ಮೈಕ್ರೋಸಾಫ್ಟ್ ವಿಂಡೋಸ್ 8.0
ಸಂಪೂರ್ಣ ವಿಶ್ವವು ತಂತ್ರಜ್ಞಾನದ ಬದಲಾವಣೆಯನ್ನು ನಿರೀಕ್ಷಿಸುತ್ತಿದೆ. ಎಲ್ಲಾ ಕಾರ್ಪೊರೇಟ್ ಮತ್ತು ತಂತ್ರಜ್ಞರು ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಗಾಗಿ ಎದುರು ನೋಡುತ್ತಾರೆ. ಇದು ಮೈಕ್ರೋಸಾಫ್ಟ್ ಕಾರ್ಪೊರೇಷನ್ ಮೂಲಕ ಹೊರ ಹೊಮ್ಮಿದೆ. ತಾತ್ಕಾಲಿಕವಾಗಿ “ವಿಂಡೋಸ್ 8.0” ಎಂದು ಕರೆಯಲಾಗುವ ಮತ್ತೊಂದು ಓಎಸ್ ಆವೃತ್ತಿಯನ್ನು ಮೈಕ್ರೋಸಾಫ್ಟ್ ಕಾರ್ಪೊರೇಷನ್ ಬಿಡುಗಡೆ ಮಾಡಬಹುದಾಗಿದೆ.
ಪಾಲುದಾರರು ಹೊಸ ಬಳಕೆದಾರರ ಅನುಭವದ ಲಾಭವನ್ನು ಪಡೆಯುವ ಸಾಧನಗಳನ್ನು ನಿರ್ಮಿಸಲು ಸಹಾಯಕವಾಗುವಂತೆ, ಆಂತರಿಕವಾಗಿ “ವಿಂಡೋಸ್ 8” ಎಂದು ಕೋಡ್-ಹೆಸರು ಮಾಡಿದ ವಿಂಡೋಸ್‌ನ ಮುಂದಿನ ಆವೃತ್ತಿಯನ್ನು ತನ್ನ ಹಾರ್‌್ಾವೇರ್ ಪಾಲುದಾರರಿಗೆ ಮೈಕ್ರೋಸಾಫ್ಟ್ ಕಾರ್ಪ್ ತೋರಿಸಿದೆ. ಇಂದು ವಿಂಡೋಸ್‌ನಿಂದ ಜನರು ನಿರೀಕ್ಷಿಸುವ ಅನುಕೂಲತೆ, ಸಂಪರ್ಕ ಮತ್ತು ವಿದ್ಯುತ್ ಸಾಮರ್ಥ್ಯವನ್ನು ನೀಡುವುದರ ಜೊತೆಗೆ ಟ್ಯಾಬ್ಲೆಟ್‌ಗಳನ್ನು ಒಳಗೊಂಡು ಹೊಸ ಸ್ಪರ್ಶ-ಕೇಂದ್ರೀತ ಹಾರ್ಡ್‌ವೇರ್‌ಗೆ “ವಿಂಡೋಸ್ 8” ಅನ್ನು ಹೇಗೆ ಆಪ್ಟಿಮೈಸ್ ಮಾಡಬಹುದೆಂದು ಮೈಕ್ರೋಸಾಫ್ಟ್ ಪ್ರದರ್ಶಿಸಿದೆ.
ಮೊದಲಿನ ಹಲವಾರು ಪ್ರೋಟೋಟೈಪ್‌ಗಳು ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಚಾಲನೆ ಮಾಡುತ್ತಿರುವುದನ್ನು ತೋರಿಸುವುದರೊಂದಿಗೆ, x86 ಮತ್ತು ಎಆರ್‌ಎಮ್-ಆಧಾರಿತ ಹೀಗೆ ಎರಡೂ ವಿನ್ಯಾಸದಾದ್ಯಂತ ಹೊಸ ಆಪರೇಟಿಂಗ್ ಸಿಸ್ಟಮ್‌ನ ಸಾಮರ್ಥ್ಯವನ್ನು ಸಹ ತಾಂತ್ರಿಕ ಪ್ರದರ್ಶನವು ಎದ್ದು ತೋರಿಸಿತು, ಮೈಕ್ರೋಸಾಫ್ಟ್ ಮತ್ತು ಸಿಲಿಕಾನ್ ಚಿಪ್ ತಯಾರಕರಾದ ಎಎಮ್‌ಡಿ, ಇಂಟೆಲ್ ಕಾರ್ಪೊರೇಶನ್, ಎನ್‌ವಿಐಡಿಐಎ ಕಾರ್ಪೊ, ಕ್ವಾಲ್‌ಕಾಮ್ ಇಂಕ್ ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಇಂಕ್ ಇವರುಗಳು ವಿಂಡೋಸ್‌ನ ಮುಂದಿನ ಆವೃತ್ತಿಯ ಕುರಿತಾಗಿ ಜತೆಯಾಗಿ ಕಾರ್ಯನಿರ್ವಹಿಸುವ ಬಗ್ಗೆ ಜನವರಿಯಲ್ಲಿ ಯೋಜನೆಗಳನ್ನು ಪ್ರಾರಂಭಿಕವಾಗಿ ಘೋಷಿಸಿದರು.
ಬಳಕೆದಾರರು ಪಿಸಿ ಅನ್ನು ಆನ್ ಮಾಡಿದ ಸಮಯದಿಂದ ಹಿಡಿದು ಬಳಕೆದಾರರು ತಾವು ತಿಳಿದಿರುವ ಅಪ್ಲಿಕೇಶನ್‌ಗಳೊಂದಿಗೆ ಹೇಗೆ ಸಂವಹನ ಮಾಡುತ್ತಾರೆ ಎಂಬಲ್ಲಿಯವರೆಗೆ “ವಿಂಡೋಸ್ 8” ಅನ್ನು ಬಳಕೆದಾರರ ಅನುಭವವನ್ನು ಸಾಧನದ ಸ್ವಾಭಾವಿಕ ವಿಸ್ತರಣೆಯಾಗಿ ಮಾಡುವುದು ಮೈಕ್ರೋಸಾಫ್ಟ್‌ನ ಗುರಿಯಾಗಿದೆ.
ವಿಂಡೋಸ್ 95 ಅವಧಿಯಿಂದ ಮೈಕ್ರೋಸಾಫ್ಟ್ ಪ್ರಯತ್ನಿಸಿದ ವಿಂಡೋಸ್ ವಿನ್ಯಾಸದಲ್ಲಿ ಮೂಲಭೂತ ಬದಲಾವಣೆಯನ್ನು ಇದು ಪ್ರತಿನಿಧಿಸುತ್ತದೆ ಜೊತೆಗೆ ಈ ಮೂಲಕ ಹೊಸ ಪಿಸಿ ವಿನ್ಯಾಸಗಳೊಂದಿಗೆ ನಾವಿನ್ಯತೆಯನ್ನು ಕಂಡುಕೊಳ್ಳಲು ತನ್ನ ಹಾರ್ಡ್‌ವೇರ್ ಪಾಲುದಾರರಿಗೆ ಭಾರಿ ಅವಕಾಶವನ್ನು ಕಲ್ಪಿಸುತ್ತದೆ,
ನಿಯಂತ್ರಣವು ಸ್ವಾಭಾವಿಕವಾಗಿ ಸಾಧನದ ಅನುಭವಕ್ಕೆ ಹೊಂದಿಕೊಳ್ಳುವುದರೊಂದಿಗೆ, ಅಪ್ಲಿಕೇಶನ್‌ಗಳು “ವಿಂಡೋಸ್ 8” ರಲ್ಲಿ ಹೇಗೆ ಚಾಲನೆಯಾಗುತ್ತವೆ ಎಂಬುದರವರೆಗೆ ಹೊಸ ಬಳಕೆದಾರನ ಅನುಭವವು ವಿಸ್ತಾರವಾಗುತ್ತದೆ. ಡೆವಲಪರ್‌ಗಳು ಹಾಗೆಯೇ HTML5 ಮತ್ತು ಜಾವಾಸ್ಕ್ರಿಪ್ಟ್‌ನಂತಹ ಸಾಮಾನ್ಯ ವೆಬ್ ತಂತ್ರಜ್ಞಾನಗಳನ್ನು ಪಿಸಿ ಗೆ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಬಳಸಲು ಸಾಧ್ಯವಾಗುತ್ತದೆ, ಈ ಮೂಲಕ ಏಕೀಕರಣ ಮತ್ತು ಸ್ವೀಕರಿಸುವಿಕೆಯನ್ನು ಸುಲಭಗೊಳಿಸುತ್ತದೆ.
ಹೊಸ ಆಪರೇಟಿಂಗ್ ಸಿಸ್ಟಮ್‌ಗೆ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ಸಹಾಯ ಮಾಡಲು, ತನ್ನ ಹೊಸ ಡೆವಲಪರ್ ಕಾನ್ಫರೆನ್ಸ್ ಆದ ಬಿಲ್ಡ್ ಗೆ ನೋಂದಣಿಯನ್ನು ವಿಧ್ಯುಕ್ತವಾಗಿ ಮೈಕ್ರೋಸಾಫ್ಟ್ ಪ್ರಾರಂಭಿಸಿದೆ.