ಸ್ಕೈಪ್ ಅನ್ನು ಸ್ವಾಧೀನಪಡಿಸಿಕೊಳ್ಳಲಿರುವ ಮೈಕ್ರೋಸಾಫ್ಟ್

 

 

            ಮೈಕ್ರೋಸಾಫ್ಟ್ ಮತ್ತು ಸ್ಕೈಪ್ ಗ್ಲೋಬಲ್ ಎಸ್.ಎ.ಆರ್.ಎಲ್ ಇಂದು ತಾವು ಒಪ್ಪಂದಕ್ಕೆ ಬಂದಿರುವುದಾಗಿ, ಇದರ ಅಡಿಯಲ್ಲಿ ಸಿಲ್ವರ್ ಲೇಕ್ ಹೂಡಿಕೆದಾರರ ಸಮೂಹದಿಂದ $8.5 ಬಿಲಿಯನ್ ಡಾಲರ್ ನಗದಿಗೆ ಪ್ರಮುಖ ಇಂಟರ್ನೆಟ್ ಸಂವಹನ ಕಂಪನಿಯಾದ ಸ್ಲೈಪ್ ಅನ್ನು ಮೈಕ್ರೋಸಾಫ್ಟ್ ಸ್ವಾಧೀನ ಪಡಿಸಿಕೊಳ್ಳುವುದಾಗಿ ಘೋಷಣೆ ಮಾಡಿವೆ. ಒಪ್ಪಂದವನ್ನು ಮೈಕ್ರೋಸಾಫ್ಟ್ ಮತ್ತು ಸ್ಕೈಪ್ ಆಡಳಿತ ಮಂಡಳಿಯ ನಿರ್ದೇಶಕರುಗಳು ಅನುಮೋದಿಸಿದ್ದಾರೆ.


ಸ್ವಾಧೀನಪಡಿಸಿಕೊಳ್ಳುವಿಕೆಯು ನೈಜ ಸಮಯದ ವೀಡಿಯೋ ಮತ್ತು ಧ್ವನಿ ಸಂವಹನಕ್ಕೆ ಅವಕಾಶವನ್ನು ಹೆಚ್ಚಿಸುವುದಲ್ಲದೇ, ಗ್ರಾಹಕರು ಮತ್ತು ಉದ್ಯಮಕ್ಕೆ ಪ್ರಯೋಜನಗಳನ್ನು ತರುತ್ತದೆ ಮತ್ತು ಪ್ರಮುಖವಾದ ಹೊಸ ವ್ಯವಹಾರ ಮತ್ತು ಆದಾಯದ ಅವಕಾಶಗಳನ್ನು ನಿರ್ಮಿಸುತ್ತದೆ. ಸಂಯೋಜನೆಯು ಸ್ಕೈಪ್‌ನ ವಿಶ್ವ-ಗುಣಮಟ್ಟದ ಬ್ರಾಂಡ್ ಅನ್ನು ವಿಸ್ತರಿಸುತ್ತದೆ ಮತ್ತು ಅದರ ಜಾಲದ ವೇದಿಕೆಗೆ ತಲುಪುತ್ತದೆ ಮತ್ತು ಹಾಗೆಯೇ ಮೈಕ್ರೋಸಾಪ್ಟ್‌ ನ ಪ್ರಸ್ತುತ ನೈಜ-ಸಮಯದ ಸಂವಹನಗಳ ಉತ್ಪನ್ನಗಳು ಮತ್ತು ಸೇವೆಗಳ ಕ್ಷೇತ್ರವನ್ನು ವರ್ಧಿಸುತ್ತದೆ.


170 ಸಂಪರ್ಕಿತ ಬಳಕೆದಾರರು ಮತ್ತು 2010 ರಲ್ಲಿ 207 ಬಿಲಿಯನ್‌ಗೂ ಹೆಚ್ಚು ನಿಮಿಷಗಳ ಕಾಲದ ಧ್ವನಿ ಮತ್ತು ವೀಡಿಯೋ ಸಂಭಾಷಣೆಗಳೊಂದಿಗೆ, ಜಾಗತಿಕವಾಗಿ ಸ್ನೇಹಿತರು, ಕುಟುಂಬಗಳು ಮತ್ತು ವ್ಯವಹಾರ ಸಹೋದ್ಯೋಗಿಗಳೊಂದಿಗೆ ಶ್ರೀಮಂತ ಮತ್ತು ಅರ್ಥಫೂರ್ಣ ಸಂಪರ್ಕಗಳನ್ನು ನಿರ್ಮಿಸವಲ್ಲಿ ಸ್ಕೈಪ್ ಮುಂಚೂಣಿಯಲ್ಲಿದೆ. ಮೈಕ್ರೋಸಾಫ್ಟ್ ತನ್ನ ಲಿಂಕ್ (ಮೂರನ್ ತ್ರೈಮಾಸಿಕದಲ್ಲಿ ಇದು ಶೇಕಡಾ 30 ರಷ್ಟು ಬೆಳವಣಿಗೆ ಕಂಡಿದೆ), ಔಟ್‌ಲುಕ್, ಮೆಸೆಂಜರ್, ಹಾಟ್‌ಮೇಲ್ ಮತ್ತು ಎಕ್ಸ್‌ ಬಾಕ್ಸ್ ಲೈವ್ ಒಳಗೊಂಡು ತನ್ನ ವಿವಿಧ ಪ್ಲಾಟ್‌ಫಾರ್ಮ್‌ಗಳಾದ್ಯಂತ ನೈಜ-ಸಮಯದ ಸಂವಹನಗಳಲ್ಲಿ ದೀರ್ಘಾವಧಿಯ ಗಮನವನ್ನು ಮತ್ತು ಹೂಡಿಕೆಯನ್ನು ಹೊಂದಿದೆ.


ಮೈಕ್ರೋಸಾಫ್ಟ್‌ನ ಎಕ್ಸ್ ಬಾಕ್ಸ್ ಮತ್ತು ಕೈನೆಕ್ಟ್‌, ವಿಂಡೋಸ್ ಫೋನ್ ಮತ್ತು ವಿಂಡೋಸ್ ಸಾಧನಗಳ ವ್ಯಾಪಕ ಶ್ರೇಣಿಗಳ ಸಾಧನಗಳಿಗೆ ಸ್ಕೈಪ್ ಬೆಂಬಲಿಸುತ್ತದೆ ಮತ್ತು ಲಿಂಕ್, ಔಟ್‌ಲುಕ್, ಎಕ್ಸ್‌ ಬಾಕ್ಸ್ ಮತ್ತು ಇತರ ಸಮುದಾಯಗಳೊಂದಿಗೆ ಸ್ಕೈಪ್ ಬಳಕೆದಾರರಿಗೆ ಮೈಕ್ರೋಸಾಫ್ಟ್ ಸಂಪರ್ಕಿಸುತ್ತದೆ. ಮೈಕ್ರೋಸಾಫ್ಟ್ ಅಲ್ಲದ ವೇದಿಕೆಗಳಲ್ಲಿ ಸ್ಕೈಪ್ ಗ್ರಾಹಕರ ಮೇಲೆ ಹೂಡಿಕೆ ಮಾಡುವುದನ್ನು ಮತ್ತು ಬೆಂಬಲ ನೀಡುವುದನ್ನು ಮೈಕ್ರೋಸಾಫ್ಟ್ ಮುಂದುವರಿಸುತ್ತದೆ.


“ಸ್ಕೈಪೆ ಎನ್ನುವುದು ಅತ್ಯಮೋಘ ಸೇವೆಯಾಗಿದ್ದು, ಇದನ್ನು ವಿಶ್ವದಾದ್ಯಂತದ ಮಿಲಿಯಾಂತರ ಜನರು ಪ್ರೀತಿಸಿದ್ದಾರೆ” ಎನ್ನುತ್ತಾರೆ ಮೈಕ್ರೋಸಾಫ್ಟ್ ಸಿಇಓ ಆದ ಸ್ಟೀವ್ ಬಾಲ್ಮರ್ ಅವರು. “ಒಟ್ಟಿಗೆ ಸೇರಿ ನಾವು ಭವಿಷ್ಯದ ನೈಜ-ಸಮಯದ ಸಂವಹನಗಳನ್ನು ನಿರ್ಮಿಸುವ ಮೂಲಕ, ಜನರು ವಿಶ್ವದಾದ್ಯಂತದ ತಮ್ಮ ಸ್ನೇಹಿತರು, ಕುಟುಂಬದವರು, ಗ್ರಾಹಕರು ಮತ್ತು ಸಹೋದ್ಯೋಗಿಗಳೊಂದಿಗೆ ಸುಲಭವಾಗಿ ಸಂಪರ್ಕಿಸುವಂತೆ ಮಾಡುತ್ತೇವೆ” ಎಂದೂ ಅವರು ಹೇಳುತ್ತಾರೆ.


ಸ್ಕೈಪ್ ಎನ್ನುವುದು ಮೈಕ್ರೋಸಾಫ್ಟ್ ನೊಳಗಡನೆಯೇ ಹೊಸ ವ್ಯವಹಾರದ ವಿಭಾಗವಾಗುತ್ತದೆ ಮತ್ತು ಸ್ಕೈಪ್‌ನ ಸಿಇಓ ಆದ ಟೋನಿ ಗೇಟ್ಸ್ ಅವರು ನೇರವಾಗಿ ಬಾಲ್ಮರ್ ಅವರಿಗೆ ವರದಿ ಮಾಡುತ್ತಾ ಮೈಕ್ರೋಸಾಫ್ಟ್ ಸ್ಕೈಪ್ ವಿಭಾಗದ ಅಧ್ಯಕ್ಷ ಪದವಿಯನ್ನು ಸ್ವೀಕರಿಸುತ್ತಾರೆ.


“ಮೈಕ್ರೋಸಾಫ್ಟ್ ಮತ್ತು ಸ್ಕೈಪ್ ಎರಡೂ ಸಹ ತಮ್ಮ ಗ್ರಾಹಕರಿಗೆ ಸಾಫ್ಟ್ ವೇರ್ ನಾವಿನ್ಯತೆ ಮತ್ತು ಉತ್ಪನ್ನಗಳನ್ನು ತರುವ ಉದ್ದೇಶವನ್ನು ಹಂಚಿಕೊಳ್ಳುತ್ತವೆ” ಎನ್ನುತ್ತಾರೆ ಟೋನಿ ಬೇಟ್ಸ್ ಅವರು. “ ಒಟ್ಟಿಗೆಯಾಗಿ, ನಾವು ನಮ್ಮ ಜಾಗತಿಕ ಸಮುದಾಯವನ್ನು ವಿಸ್ತರಿಸುವ ಸ್ಕೈಪ್‌ನ ಯೋಜನೆಗಳಿಗೆ ವೇಗವನ್ನು ನೀಡಲು ಮತ್ತು ಪ್ರತಿಯೊಬ್ಬರೂ ಸಂವಹನ ಮಾಡಲು ಮತ್ತು ಸಹಯೋಗಿಸುವಂತೆ ಹೊಸ ವಿಧಾನಗಳನ್ನು ಪರಿಚಯಿಸಲು ನಮಗೆ ಸಾಧ್ಯವಾಗುತ್ತದೆ” ಎಂದು ಬೇಟ್ಸ್ ಹೇಳುತ್ತಾರೆ.


“ಟೋನಿ ಬೇಟ್ಸ್ ಅವರು ನಾಯಕರಾಗಿ ಅತ್ಯುತ್ತಮವಾದ ಹಿನ್ನೆಲೆಯನ್ನು ಹೊಂದಿದ್ದಾರೆ ಮತ್ತು ಅವರು ಮೈಕ್ರೋಸಾಫ್ಟ್‌ ನ ಕಾರ್ಯನಿರ್ವಹಣೆ ತಂಡದ ಸಾಮರ್ಥ್ಯವನ್ನು ಹೆಚ್ಚಿಸುತ್ತಾರೆ. ಸ್ಪೈಪ್‌ನ ಜಾಗತಿಕ ಪ್ರತಿಭಾವಂತ ಸಿಬ್ಬಂದಿಗಳು ತಮ್ಮ ಒಳನೋಟಗಳು, ಯೋಚನೆಗಳು ಮತ್ತು ಅನುಭವವನ್ನು ಮೈಕ್ರೋಸಾಫ್ಟ್ ಗೆ ಧಾರೆಯೆರೆಯುವುದನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಬಾಲ್ಮರ್ ಹೇಳಿದರು.


ಸ್ಕೈಪ್ ಅನ್ನು ಮೈಕ್ರೋಸಾಫ್ಟ್‌ ಗೆ ಮಾರಾಟ ಮಾಡಿದ ಹೂಡಿಕೆದಾರರ ಪರವಾಗಿ ಮಾತನಾಡಿದ ಸಿಲ್ವರ್ ಲೇಕ್‌ನ ಕಾರ್ಯನಿರ್ವಹಣಾ ನಿರ್ದೇಶಕರಾದ ಎಗಾನ್ ಡರ್ಬಾನ್ ಅವರು ಮಾತನಾಡುತ್ತಾ, “ನಮ್ಮ ಮಾಲೀಕತ್ವದ ಸಂದರ್ಭದಲ್ಲಿ ಸ್ಕೈಪ್‌ನ ಮಾರ್ಪಡಣೆಯನ್ನು ನೋಡಿ ನಾವು ಆನಂದಭರಿತರಾಗಿದ್ದೇವೆ ಮತ್ತು ಇದರ ಕಾರ್ಯನಿರ್ವಹಣಾ ತಂಡ ಮತ್ತು ಉದ್ಯೋಗಿಗಳ ಅತ್ಯದ್ಭುತ ಬದ್ಧತೆಗೆ ನಾವು ಋಣಿಯಾಗಿದ್ದೇನೆ. ಮೈಕ್ರೋಸಾಫ್ಟ್ ನೊಂದಿಗೆ ಸ್ಕೈಪ್‌ನ ದೀರ್ಘಾವಧಿಯ ಭವಿಷ್ಯದ ಬಗ್ಗೆ ಮತ್ತು ಅದು ವಿಶ್ವದ ಹೆಚ್ಚು ಶಕ್ತಿಯುತವಾದ ಮತ್ತು ವ್ಯಾಪಕವಾದ ಸಂವಹನಗಳ ವೇದಿಕೆಯಾಗುವುದಕ್ಕೆ ನಾವು ಸಂತೋಷಗೊಂಡಿದ್ದೇವೆ,” ಎಂದು ಹೇಳಿದರು.


2003 ರಲ್ಲಿ ಸ್ಥಾಪಿತವಾದ ಸ್ಕೈಪ್ ಅನ್ನು 2005 ರ ಸೆಪ್ಟೆಂಬರ್‌ನಲ್ಲಿ ಇಬೇಯು ಸ್ವಾಧೀನಪಡಿಸಿಕೊಂಡಿತು, ತದನಂತರ 2009 ರ ನವೆಂಬರ್‌ನಲ್ಲಿ ಹೂಡಿಕೆದಾರರ ಸಮೂಹವಾದ ಸಿಲ್ವರ್ ಲೇಕ್ ಸ್ವಾಧೀನಪಡಿಸಿಕೊಂಡಿತು. ಸಿಲ್ವರ್‌ ಲೇಕ್‌ನ ನಾಯಕತ್ವದ ಅಡಿಯಲ್ಲಿ ಕಳೆದ 18 ತಿಂಗಳುಗಳಲ್ಲಿ ಸ್ಕೈಪ್ ಭಾರಿ ಬೆಳವಣಿಗೆಯನ್ನು ಕಂಡಿದ್ದು, ಇದರ ಮಾಸಿಕ ಕರೆಯ ನಿಮಿಷಗಳು ಶೇಕಡಾ 150 ರಷ್ಟು ಹೆಚ್ಚಿದೆ, ಹೊಸ ಆದಾಯದ ಮೂಲಗಳು, ಕೌಶಲ್ಯಬದ್ಧ ಪಾಲುದಾರಿಕೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ, ತನ್ನ ನೆಟ್ವರ್ಕ್ ಅನ್ನು ಮುನ್ನಡೆಸುವ ಬೌದ್ಧಿಕ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಮಹೋನ್ನತ ಕಾರ್ಯನಿರ್ವಹಣೆ ತಂಡವನ್ನು ನೇಮಕ ಮಾಡಿಕೊಳ್ಳಲಾಗಿದೆ.

 

Read More on....