Visual Studio Tools for Applications
ವಿಶುವಲ್ ಸ್ಟುಡಿಯೋ ಟೂಲ್ಸ್ ಫಾರ್ ಅಪ್ಲಿಕೇಶನ್ಸ್
ಮೈಕ್ರೋಸಾಫ್ಟ್ ವಿಶುವಲ್ ಸ್ಟುಡಿಯೋ ಟೂಲ್ಸ್ ಫಾರ್ ಅಪ್ಲಿಕೇಶನ್ಸ್ 2.0 ಈಗ ನೀವು ಹೊಂದಿರುವ ಅಪ್ಲಿಕೇಶನ್‌ಗಳನ್ನು ಸೌಲಭ್ಯಪೂರಿತವನ್ನಾಗಿಸುತ್ತದೆ. ಈಗ ವಿಶುವಲ್ ಬೇಸಿಕ್ ಮತ್ತು ವಿಶುವಲ್ ಸಿ# ಬಳಸುತ್ತಿರುವವರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುತ್ತದೆ.
ಬಳಕೆದಾರರು ಐಡಿಇಯನ್ನು ಬಳಸಿ ಅದಕ್ಕೆ ಇನ್ನಷ್ಟು ಸೇರ್ಪಡೆಗಳನ್ನು ಮಾಡುವ ಮೂಲಕ ಈ ಅಪ್ಲಿಕೇಶನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಿದೆ. ಇದನ್ನು ಅಳವಡಿಸಿಕೊಳ್ಳಲು ನೀವು ರಿಜಿಸ್ಟ್ರೀ ವ್ಯವಸ್ಥೆಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಹಿಂದಿನ ಅಪ್ಲಿಕೇಶನ್‌ನಲ್ಲಿ ಹೊಸ ಸೇರ್ಪಡೆಗಳನ್ನು ಮಾಡಿಕೊಂಡು ಅದನ್ನು ಅಭಿವೃದ್ಧಿ ಪಡಿಸಿಕೊಂಡ ಬಳಕೆದಾರರು ಅವುಗಳನ್ನು ಹೊಸ ಆವೃತ್ತಿಯ ಅಪ್ಲಿಕೇಶನ್‌ಗಳಿಗೆ ಸ್ಥಳಾಂತರಿಸಲು ಅವಕಾಶವಿದೆ. ಗ್ರಾಹಕ ಕೇಂದ್ರಿತ ಸಮಗ್ರ ಅಭಿವೃದ್ಧಿ ಪರಿಸರವನ್ನು ನಿರ್ಮಿಸಿಕೊಂಡವರು ವಿಶುವಲ್ ಸ್ಟುಡಿಯೋ ಐಡಿಇಯೊಳಗೂ ಅದನ್ನು ಅಳವಡಿಸಿಕೊಳ್ಳಬಹುದು. ಇದರಿಂದ ಅವರಿಗೆ ತಮ್ಮ ಅಗತ್ಯಗಳಿಗೆ ತಕ್ಕಂತೆ ಅಪ್ಲಿಕೇಶನ್‌ನ ಕಾರ್ಯಕ್ಷಮತೆಯನ್ನು ವಿಸ್ತರಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಆತಿಥೇಯ ಅಪ್ಲಿಕೇಶನ್‌ಗೆ ಹಿಂದಿನ ಆವೃತ್ತಿಗೆ ಹೊಸ ಸೇರ್ಪಡೆಗಳನ್ನು ಮಾಡಿದವರು ಅವುಗಳನ್ನು ಬಳಸಲು ಹೊಸ ಆವೃತ್ತಿಗೆ ಅವುಗಳನ್ನು ಸ್ಥಳಾಂತರಿಸಬೇಕು. ಹೆಚ್ಟುವರಿ ಸೇರ್ಪಡೆಗಳನ್ನು ಹೊಸದಾಗಿ ಅಪ್‌ಡೇಟ್ ಮಾಡಿಕೊಂಡ ಆತಿಥೇಯ ಅಪ್ಲಿಕೇಶನ್‌ನಲ್ಲಿ ಅಳವಡಿಸುವುದು ಸಾಧ್ಯವಾಗುತ್ತದೆ.
ಹೆಚ್ಚುವರಿ ಸೇರ್ಪಡೆಗಳನ್ನು ಸ್ಥಳಾಂತರಿಸಲು ಅನುಸರಿಸುವ ಪ್ರಕ್ರಿಯೆ ಹೊಸ ಕ್ಲಾಸ್ ರಚನೆ ಹಾಗೂ ಎರಡು ನೋಂದಣಿಗಳಲ್ಲಿ ನಮೂದಿಸುವುದನ್ನು ಒಳಗೊಂಡಿದೆ. ಇಲ್ಲಿ ಕ್ಲಾಸ್ ಹೊಸ ಯೋಜನೆ ರಚನೆಗಳು ಮತ್ತು ಸುಧಾರಿತ ಅಸೆಂಬ್ಲಿ ರೆಫರೆನ್ಸಿಗೆ ಸಂಬಂಧಿಸಿದಂತೆ ವಿಶುವಲ್ ಸ್ಟುಡಿಯೋದ ಸಲಕರಣೆಗಳ ವಿವರವನ್ನು ಒದಗಿಸುತ್ತದೆ.
ಅಭಿವೃದ್ಧಿ ಪಡಿಸುವ ಕಂಪ್ಯೂಟರ್‌ನಲ್ಲಿ ಮೊದಲು ನವು ನಿಮ್ಮ ಆತಿಥೇಯ ಅಪ್ಲಿಕೇಶನ್‌ಗಳನ್ನು ನೊಂದಾಯಿಸಿದ ಬಳಿಕವೇ ನಿಮಗೆ ಪ್ರೊಜೆಕ್ಟ್ ಟೆಂಪ್ಲೇಟ್‌ಗಳನ್ನು ರೂಪಿಸಲು ಹಾಗೂ ಆ ಬಳಿಕ ಅವುಗಳನ್ನು ಸಮಗ್ರ ಅಭಿವೃದ್ಧಿ ಪರಿಸರ(ಐಡಿಇ)ದಲ್ಲಿ ಬಳಸಲು ಸಾಧ್ಯವಾಗುತ್ತದೆ. ಆತಿಥೇಯ ಅಪ್ಲಿಕೇಶನ್ ನೋಂದಾಯಿಸಲು ನೀವು ನಿಮ್ಮ ಆತಿಥೇಯ ಅಪ್ಲಿಕೇಶನ್‌ನ ಮಾಹಿತಿ ಒದಗಿಸುವ ಹಲವು ನೋಂದಣಿ ಕೀಗಳನ್ನು ರೂಪಿಸಬಹುದು.
ನಿಮ್ಮ ಆತಿಥೇಯ ಅಂದರೆ, ಈ ಮೊದಲು ಇರುವ ಅಪ್ಲಿಕೇಶನ್‌ನೊಂದಿಗೆ ವಿಶುವಲ್ ಸ್ಟುಡಿಯೋ ಸಲಕರಣೆಗಳನ್ನು ಸೇರಿಸಿದಾಗ ವಿಂಡೋಸ್ ವಿಶುವಲ್ ಸ್ಟುಡಿಯೋ ಟೂಲ್ಸ್ ಫಾರ್ ಅಪ್ಲಿಕೇಶನ್ಸ್ ತಂತ್ರಾಂಶ ಸ್ಥಾಪಕ ವ್ಯವಸ್ಥೆಯು ಅಲ್ಲಿ ವಿಶುವಲ್ ಸ್ಟುಡಿಯೋ ಟೂಲ್ಸ್‌ಗಳನ್ನು ಸ್ಥಾಪಿಸಲು ಕೆಲ ದಾಖಲಾತಿ ಹಂತಗಳನ್ನು ರೂಪಿಸುತ್ತದೆ.
ವಿಶುವಲ್ ಸ್ಟುಡಿಯೋ ಟೂಲ್ಸ್ ಫಾರ್ ಅಪ್ಲಿಕೇಶನ್ಸ್ ನಿಮ್ಮ ಈ ಮೊದಲಿನ ಆತಿಥೇಯ ಅಪ್ಲಿಕೇಶನ್ ತಂತ್ರಾಂಶ ಮಾತ್ರ ಅದನ್ನು ಪ್ರತ್ಯೇಕಿಸುವ ತಂತ್ರಾಂಶವನ್ನು ಎರಡು ಪ್ರತ್ಯೇಕ ಘಟಕಗಳಾಗಿ ವಿಭಜಿಸಿ ನೋಂದಣಿಯಲ್ಲಿಡುತ್ತದೆ. ಇಲ್ಲಿ ಸಬ್ ಕೀಗಳ ರಚನೆ ಮಾಡುವ ಜವಾಬ್ದಾರಿ ನಿಮ್ಮದು. ವಿಶುವಲ್ ಸ್ಟುಡಿಯೋ ಟೂಲ್ಸ್ ಫಾರ್ ಅಪ್ಲಿಕೇಶನ್ ತಾನಾಗಿಯೇ ಸ್ವಯಂ ಚಾಲಿತವಾಗಿ ಆತಿಥೇಯ ಕಾಂಟೆಕ್ಟ್ಸ್ ಡ್ರೈವ್ ಅನ್ನು ರಚಿಸುತ್ತದೆ. ನಿಮ್ ಅಪ್ಲಿಕೇಶನ್‌ಗಳನ್ನು ನೋಂದಾಯಿಸಲು ನೀವು ಆತಿಥೇಯ ಐಡಿ ಸಬ್ ಕೀಯನ್ನು 2.0 ಆತಿಥೇಯ ಕೀಯಡಿ ನಿರ್ಮಿಸಬೇಕಾಗುತ್ತದೆ. ಇಲ್ಲಿ ಆತಿಥೇಯ ಐಡಿ ಕೀಯು ನಿಮ್ಮ ಆತಿಥೇಯ ಅಪ್ಲಿಕೇಶನ್ ಮತ್ತು 2.0 ಕೀಯು ಈಗ ನಿಮ್ಮ ಅಪ್ಲಿಕೇಶನ್‌ಗೆ ಸೇರ್ಪಡೆಗೊಳಿಸಿದ ವಿಶುವಲ್ ಸ್ಟುಡಿಯೋ ಟೂಲ್ಸ್‌ನ ಆವೃತ್ತಿಯನ್ನು ಸೂಚಿಸುತ್ತದೆ. ನೀವು ಮೈಕ್ರೋಸಾಫ್ಟ್ ವಿಶುವಲ್ ಸ್ಟುಡಿಯೋ ಟೂಲ್ಸ್ ಫಾರ್ ಅಪ್ಲಿಕೇಶನ್ಸ್ 2.0ನ್ನು ಬೇರೊಂದು ಅಪ್ಲಿಕೇಶನ್ ಜತೆ ಸೇರ್ಪಡೆಗೊಳಿಸಿದಾಗ ನೀವು ಇದರ ಕೀಗೆ 2.0 ಹೆಸರನ್ನು ನೀಡಬೇಕು.