ಆಫೀಸ್ ವೆಬ್ ಅಪ್ಲಿಕೇಶನ್‌ಗಳಿಗೆ ಪ್ರವೇಶಿಸಬಹುದಾದ ವಿಂಡೋಸ್ ಲೈವ್ ಮೂಲಕ; 90 ಮಿಲಿಯನ್ ಆಫೀಸ್ ವಾರ್ಷಿಕ ಗ್ರಾಹಕರನ್ನು ಒಳಗೊಂಡು ಎಲ್ಲಾ ಆಫೀಸ್ ವಾಲ್ಯೂಮ್ ಪರವಾನಗಿ ಗ್ರಾಹಕರುಗಳಿಗೆ ಒಂದೇ ಸ್ಥಳ; ಮತ್ತು ಹೋಸ್ಟ್ ಮಾಡಿದ ನೀಡುವಿಕೆಯ ಭಾಗವಾಗಿ ಚಂದಾದಾರಿಕೆಯನ್ನು ಖರೀದಿಸಲು ಗ್ರಾಹಕರಿಗೆ ಸಾಧ್ಯವಾಗುವ ಮೈಕ್ರೋಸಾಫ್ಟ್ ಆನ್‌ಲೈನ್ ಸೇವೆಗಳ ಮೂಲಕ.
ಪಾಲುದಾರ ಅವಕಾಶಗಳು
ಸಾಕಷ್ಟು ಹೊಸ ಮತ್ತು ಹೊಸತನದ ಸಿದ್ಧ ಪರಿಕರಗಳು ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಆಫೀಸ್ 2010 ಮತ್ತು ಶೇರ್‌ಪಾಯಿಂಟ್ 2010 ಬಿಡುಗಡೆ ಮಾಡಲು ಪಾಲುದಾರರನ್ನು ಮೈಕ್ರೋಸಾಫ್ಟ್ ಸಿದ್ದಗೊಳಿಸುತ್ತಿದೆ. ಇವುಗಳಲ್ಲಿ ಶೇರ್‌ಪಾಯಿಂಟ್, ಆಫೀಸ್ ಮತ್ತು ಎಕ್ಸ್‌ಚೇಂಜ್‌ಗೆ ಇಗ್ನೈಟ್ ಪ್ರೋಗ್ರಾಂ; ಬ್ಯೂಸಿನೆಸ್ ಪ್ರೊಡಕ್ಟಿವಿಟಿ ಇನ್‌ಫ್ರಾಸ್ಟ್ರಕ್ಚರ್ ಆಪ್ಟಿಮೈಸೇಶನ್ (ಬಿಪಿಐಓ) ಯೂನಿರ್ವಸಿಟಿ; ಶೇರ್‌ಪಾಯಿಂಟ್‌ಗಾಗಿ ಮಾಸ್ಟರ್ಸ್ ಮತ್ತು ಆರ್ಕಿಟೆಕ್ಟ್ ಸರ್ಟಿಫಿಕೇಶನ್; ಹೊಸ ಪಾಲುದಾರ ಬ್ಯುಸಿನೆಸ್ ಪ್ರೊಡಕ್ಟಿವಿಟಿ ಆನ್‌ಲೈನ್ ಸೇವೆಗಳ ವೈಶಿಷ್ಟ್ಯಗಳು ಮತ್ತು ಹಂಚಿಕೆದಾರರ ಮಾದರಿ; ಮತ್ತು ಎಕ್ಸ್‌ಚೇಂಜ್ 2010 ರೆಡಿನೆಸ್ ವೆಬ್‌ಕಾಸ್ಟ್ ಸರಣಿಗಳು ಮತ್ತು ಡೆಮೋ ಪ್ರದರ್ಶನ ಒಳಗೊಂಡಿದೆ. ಈ ಪ್ರೋಗ್ರಾಂಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು http://partner.microsoft.com/businessproductivity
ನಲ್ಲಿ ಕಾಣಬಹುದು.
ಲಭ್ಯತೆ
ಎಲ್ಲಾ ಮೈಕ್ರೋಸಾಫ್ಟ್ ವರ್ಲ್ಡ್‌ವೈಡ್ ಪಾರ್ಟ್ನರ್ ಕಾನ್ಫರೆನ್ಸ್‌ನಲ್ಲಿನ ಭಾಗಹಿಸುವವರು ಟೆಕ್ನಿಕಲ್ ಪ್ರಿವ್ಯೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣವನ್ನು ಪಡೆದುಕೊಳ್ಳುತ್ತಾರೆ. ಆಫೀಸ್ 2010 ಮತ್ತು ಸಂಬಂಧಿತ ಉತ್ಪನ್ನಗಳು 2010 ರ ಮೊದಲಾರ್ಧದಲ್ಲಿ ಲಭ್ಯವಿರುತ್ತವೆ. ಆಫೀಸ್ 2010 ಬಗ್ಗೆ ಹೆಚ್ಚಿನ ಮಾಹಿತಿಯನ್ನು http://www.microsoft.com/Office2010
ನಲ್ಲಿ ಕಾಣಬಹುದು.