ಮೈಕ್ರೋಸಾಫ್ಟ್ ಆಫೀಸ್ ಟ್ವಿಟರ್
ಮೈಕ್ರೋ ಸಾಫ್ಟ್ ಆಫೀಸ್ ಎಲ್ಲೆಲ್ಲೂ ಸುತ್ತುವರಿದಿದೆ ಎಂದು ಅನಿಸಬಹುದು, ಆದರೆ ವಾಸ್ತವದಲ್ಲಿ ಇದು ಬರಿಯ 22 ವರ್ಷಗಳಿಂದ ಮಾತ್ರವಿದೆ. ಆದರೆ ವರ್ಷಗಳು ಬರಿ 22 ಮಾತ್ರ ಆಗಿದ್ದರೂ, ಇದು ಜನರನ್ನು ಹಲವು ವಾಹಿನಿಗಳ ಮುಖಾಂತರ ತಲುಪಿದೆ. ಇಂತಹ ಹಲವು ವಾಹಿನಿಗಳಲ್ಲಿ ಮೈಕ್ರೋಸಾಫ್ಟ್ ಆಫೀಸ್ ಟ್ವಿಟರ್ ಒಂದಾಗಿದೆ. ಇದನ್ನು ಮೈಕ್ರೋಸಾಫ್ಟ್ ನಿಂದ ಸಕಾಲಿಕವಾದ ಸಂದೇಶಗಳನ್ನು ಪಡೆಯಲು ಬಳಸಲಾಗುತ್ತದೆ ಮತ್ತು ಇದಕ್ಕೆ ಟ್ವಿಟರ್ ಪುಟದಲ್ಲಿ ಸೈನ್ ಅಪ್ ಮಾಡುವ ಅವಶ್ಯಕತೆ ಇದೆ. ಮೈಕ್ರೋಸಾಫ್ಟ್ ಆಫೀಸ್ ಉತ್ಪನ್ನಗಳ ಬಳಕೆಯ ವೇಳೆಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವುದೇ ಈ ಟ್ವಿಟರ್‌ನ ಪ್ರಧಾನ ಲಕ್ಷಣವಾಗಿದೆ. ಇದರಲ್ಲಿ ಮೈಕ್ರೋಸಾಫ್ಟ್ ಇತ್ತೀಚಿನ ದಿನಗಳಲ್ಲಿ ಅಳವಡಿಸಿಕೊಂಡಿರುವ ಹೊಸ ವ್ಯೂಹಗಳ ಕುರಿತು ಲೇಖನಗಳಿವೆ.
: http://blogs.office.com/
ಮೈಕ್ರೋಸಾಫ್ಟ್ ನಿಂದ ಬಿಡುಗಡೆಯಾಗುವ ಹೊಚ್ಚ ಹೊಸ ಉತ್ಪನ್ನಗಳ ಪಟ್ಟಿಯ ಪ್ರದರ್ಶನ ಕವಾಟ ಇದರ ಇನ್ನೊಂದು ಲಕ್ಷಣವಾಗಿದೆ. ಈ ಟ್ವಿಟರ್‌ನಲ್ಲಿರುವ ಕೆಲವು ಲೇಖನಗಳೆಂದರೆ :-
ಆಫೀಸ್ 365ನ ಉತ್ಪನ್ನದ ಪ್ರದರ್ಶನ ಕವಾಟದ ಕೊಂಡಿಯನ್ನು ಕ್ಲಿಕ್ಕಿಸಿದಾಗ ಇದು ನಮ್ಮನ್ನು ಆಫೀಸ್ 365ನ ಅಧಿಕೃತ ಪುಟಕ್ಕೆ ಕರೆದೊಯ್ಯುತ್ತದೆ. ಈ ಪುಟವು ಆಫೀಸ್ 365ನ ಗುಣಲಕ್ಷಣಗಳನ್ನು ವಿಸ್ತೃತವಾಗಿ ವಿವರಿಸುತ್ತದೆ. ಅದರ ಅಗತ್ಯಗಳು, ಅದರ ಬಳಕೆ, ಲಭ್ಯವಿರುವ ಆವೃತ್ತಿಗಳು, ಆಹ್ವಾನಗಳು, ಸ್ಥಾಪಿಸಿಕೊಳ್ಳಲು ಬೇಕಿರುವ ಯಂತ್ರದದ ಅವಶ್ಯಕತೆ, ಬೇಟಾ ಆವೃತ್ತಿ ಇತ್ಯಾದಿಗಳನ್ನು ವಿವರಿಸುತ್ತದೆ.
ಪವರ್ ಪಾಯಿಂಟ್ ಸುಳಿವು, ಸಲಹೆಗಳು ಮತ್ತು ಚಮತ್ಕಾರಗಳೂ ಸಹ ಆಫೀಸ್ ಟ್ವಿಟರ್‌ನಲ್ಲಿ ಲಭ್ಯವಿದೆ. ನಿಮ್ಮ ಪ್ರಸ್ತುತಿಗಳಲ್ಲಿ ದೃಶ್ಯಗಳನ್ನು ನೀಡುವುದು, ನಿರತವಾಗಿಸುವುದು ಮತ್ತು ಸ್ಮರಣೀಯವಾಗಿಸುವುದು ಇದರ ಪ್ರಮುಖವಾದ ಗುರಿಯಾಗಿದೆ. ಇದಲ್ಲದೆ ಡೈನಾಮಿಕ್ ಪ್ರಸ್ತುತಿಗಳನ್ನು ಸೃಷ್ಟಿಸುವುದು, ಮತ್ತು ಇತರರು ಅವರ ವೀಕ್ಷಕರಿಗೆ ತಮ್ಮ ವಿಷಯಗಳನ್ನು ಆಸಕ್ತಿಕರವಾಗಿ ಕುತೂಹಲಕರವಾಗಿ ವಿನ್ಯಾಸಗೊಳಿಸುವ ಸಲುವಾಗಿ ಮಾಡುವ ಅನ್ವೇಷಣೆಯನ್ನು ಸಹ ನಿಮಗೆ ತೋರಿಸುವುದು ಅದರ ಗುರಿಯಾಗಿದೆ.
ಎಕ್ಸೆಲ್ ಶಾರ್ಟ್ ಕಟ್ ಕೀಲಿಗಳೊಂದಿಗಿನ ಲೇಖನವನ್ನು ಪ್ರಸ್ತುತ ಪಡಿಸಲಾಗಿದ್ದು, ಇದು ಮೈಕ್ರೋಸಾಫ್ಟ್ ಎಕ್ಸೆಲ್ ಬಳಕೆದಾರರಿಗೆ ಒಂದು ವರಪ್ರಸಾದವಾಗಿದೆ. ಎಂಎಸ್ ಎಕ್ಸೆಲ್‌ಗೆ ಸೇರ್ಪಡೆಯಾಗಿರುವ ಪವರ್ ಪೈವಟ್ ಕುರಿತ ಲೇಖನ ಒಂದು ಇದ್ದು ಇದರ ಗುಣಲಕ್ಷಣಗಳನ್ನು ವಿಸ್ತೃತವಾಗಿ ಲೇಖನದಲ್ಲಿ ನೀಡಲಾಗಿದೆ.
ಮೈಕ್ರೋಸಾಫ್ಟ್ ಔಟ್ ಲುಕ್ ಗೆ ಸಂಬಂಧಿಸಿದ ವಿಷಯಗಳ ಕುರಿತ ಲೇಖನಗಳೂ ಇವೆ. ಅಂದರೆ, ಔಟ್ ಲುಕ್ ಎಕ್ಸ್ ಪ್ರೆಸ್ ನಿಂದ ಕಳುಹಿಸಲಾಗಿರುವ ಮತ್ತು ಸ್ವಯಂಚಾಲಿತ ಸಂದೇಶ ಪ್ರತಿಸ್ಪಂದನ ಸ್ಪಷ್ಟೀಕರಣಗಳಂತಹ ಸಂದೇಶಗಳನ್ನು ಮರಳಿ ತರುವ ಕುರಿತಾದ ಲೇಖನಗಳಿವೆ. ಈ ಸೊಲ್ಯುಶನ್ ಸಂಪೂರ್ಣ ಸಜ್ಜಾದಂತೆ ಲಭ್ಯವಿದೆ.
ಈ ಪುಟದಲ್ಲಿರುವ ಹೆಚ್ಚಿನ ಟ್ವಿಟರ್ ಕೊಂಡಿಗಳು ಮೈಕ್ರೋಸಾಫ್ಟ್ ಅಧಿಕೃತ ಪುಟಕ್ಕೆ ದಾರಿತೋರುತ್ತದೆ. ಈ ಟ್ವಿಟರ್, ಅಧಿಕೃತ ಮೈಕ್ರೋಸಾಫ್ಟ್ ವೆಬ್ ಸೈಟ್ ನಿಂದ ಅಗತ್ಯವಾದ ತಾಂತ್ರಿಕ ವಿವರಗಳ ಫಲವನ್ನು ಉಣ್ಣಲು ಮತ್ತು ಆ ಪುಟಕ್ಕೆ ಧುಮುಕಿ ಬೀಳಲು ಇರುವ ಹತ್ತಿರದ ಹಾದಿ ಈ ಟ್ವಿಟರ್ ಎಂದು ಹೇಳಬಹುದಾಗಿದೆ.