ಸೋಶಿಯಲ್ ನೆಟ್ವರ್ಕಿಂಗ್: ಟ್ವಿಟರ್


ಟ್ವಿಟರ್ ಒಂದು ಸಾಮಾಜಿಕ ಜಾಲದ ವೆಬ್‌ದಾಣವಾಗಿದ್ದು ಮೈಕ್ರೋ ಬ್ಲಾಗಿಂಗ್ ಪ್ರವರ್ತಕನಾಗಿದೆ. ಇದು ತನ್ನ ಬಳಕೆದಾರರಿಗೆ ಸಂದೇಶಗಳನ್ನು ರವಾನಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ. ಇದನ್ನು ಟ್ವೀಟ್‌ಗಳೆಂದು ಕರೆಯಲಾಯಿತು. ಟ್ವಿಟರ್‌ನ ಅಪರೂಪತೆ ಅಥವಾ ವಿಶೇಷತೆ ಎಂದರೆ ಅದರ ಸಂಕ್ಷಿಪ್ತತೆ. ಸಂದೇಶ ಒಂದರಲ್ಲಿ ಗರಿಷ್ಠ 140 ಅಕ್ಷರಗಳಿರಬಹುದು.


ಯಾವುದೇ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳು ಒಂದು ಟ್ವಿಟರ್ ಖಾತೆ ತೆಗೆದು ಟ್ವೀಟ್ ಮಾಡಲು ಆರಂಭಿಸಬಹುದು. ಇತರ ಬಳಕೆದಾರನನ್ನು ಮುಕ್ತವಾಗಿ ಅನುಸರಿಸಲು ಇದೊಂದು ಮುಕ್ತ ವೇದಿಕೆಯಾಗಿದೆ. ಅದಾಗ್ಯೂ, ಗೌಪ್ಯತೆಯನ್ನು ಕಾಪಾಡಿಕೊಳ್ಳಲು, ಟ್ವಿಟರ್ ಬಳಕೆದಾರನ ಟ್ವೀಟ್‌ಗಳನ್ನು ಸುಭದ್ರವಾಗಿಸಲು ಆಯ್ಕೆಗಳಿವೆ. ತನ್ನ ಟ್ವೀಟ್‌ಗಳನ್ನು ರಕ್ಷಿಸಿಕೊಳ್ಳಲು ಟ್ವಿಟರ್ ಖಾತೆಯ ಮಾಲಕರು, ತನ್ನ ಪ್ರತಿಯೊಬ್ಬ ಫಾಲೋವರ್‌ನನ್ನೂ ಹಸ್ತಚಾಲಿತವಾಗಿ ಅನುಮತಿಸಬೇಕು. ಅವರು ತನ್ನ ಟ್ವೀಟ್‌ಗಳನ್ನು ಯಾವುದೇ ಇತರ ಬಳಕೆದಾರ ನೋಡುವುದನ್ನು ತಡೆಯುವ ಆಯ್ಕೆಯನ್ನೂ ಸಹ ಆರಿಸಿಕೊಳ್ಳಬಹುದಾಗಿದೆ.


ಕ್ರಮೇಣವಾಗಿ ಟ್ವಿಟರ್ ತನ್ನ ಬಳಕೆದಾರೊಂದಿಗೆ ವಿಕಸನಗೊಳ್ಳುತ್ತಾ ಹೋಯಿತು. ಇತರ ಬಳಕೆದಾರನ ಸಂದೇಶಗಳನ್ನು ಮರು ಟ್ವೀಟ್ ಮಾಡಲು ಇಚ್ಛಿಸಿದರೆ ಅಥವಾ ಬಯಸಿದರೆ, ಅವರು ಮರು ಟ್ಟೀಟ್ ಆಯ್ಕೆ ಮಾಡುತ್ತಾರೆ. ಆರಂಭದಲ್ಲಿ ಬಳಕೆದಾರರು “RT” ಎಂಬ ಆರಂಭಿಕ ಅಕ್ಷರಗಳನ್ನು ಬಳಸಿ ಅದು ಇನ್ನೊಬ್ಬ ಬಳಕೆದಾರನ ಟ್ವೀಟ್ (Re-Tweet) ಎಂಬ ಸೂಚನೆ ನೀಡುತ್ತಿದ್ದರು. ಪ್ರಸ್ತುತ ಮರು-ಟ್ವೀಟ್‌ಗಾಗಿ ಗುಂಡಿ (ಬಟನ್) ಒಂದನ್ನು ಒದಗಿಸಲಾಗಿದೆ.


ಆರಂಭಿಕ ಹಂತದಲ್ಲಿ ಅದಕ್ಕೊಂದು ಸುದೃಢವಾದ ವಾಣಿಜ್ಯ ಮಾದರಿ ಇಲ್ಲ ಎಂಬ ಕಾರಣಕ್ಕಾಗಿ ಟೀಕೆಟಿಪ್ಪಣಿಗಳು ಎದುರಾಗಿದ್ದವು. ಆದರೆ ಬಳಿಕ, ಬಿಂಗ್ ಮತ್ತು ಗೂಗಲ್‌ನಂತಹ ಶೋಧನಾ ದಿಗ್ಗಜರು ಒಪ್ಪಂದ ಒಂದಕ್ಕೆ ಸಹಿ ಹಾಕಿದ ಬಳಿಕ ಟ್ವಿಟರ್ ಆದಾಯ ಕಾಣಲಾರಂಭಿಸಿತು.


ಟ್ವಿಟರ್ ಇತ್ತೀಚೆಗೆ ಹೊಸದಾದ ಒಂದು (#New Twitter)  ವಿನ್ಯಾಸವನ್ನು ಅನಾವರಣಗೊಳಿಸಿದ್ದು, ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ.
ಹೆಚ್ಚಿನ ವಿವರಕ್ಕಾಗಿ www.twitter.com ತಾಣಕ್ಕೆ ಭೇಟಿ ನೀಡಿ.

Read More on....