Go Search

What's New in Visual Basic 2010
ವಿಶುವಲ್ ಬೇಸಿಕ್ 2010ನಲ್ಲಿ ಹೊಸತೇನಿದೆ?


ವಿಶುವಲ್ ಬೇಸಿಕ್ ಮೈಕ್ರೋಸಾಫ್ಟ್ನ ಸಿಒಎಂ ಮಾಡೆಲಿಂಗ್ ಪ್ರೋಗ್ರಾಮಿಂಗ್ಗಾಗಿ ತೃತೀಯ ಪೀಳಿಗೆಯ ಘಟನಾ ಚಲನಶೀಲ ಪ್ರೋಗ್ರಾಮಿಂಗ್ ಲಾಂಗ್ವೇಜ್ ಹಾಗೂ ಮೈಕ್ರೋಸಾಫ್ಟ್ನಿಂದ ಅದರ COM ಪ್ರೋಗ್ರಾಮಿಂಗ್ ಮಾದರಿಗೆ  ಸಮಗ್ರ ಅಭಿವೃದ್ಧಿ ಪರಿಸರವಾಗಿದೆ. ಇದರ ದೃಶ್ಯಸಂಕೇತಗಳ ಅಭಿವೃದ್ಧಿ ಲಕ್ಷಣಗಳು ಮತ್ತು ಬೇಸಿಕ್ ಪರಂಪರೆಯಿಂದಾಗಿ ವಿಶುವಲ್ ಬೇಸಿಕನ್ನು ಕಲಿಕೆ ಹಾಗೂ ಪ್ರೋಗ್ರಾಮಿಂಗ್ ಲಾಂಗ್ವೇಜ್ ಬಳಕೆಗೆ ತುಲನಾತ್ಮಕವಾಗಿ ಸರಳವೆಂದು ಪರಿಗಣಿಸಲಾಗಿದೆ.

 

ವಿಶುವಲ್ ಬೇಸಿಕ್ ಮೈಕ್ರೋಸಾಫ್ಟ್ನ ಪ್ರಥಮ ಪ್ರೋಗ್ರಾಮಿಂಗ್ ಲಾಂಗ್ವೇಜ್ ಆಗಿದೆ ಮತ್ತು ಇದು ಇಂದಿಗೂ ಮೈಕ್ರೋಸಾಫ್ಟ್ ಪ್ರೋಗ್ರಾಮ್ಗಳಲ್ಲಿ ಬಳಸುವ ಮುಖ್ಯವಾಹಿನಿಯ ಪ್ರೋಡಕ್ಟ್ಗಳಲ್ಲಿ ಒಂದಾಗಿದೆ. ಗೃಹೋಪಯೋಗಿ ಕಡತಗಳ ಸಿಸ್ಟಂನಿಂದ ಹಿಡಿದು ಉದ್ದಿಮೆಗಳ ಪ್ರಧಾನ ಅಪ್ಲಿಕೇಶನ್ಗಳನ್ನು ಸಹ ವಿಶುವಲ್ ಬೇಸಿಕ್ನಲ್ಲಿ ಬರೆಯಲಾಗುತ್ತದೆ.

 

ವಿಶುವಲ್ ಬೇಸಿಕ್ 2010
ವಿಶುವಲ್ ಬೇಸಿಕ್ 2010 ವಿಶುವಲ್ ಬೇಸಿಕ್ ಲಾಂಗ್ವೇಜ್ ಮತ್ತು ಕೋಡ್ ಎಡಿಟರ್ನಲ್ಲಿರುವ ಹೊಸ ಗುಣಲಕ್ಷಣಗಳನ್ನು ವಿವರಿಸುತ್ತದೆ. ಇದರಲ್ಲಿ ಇಂಪ್ಲಿಸಿಟ್ ಲೈನ್ ಮುಂದುವರಿಕೆ, ಸ್ವಯಂ ಅಳವಡಿಸಲಾಗಿರುವ ಪ್ರಾಪರ್ಟಿಗಳು, ಸಂಗ್ರಹಿತ ಆರಂಭಿಕರು ಮತ್ತು ಇನ್ನಷ್ಟು ಅವಕಾಶಗಳು ಲಭ್ಯವಿದೆ. ಅವುಳೆಂದರೆ -

 

ಸ್ವಯಂ ಅಳವಡಿಸಲಾಗಿರುವ ಪ್ರಾಪರ್ಟಿಗಳು 
ಸ್ವಯಂ ಅಳವಡಿತ ಪ್ರಾಪರ್ಟಿಗಳು ಒಂದು ಮೊಟಕುಗೊಳಿಸಲಾದ ಪದವಿನ್ಯಾಸವನ್ನು ಒದಗಿಸುತ್ತದೆ. ಇದು ಪ್ರಾಪರ್ಟಿಯನ್ನು ಪಡೆಯಲು ಮತ್ತು ಸಜ್ಜುಗೊಳಿಸಲು ಸಂಕೇತವನ್ನು ಬರೆಯದೆಯೇ ಕ್ಷಿಪ್ರವಾಗಿ ವರ್ಗ ಒಂದರ ಪ್ರಾಪರ್ಟಿಯ ಗುರುತಿಸುವಿಕೆಯನ್ನು ಸಮರ್ಥವಾಗಿಸುತ್ತದೆ.

 

ಇನಿಶಲೈಸರ್ಗಳ ಸಂಗ್ರಹ
ಸಂಗ್ರಹಿತ ಆರಂಭಿಕ ಅಕ್ಷರಗಳು ಒಂದು ಹೃಸ್ವಗೊಳಿಸಲ್ಪಟ್ಟ ಪದಸಂಗ್ರಹವನ್ನ ಒದಗಿಸುತ್ತದೆ. ಇದು ಆರಂಭಿಕ ಅಕ್ಷರಗಳ ಗೊಂಚಲಿನ ಮೌಲ್ಯದ ಸಂಗ್ರಹವನ್ನು ಸೃಷ್ಟಿಸಲು ಮತ್ತು ಅದನ್ನು ಜನಪ್ರಿಯವಾಗಿಸುವ(populate) ಸಾಮರ್ಥ್ಯವನ್ನು ಒದಗಿಸುತ್ತದೆ. ಗೊತ್ತಿರುವಂತಹ ಮೌಲ್ಯಗಳಿಂದ ನೀವು ಸಂಗ್ರಹವನ್ನು ತಯಾರಿಸುವ ವೇಳೆಗೆ ಮೊದಲ ಅಕ್ಷರಗಳ  ಸಂಗ್ರಹವು ಉಪಯುಕ್ತವಾಗಿದೆ. ಉದಾಹರಣೆಗೆ ಹೇಳುವುದಾದರೆ, ಮೆನು ಆಯ್ಕೆಗಳ ಪಟ್ಟಿ ಅಥವಾ ವರ್ಗಗಳು.

 

ಇಂಪ್ಲಿಸಿಟ್ ಲೈನ್ ಕಂಟಿನ್ಯೂವೇಶನ್
ಹಲವು ಪ್ರಕರಣಗಳಲ್ಲಿ, ಇಂಪ್ಲಿಸಿಟ್ ಲೈನ್ ಕಂಟಿನ್ಯೂವೇಶನ್ ನಿಮಗೆ ನಂತರದ ಕ್ರಮಾನುಗತ ಗೆರೆಯಲ್ಲಿ ಹೇಳಿಕೆಯನ್ನು ಅಡಿಗೆರೆ(_) ಇಲ್ಲದೆಯೇ ಮುಂದುವರಿಸುವ ಸಾಮರ್ಥ್ಯ ನೀಡುತ್ತದೆ.

ಮಲ್ಟಿಲೈನ್ ಲಂಬ್ಡ ಎಕ್ಸ್ಪ್ರೆಶನ್ಗಳು ಮತ್ತು ಸಬ್ರುಟಿನ್ಗಳು
ಮಲ್ಟಿಲೈನ್ ಲಂಬ್ಡ ಕಾರ್ಯಗಳು ಮತ್ತು ಸಬ್ ರುಟಿನ್ಗಳಿಗೆ ಹೆಚ್ಚುವರಿಯಾಗಿ ಲಂಬ್ಡ ಎಕ್ಸ್ಪ್ರೆಶನ್ ಬೆಂಬಲವನ್ನು ವಿಸ್ತರಿಸಿವೆ.

 

ಲಾಂಗ್ವೆಜ್ ಆವೃತ್ತಿಯನ್ನು ಖಚಿತ ಪಡಿಸಲು ಹೊಸ ಕಮಾಂಡ್ ಲೈನ್ ಆಯ್ಕೆ
ಭಾಷಾ ಆವೃತ್ತಿ ಕಮಾಂಡ್ ಲೈನ್ ಆಯ್ಕೆಯು, ವಿಶುವಲ್ ಬೇಸಿಕ್ನ ಖಚಿತ ಪಡಿಸಿರುವ ಆವೃತ್ತಿಯಲ್ಲಿ ಯೋಗ್ಯವುಳ್ಳ ವಾಕ್ಯವನ್ನು ಮಾತ್ರ ಸ್ವೀಕರಿಸಲು ಅನುಸರಿಸುತ್ತದೆ.

 

ಟೈಪ್ ಈಕ್ವಲೆನ್ಸ್ ಸಪೋರ್ಟ್
ಪ್ರೈಮರಿ ಇಂಟರೋಪ್ ಅಸ್ಸೆಂಬ್ಲಿಯಿಂದ(PIA) ಆಮದು ಮಾಡಲಾದ ಟೈಪ್ ಇನ್ಫಾರ್ಮೇಶನ್ ಬದಲಿಗೆ, ಟೈಪ್ ಇನ್ಫಾರ್ಮೇಶನ್ ಒಳಗೊಂಡಿರುವ (ಎಂಬೆಡೆಡ್) ಅಪ್ಲಿಕೇಶನ್ ಅನ್ನು ನೀವೀಗ ನಿಯೋಜಿಸಬಹುದು. ಇದರಿಂದಾಗಿ ನಿಮ್ಮ ಅಪ್ಲಿಕೇಶನ್ ಟೈಪ್ಗಳನ್ನು ರನ್ಟೈಮ್ ವೇಳೆಗೆ ರನ್ ಟೈಮ್ ಅಸ್ಸೆಂಬ್ಲಿಯ ಪರಾಮರ್ಶೆ ಇಲ್ಲದೆಯೇ ಬಳಸಬಹುದಾಗಿದೆ. ರನ್ ಟೈಮ್ ಅಸ್ಸೆಂಬ್ಲಿಯ ವಿವಿಧ ಆವೃತ್ತಿಗಳು ಪ್ರಕಟವಾದರೆ, ಮರು ಸಂಕಲನವಿಲ್ಲದೆಯೇ ಎಂಬೆಡೆಡ್ ಟೈಪ್ ಮಾಹಿತಿ ಹೊಂದಿರುವ ಅಪ್ಲಿಕೇಶನ್ ವಿವಿಧ ಆವೃತ್ತಿಗಳೊಂದಿಗೆ ಕಾರ್ಯವೆಸಗುತ್ತದೆ.

ಚಾಲನಾ ಬೆಂಬಲ 
ಐರನ್ ಪೈಥಾನ್ ಮತ್ತು ಐರನ್ ರೂಬಿಗಳಂತಹ ನಿರಂತರ ಲಾಂಗ್ವೇಜ್ಗಳಿಂದ ಅಬ್ಜೆಕ್ಟ್ಗಳನ್ನು ಬೈಂಡ್ ಮಾಡುತ್ತದೆ.

 

ಕೋ ವೇರಿಯೆನ್ಸ್ ಮತ್ತು ಕಾಂಟ್ರಾ ವೇರಿಯೆನ್ಸ್ 
ಕೋ ವೇರಿಯೆನ್ಸ್ ನಿಮಗೆ ಜಾತಿವಾಚಕ ಅಳತೆ (ಜೆನರಿಕ್ ಪಾರಾಮೀಟರ್) ನಿರ್ದಿಷ್ಟ ಪಡಿಸಿರುವುದಕ್ಕಿಂತ ಹೆಚ್ಚು ಮೂಲ ರೂಪದಲ್ಲಿ ಬಳಸುವ ಶಕ್ತಿ ನೀಡುತ್ತದೆ. ಆದರೆ ಕಾಂಟ್ರಾ ವೇರಿಯೆನ್ಸ್ ಬಳಸಿದಲ್ಲಿ ಕಡಿಮೆ ಮೂಲರೂಪದ ಬಳಕೆ ಸಾಧ್ಯ. ಇದು ಪರಿವರ್ತಿತ ಇಂಟರ್ಫೇಸ್ಗಳನ್ನು ಅಳವಡಿಸುವ ವರ್ಗಗಳ ಧ್ವನಿತ ಸಂಭಾಷಣೆಗಳಿಗೆ ಅನುವು ನೀಡುತ್ತದೆ ಮತ್ತು ಪರಿವರ್ತಿತ ಡೆಲಿಗೇಟ್ ಟೈಪ್ಗಳಿಗೆ ಹೊಂದುವ ವಿಧಾನದ ಸಹಿಗಳಿಗೆ ಹೆಚ್ಚು ನಮ್ಯತೆಯನ್ನು ಒದಗಿಸುತ್ತದೆ. ನೀವು ಪರಿವರ್ತಿತ ಇಂಟರ್ಫೇಸ್ಗಳು, ಡೆಲಿಗೇಟ್ಗಳನ್ನು ಹೊಸ ಇನ್ ಮತ್ತು ಔಟ್ ಲಾಂಗ್ವೇಜ್ ಕೀವರ್ಡ್ಗಳನ್ನು ಬಳಸುವ ಮೂಲಕ ಸೃಷ್ಟಿಸಬಹುದಾಗಿದೆ. ಡಾಟ್ ನೆಟ್ ಫ್ರೇಮ್ವರ್ಕ್ ಸಹ ಹಲವಾರು ಅಸ್ತಿತ್ವದಲ್ಲಿರುವ ಜಾತಿವಾಚಕ ಇಂಟರ್ಫೇಸ್ಗಳು ಮತ್ತು ಡೆಲಿಗೇಟ್ಗಳಿಗೆ ರೂಪಾಂತರಿತ ಬೆಂಬಲ ನೀಡುತ್ತದೆ. ಇವುಗಳಲ್ಲಿ IEnumerable(Of T) ಇಂಟರ್ಫೇಸ್ ಮತ್ತು Func(Of TResult) ಮತ್ತು Action(Of T) ಡೆಲಿಗೇಟ್ಗಳು ಸೇರಿವೆ.

Read More on....

This site uses Unicode and Open Type fonts for Indic Languages. Powered by Microsoft SharePoint Server.
©2013 Microsoft Corporation. All rights reserved.