ಮೈಕ್ರೋಸಾಫ್ಟ್ ಟಚ್ ಮೌಸ್

 

 

           ವಿಂಡೋಸ್ 7 ಬಳಕೆದಾರರಿಗೆ ಸ್ಪರ್ಶ-ಆಧಾರಿತ ನ್ಯಾವಿಗೇಶನ್ ಅನ್ನು ಮೈಕ್ರೋಸಾಫ್ಟ್ ಟಚ್ ಮೌಸ್ ಒದಗಿಸುತ್ತದೆ. ಮೌಸ್‌ನ ಪರಿಚಯಿಸುವಿಕೆಯು ಪಿಸಿಯೊಂದಿಗೆ ಸಂವಹನ ಮಾಡಲು ವಿಂಡೋಸ್ 7 ಬಳಕೆದಾರರಿಗೆ ಹೊಸ ವಿಧಾನವನ್ನು ನೀಡಲು ಕಾರಣವಾಗಿದೆ. ಹೊಸ ಮೈಕ್ರೋಸಾಫ್ಟ್ ಟಚ್ ಮೌಸ್, 1960 ರಿಂದಲೂ ಸತತವಾಗಿ ಆಪ್ಟಿಮೈಸ್ ಮಾಡುತ್ತಾ ಬಂದಿರುವ ಹಿಂದಿನ ಪರಿಚಯಾತ್ಮಕ ಮೌಸ್‌ನ ಒಳ್ಳೆಯ ಸಾಮರ್ಥ್ಯಗಳನ್ನು ಒಳಗೊಂಡಿದೆ. ವಿಂಡೋಸ್ 7 ಅನ್ನು ಬಳಸುವ ಲಕ್ಷಾಂತರ ಜನರಿಗೆ ಆಪರೇಟಿಂಗ್ ಸಿಸ್ಟಮ್ ಅನ್ನು ನ್ಯಾವಿಗೇಟ್ ಮಾಡಲು ಸ್ವಾಭಾವಿಕ ವಿಧಾನವನ್ನು ಹೊಸ ಮೌಸ್ ನೀಡುತ್ತದೆ.


ಮೌಸ್‌ನ ನಿಯಂತ್ರಣ ಮತ್ತು ನಿಖರತೆಯನ್ನು ಹೊಂದಿರುವ ಜೊತೆಗೆ ನಿಮ್ಮ ಪಿಸಿಯಲ್ಲಿ ಸ್ಪರ್ಶದ ಮೂಲಕ ಸಂವಹನ ಮಾಡುವಂತಹ ಸಾಧನವನ್ನು ಮೊದಲ ಬಾರಿಗೆ ಮೈಕ್ರೋಸಾಫ್ಟ್ ಸಂಶೋಧನೆ ಮಾಡಿದೆ. ಇದು ಬಳಕೆದಾರರು ತಮ್ಮ ಕೈಬೆರಳಿನಲ್ಲಿ ಅನುಭವಿಸುವ ರೀತಿಯಲ್ಲಿ ಪಿಸಿ ಮೇಲೆ ನಿಯಂತ್ರಣವನ್ನು ನೀಡುತ್ತದೆ.
ಟಚ್ ಮೌಸ್ ಬಳಕೆದಾರರಿಗೆ ಅವರು ಮೌಸ್‌ನೊಂದಿಗೆ ಏನೆಲ್ಲಾ ಮಾಡುತ್ತಿದ್ದರೋ ಅವನ್ನೆಲ್ಲಾ ಮಾಡಲು ಅವಕಾಶ ನೀಡುತ್ತದೆ, ಅಂದರೆ ಗುರುತಿಸುವುದು ಮತ್ತು ಕ್ಲಿಕ್ ಮಾಡುವುದು, ಆದರೆ ಟಚ್ ಮೌಸ್ ಇದರೊಂದಿಗೆ ಮಲ್ಟಿ-ಟಚ್ ಕಾರ್ಯದ ಸೇರ್ಪಡೆಯನ್ನು ಹೊಂದಿದ್ದು ಇದು ಅವಳ ಕೈ ಬೆರಳಿನ ಸ್ಪರ್ಶದಲ್ಲಿಯೇ ವಿಂಡೋಸ್ 7 ಅನ್ನು ಸುಲಭವಾಗಿ ಮತ್ತು ವೇಗವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.


ವಿಂಡೋಗಳನ್ನು ಕುಗ್ಗಿಸುವುದು ಮತ್ತು ಹಿಗ್ಗಿಸುವುದು, ವೆಬ್ ಪುಟಗಳ ಮೂಲ ಸ್ಕ್ರಾಲ್ ಮಾಡುವುದಂತಹ ಪ್ರತಿದಿನ ಬಳಕೆದಾರರು ಮಾಡುವಂತಹ ಕಾರ್ಯಗಳು ಬೆರಳಿನ ಸ್ಪರ್ಶದಲ್ಲಿಯೇ ಮೌಸ್‌ನ ಮೇಲ್ಭಾಗದಲ್ಲಿ ಲಭ್ಯವಿದೆ.


ಬಳಕೆದಾರರು ಹಲವಾರು ವಿಧದಲ್ಲಿ ಟಚ್ ಮೌಸ್ ಮೂಲಕ ನ್ಯಾವಿಗೇಟ್ ಮಾಡಬಹುದು.


ಒಂದು ಬೆರಳಿನ ಮೂಲಕ ಅದು ಬಳಕೆದಾರರಿಗೆ ಅವರು ಬಳಸುತ್ತಿರುವ ಡಾಕ್ಯುಮೆಂಟ್ ಅನ್ನು 360 ಡಿಗ್ರಿ ಕೋನದಲ್ಲಿ ಸ್ಕ್ರಾಲ್ ಮಾಡಲು ಅವಕಾಶ ನೀಡುತ್ತದೆ.


ಎರಡು ಬೆರಳುಗಳು ಅವರು ಬಳಸುತ್ತಿರುವ ಸಕ್ರಿಯ ವಿಂಡೋವನ್ನು ನಿರ್ವಹಣೆ ಮಾಡಲು ಮತ್ತು ವಿಂಡೋಗಳನ್ನು ಕುಗ್ಗಿಸುವ ಮತ್ತು ಹಿಗ್ಗಿಸುವ ಅಥವಾ ಅವುಗಳನ್ನು ಎಡಕ್ಕೆ ಅಥವಾ ಬಲಕ್ಕೆ ಸ್ನಾಪ್ ಮಾಡುವ ಅವಕಾಶವನ್ನು ನೀಡುತ್ತದೆ.


ಮೂರು ಬೆರಳುಗಳು ಬಳಕೆದಾರರಿಗೆ ವಿಭಿನ್ನ ಕಾರ್ಯಗಳ ನಡುವೆ ಬದಲಾಯಿಸುವ ಮೂಲಕ ನಿರ್ವಹಣೆ ಮಾಡಲು ಅಥವಾ ಎಲ್ಲಾ ತೆರೆದಿರುವ ವಿಂಡೋಗಳನ್ನು ತೆರವುಗೊಳಿಸಲು ಅವಕಾಶ ನೀಡುತ್ತದೆ.


ಹೆಬ್ಬೆರಳಿನ ಸ್ಪರ್ಶವು ಬಳಕೆದಾರರಿಗೆ ಇಂಟರ್ನೆಟ್ ಎಕ್ಸ್‌ಪ್ಲೋರರ್, ಪವರ್ ಪಾಯಿಂಟ್, ಮತ್ತು ವಿಂಡೋಸ್ ಫೋಟೋ ವ್ಯೂವರ್‌ನಂತಹ ಪ್ರೋಗ್ರಾಂಗಳಲ್ಲಿ ಹಿಂದೆ ಮತ್ತು ಮುಂದೆ ಚಲಿಸಲು ಅವಕಾಶ ನೀಡುತ್ತದೆ.

ಟಚ್ ಮೌಸ್‌ನ ಅತೀ ಸರಳ ವಿನ್ಯಾಸದ ಹಿಂದಿರುವ ಪ್ರಯತ್ನವು ಎರಡಕ್ಕಿಂತ ಹೆಚ್ಚು ವರ್ಷಗಳ ಕಾಲ ಮಾಡಿದ ಕ್ರಾಸ್-ಕಂಪನಿ ಸಂಶೋಧನೆಯ ಫಲವಾಗಿದೆ. 2008 ರಲ್ಲಿ ರೆಡ್ಮಂಡ್‌ ಮತ್ತು ಕೇಂಬ್ರಿಡ್ಜ್‌ನಲ್ಲಿನ ಮೈಕ್ರೋಸಾಫ್ಟ್ ಸಂಶೋಧನೆ ತಂಡಗಳು ಮತ್ತು ಮೈಕ್ರೋಸಾಫ್ಟ್ ಹಾರ್ಡ್‌ವೇರ್‌ನ ಅಪ್ಲೈಡ್ ಸೈನ್ಸಸ್ ಗ್ರೂಪ್‌ನ ಜಂಟಿ ಪ್ರಯತ್ನದ ಮೌಸ್ 2.0 ಯೋಜನೆಯಿಂದ ಉತ್ಪನ್ನವು ರೂಪುಗೊಂಡಿತು. ಮೌಸ್‌ನ ಪ್ರಮಾಣಿತ ಸಾಮರ್ಥ್ಯಗಳನ್ನು ಮಲ್ಟಿ-ಟಚ್ ಸೆನ್ಸಿಂಗ್‌ನೊಂದಿಗೆ ಸಂಯೋಜಿಸುವುದು ಅವರ ಗುರಿಯಾಗಿತ್ತು.


ತಂಡವು ಮೊದಲಿಗೆ ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಬಹು ವಿಧದ ತಂತ್ರಜ್ಞಾನಗಳು ಮತ್ತು ಸಂವಹನ ಮಾದರಿಗಳನ್ನು ಅನ್ವೇಷಿಸಿತು. ಅಂತಿಮವಾಗಿ ಕ್ಯಾಮೆರಾ ಆಧಾರಿತ, ಕೂಡಿಸಿದ, ಅಂದರೆ ಮೂರು ಮೌಸ್ ಸೆನ್ಸರ್‌ಗಳನ್ನು ಒಟ್ಟಿಗೆ ಸೇರಿಸಿದ ಮತ್ತು ಲ್ಯಾಪ್‌ಟಾಪ್‌ನ ಕೆಪ್ಯಾಸಿಟಿವ್ ಹೀಗೆ ವಿಭಿನ್ನ ಪ್ರಕಾರದ ಮಾದರಿಯ ಟಚ್-ಸ್ಕ್ರೀನ್ ಸೆನ್ಸರ್‌ಗಳನ್ನು ಪ್ರತಿನಿಧಿಸುವ ಐದು ವಿಭಿನ್ನ ಸಂಶೋಧನಾ ಪ್ರೋಟೋಟೈಪ್‌ಗಳನ್ನು ಅಂತಿಮಗೊಳಿಸಿದರು. ಅಂತಿಮವಾಗಿ ಎಚ್ಚರಿಕೆಯಿಂದ ಪರಿಗಣಿಸಿ ಕೆಪಾಸಿಟಿವ್ –ಸೆನ್ಸಿಂಗ್ ಮಾದರಿಯನ್ನು ಅಂತಿಮವಾಗಿ ನಿರ್ಧರಿಸಿದರು. ಏಕೆಂದರೆ ಇದು ಬಹು ಪರಿಚಿತ ಮೌಸ್ ಆಕಾರವನ್ನು ಬಿಡದೆಯೇ ಬಹು ಸ್ಪರ್ಶದ ಅನುಭವನ್ನು ನೀಡುತ್ತಿತ್ತು. ಕೈಗಳಿಗೆ ಆರಾಮವನ್ನು ನೀಡುವ ಜೊತೆಗೆ ಎಲ್ಲಾ ಐದು ಬೆರಳುಗಳ ಚಲನೆಗೆ ಸರಿಯಾದ ಮೇಲ್ಮೈ ಒದಗಿಸುವುದನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು.


ತಂಡವು ವ್ಯಾಪಕವಾಗಿ ಬಳಕೆದಾರ ಸಂಶೋಧನೆಯನ್ನು ಕೈಗೊಳ್ಳುವ ಜೊತೆಗೆ ನೂರಾರು ರೂಪ ಮತ್ತು ಮಾದರಿಗಳನ್ನು ಪರೀಕ್ಷಿಸಿತು ಮತ್ತು ಅಂತಿಮವಾಗಿ 23 ಡಿಗ್ರಿ ಜಾರಿಕೆಯ, ಬಳಕೆದಾರರಿಗೆ ಎಲ್ಲಾ ವಿಧವಾದ ಅನುಕೂಲತೆಯನ್ನು ನೀಡುವ ವಿನ್ಯಾಸವನ್ನು ಅಂತಿಮಗೊಳಿಸಿತು.


ಹಲವು ತಿಂಗಳುಗಳ ಕಾಲ, ಅವರು ಸೆನ್ಸರ್ ವಿನ್ಯಾಸ ಮತ್ತು ಟ್ವೀಕ್ ಕಾರ್ಯವನ್ನು ಉತ್ತಮಪಡಿಸುವುದನ್ನು ಮುಂದುವರಿಸಿದರು. ಇದರ ಫಲಿತಾಂಶವೇ ಟಚ್ ಮೌಸ್ ಆಗಿದ್ದು, ಇದು ಪಿಸಿ ಮಾಲೀಕರಿಗೆ ಅವರು ಹೆಚ್ಚಿಗೆ ಬಳಸುವ ವಿಂಡೋಸ್ 7 ನ ವೈಶಿಷ್ಟ್ಯಗಳನ್ನು ಸ್ವಾಭಾವಿಕ ಭಂಗಿಯಲ್ಲಿ ಪ್ರವೇಶಿಸಲು ಅನುಕೂಲತೆಯನ್ನು ಒದಗಿಸುತ್ತದೆ. ತಂತ್ರಜ್ಞಾನದೊಂದಿಗೆ ಸಂವಹಿಸಲು ಸ್ಪರ್ಶವು ಅತೀ ಜನಪ್ರಿಯ ವಿಧಾನವಾಗುತ್ತಿದೆ, ಆದರೆ ಚಿಕ್ಕ ಕೈ ಬಳಕೆಯ ಸಾಧನಗಳಲ್ಲಿ ಮಾತ್ರ ಹೆಚ್ಚಿಗೆ ಬಳಸಲಾಗುತ್ತಿದೆ. ನೇರ ಸ್ಪರ್ಶ ತಂತ್ರಜ್ಞಾನವು ಕೆಲವು ಸಂಗತಿಗಳಿಗೆ ಉತ್ತಮವಾಗಿದ್ದು, ಇನ್ನೂ ಹಲವುಗಳಿಗೆ ಇಲ್ಲ. ಇದು ಡಿಜಿಟಲ್ ಚಿತ್ರಗಳನ್ನು ಸ್ಕ್ರಾಲ್ ಮಾಡಲು ಮತ್ತು ದಿಢೀರ್ ಚಲಿಸಲು ಆನಂದ ನೀಡಿದರೆ, ಎಕ್ಸೆಲ್‌ನಲ್ಲ ಚಿಕ್ಕ ಸೆಲ್ ಅನ್ನು ಕ್ಲಿಕ್ ಮಾಡಲು ಅಷ್ಟು ಅನುಕೂಲತೆ ಒದಗಿಸುವುದಿಲ್ಲ.


ವಿಂಡೋಸ್ 7 ನ ಕೆಲವೇ ಬಳಕೆದಾರರು ಸ್ಪರ್ಶ ಆಧಾರಿತ ಹಾರ್ಡ್‌ವೇರ್ ಅನ್ನು ಹೊಂದಿದ್ದಾರೆ. ಟಚ್ ಮೌಸ್ ಎನ್ನುವುದು ಮಿಲಿಯಾಂತರ ವಿಂಡೋಸ್ 7 ಬಳಕೆದಾರರಿಗೆ ತಲುಪುವಂತೆ ಮಾಡುವ ಮೈಕ್ರೋಸಾಫ್ಟ್ ಹಾರ್ಡ್‌ವೇರ್ ಪ್ರಯತ್ನವಾಗಿದೆ. ಇತರ ಸಾಧನಗಳೆಂದರೆ ಎಕ್ಸ್‌ಪ್ಲೋರರ್ ಟಚ್ ಸ್, ಆರ್ಕ್ ಟಚ್ ಮೌಸ್, ಮತ್ತು ಸದ್ಯದಲ್ಲೇ ಬಿಡುಗಡೆಯಾಗಲಿರುವ ಟಚ್ ಮೌಸ್ ಆರ್ಟಿಸ್ಟ್ ಆವೃತ್ತಿ.


ಹಲವು ಸ್ಪರ್ಶದ ಪಿಸಿ ಇನ್‌ಪುಟ್ ಸಾಧನಗಳಲ್ಲಿ ಟಚ್ ಮೌಸ್ ಒಂದು ಆಧಾರ ಸ್ತಂಭವಾಗಿದೆ ಮತ್ತು ಇದು ಇನ್ನೂ ಹಲವು ಹೊಸ ವಿನ್ಯಾಸಗಳ ಮುನ್ನುಡಿಯಾಗಿದೆ ಅಷ್ಟೇ.


 

Read More on....