ವಿಂಡೋಸ್ ಮೀಡಿಯಾ ಡಾಟ್ ಕಾಮ್


ವಿಂಡೋಸ್‌ಮೀಡಿಯಾ ಡಾಟ್ ಕಾಮ್ (www.windowsmedia.com) ವಿಂಡೋಸ್ ಫಾರ್ಮಾಟ್ ಬಳಕೆಯ ಅಂತರ್ಜಾಲ ಮಾಧ್ಯಮ ಹರಿವಿಗಾಗಿ ಇರುವ ಪೋರ್ಟಲ್. ಸಂಗೀತ, ವೀಡಿಯೋಗಳು, ಚಲನಚಿತ್ರಗಳು, ಟಿವಿ, ಗೇಮ್ಸ್, ಇಂಟರ್ನೆಟ್ ರೇಡಿಯೋ ಹಾಗೂ ಇನ್ನೂ ಅನೇಕವನ್ನು ಇದು ನೀಡುತ್ತದೆ.


ವಿಂಡೋಸ್ ಮೀಡಿಯಾ ಸೆಂಟರ್, ವಿಂಡೋಸ್ ಮೀಡಿಯಾ ಪ್ಲೇಯರ್ ಮತ್ತು ವಿಂಡೋಸ್ ಮೀಡಿಯಾ ಎನ್‌ಕೋಡರ್ ಮತ್ತು ಸರ್ವೀಸ್‌ಗಳನ್ನು ನೀಡುವ  ವೈಶಿಷ್ಠ್ಯಗಳನ್ನು ಇದು ಒಂದು ಮಿತಿಯಲ್ಲಿ ಸಂಯೋಜಿಸುತ್ತದೆ ಎಂದು ಹೇಳಬಹುದು.


ಸಂಗೀತ ಪ್ರೇಮಿಗಳಿಗೆ ವಿಂಡೋಸ್ ಮೀಡಿಯಾ ಕೊಡುಗೆಯಲ್ಲಿ ಬಹಳಷ್ಟು ಇದೆ. ಇದು ಉದ್ಯಮದಲ್ಲಿನ ಇತ್ತೀಚಿನ ಮತ್ತು ಶ್ರೇಷ್ಠವಾದುದನ್ನು ಪಡೆಯಲು ಅನುಕೂಲವಾಗುವಂತೆ ತಿಂಗಳ ಕಲಾವಿದ ಮತ್ತು ಉಚ್ಛ್ರಾಯ ಕಲಾವಿದರ ವಿವರಣೆ ನೀಡುತ್ತದೆ. ನಿಮ್ಮದು ಆಫ್ ಬೀಟ್ ಅಭಿರುಚಿಯಾಗಿದ್ದರೆ, ತಣ್ಣಗಿನ ನೃತ್ಯ ಮತ್ತು ಪಾಪ್ ಸಂಗೀತವೂ ನಿಮಗೆ ಲಭ್ಯ. ವಾರಾಂತ್ಯಗಳಲ್ಲಿ ಚಿಲ್ ಔಟ್ ಆಗಬೇಕೆಂದಿದ್ದರೆ, ಹಿಪ್ ಹಾಪ್ ಮತ್ತು ರಾಕ್ ಆಂಡ್ ಆಲ್ಟ್ ವಿಭಾಗಗಳಿವೆ. ಇಲ್ಲಿ ನಿಮಗೆ ಸಂದರ್ಭಕ್ಕೆ ತಕ್ಕಂತಹ ಸಂಗೀತ ಲಭಿಸುತ್ತದೆ. ಈ ಸಂಗೀತ ಔತಣವನ್ನು ನೀವು ಉಚಿತವಾಗಿ ಡೌನ್‍‌ಲೋಡ್ ಮಾಡಿಕೊಳ್ಳಬಹುದಾಗಿದೆ.


ಬಾಕ್ಸಾಫೀಸಿನಲ್ಲಿ ಯಾವುದು ಹಾಟ್, ಮುಂಬರುವ ಚಿತ್ರಗಳು, ಡಿವಿಡಿಗಳು- ಮುಂತಾದ ವಿವರಗಳಿಗಾಗಿ ಚಿತ್ರಪ್ರೇಮಿಗಳು ಇಲ್ಲಿಗೆ ಭೇಟಿ ನೀಡಬಹುದಾಗಿದೆ.


ನೀವೊಬ್ಬ ಟಿವಿ ಕಾರ್ಯಕ್ರಮಗಳ ಪ್ರೇಮಿಯಾಗಿದ್ದು, ನಿಮ್ಮ ಇಷ್ಟದ ಕಾರ್ಯಕ್ರಮಗಳ ಪಟ್ಟಿ ಬೇಕಿದ್ದರೆ ಟಿವಿ ವಿಭಾಗಕ್ಕೆ ಹೋಗಿ ಬ್ರೌಸ್ ಮಾಡಿ. ಇದಲ್ಲದೆ, ಗೇಮ್ಸ್‌ಗಳು ಲಭ್ಯವಿದೆ. ಇಂಗ್ಲೀಷ್ ಸುಲಲಿತವಿಲ್ಲದವರು ಮತ್ತು ಅಂತರ್ಜಾಲ ರೇಡಿಯೋ ಪ್ರೇಮಿಗಳು ವಿವಿಧ ಚಾನೆಲ್ಲುಗಳಲ್ಲಿ ಕಳೆದು ಹೋಗಬಹುದು.


http://www.windowsmedia.comಗೆ ಭೇಟಿ ನೀಡಿದರೆ ಲೋಡುಗಟ್ಟಲೆ ವಿನೋದ ಮನರಂಜನೆಗೆ ಅಡ್ಡಿ ಇಲ್ಲ.

Read More on....